ಟಾಪ್ ನ್ಯೂಸ್ ಮಲ್ನಾಡ್
– ತೀರ್ಥಹಳ್ಳಿ ತುಂಗಾ ನದಿಯಲ್ಲಿ ತೇಲಿ ಬಂದ ಶವ!
– ಸಾಗರ: ಮನೆ ಮೇಲೆ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಹಾನಿ
– ಶಿವಮೊಗ್ಗ : 4 ಕೆ.ಜಿಗೂ ಹೆಚ್ಚು ಗಾಂಜಾ ವಶ: ಆರೋಪಿಗಳು ಅರೆಸ್ಟ್
– ತೀರ್ಥಹಳ್ಳಿ : ವೈದ್ಯರು ಮಾಡಿದ ಎಡವಟ್ಟಿನಿಂದ ರೋಗಿಗೆ ಕುತ್ತು
– ತೀರ್ಥಹಳ್ಳಿ: ಟರ್ಪನ್ ಟಯಿಲ್ ಕುಡಿದ ಮಗು: ಅಪಾಯದಿಂದ ಪಾರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ತುಂಗಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ 3:30 ರ ಸಮಯದಲ್ಲಿ ಮೃತದೇಹವೊಂದು ತೇಲಿ ಬಂದಿದ್ದು ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದ ಸ್ಥಳೀಯರು ನೋಡಿ ವಿಷಯ ತಿಳಿಸಿದ್ದಾರೆ. ಮೃತದೇಹವನ್ನು ಅಪರಿಚಿತ ಶವ ಎಂದು ಹೇಳಲಾಗಿದ್ದು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಮನೆ ಮೇಲೆ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಹಾನಿ
ಸಾಗರ : ತಾಲೂಕು ತುಮರಿ ಸಮೀಪದ ಕುದರೂರು ಗ್ರಾಮದ ಬೆಳಮಕ್ಕಿ ಯಲ್ಲಿ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ರೈತರೊಬ್ಬರ ಮನೆ ಮೇಲೆ ಮರ ಬಿದ್ದು ಸಾಕಷ್ಟು ಹಾನಿಯಾಗಿದೆ. ಚೌಡ ನಾಯ್ಕ ಅವರ ಮನೆಯ ಮೇಲೆ ಬೃಹತ್ ಗಾತ್ರದ ತೆಂಗಿನಮರ ಬಿದ್ದು ಮನೆಯ ಹೆಂಚುಗಳು ಪುಡಿಯಾಗಿವೆ. ಮರದ ನಾಟ ಮುರಿದಿವೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಮರವನ್ನು ತೆರವು ಮಾಡಲಾಗಿದೆ. ಕುದರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಗಣಪತಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
– ಶಿವಮೊಗ್ಗ : 4 ಕೆ.ಜಿಗೂ ಹೆಚ್ಚು ಗಾಂಜಾ ವಶಕ್ಕೆ ಆರೋಪಿಗಳ ಬಂಧನ
ಶಿವಮೊಗ್ಗ : ಭದ್ರಾವತಿ ಬಿಳಕಿ ಕ್ರಾಸ್ ಹತ್ತಿರ ಟ್ರೈಓವರ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಅವರಿಂದ 4 ಕೆ.ಜಿ 461 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿತರಾದ ಮೊಹಮ್ಮದ್ ಅಕ್ರಂ ಮತ್ತು ಅಬ್ದುಲ್ ರಜಾಕ್ ಅವರೇ ಬಂಧಿತ ಆರೋಪಿಗಳಾಗಿದ್ದು, ಅವರಿಂದ 1,40,000 ರೂಗಳ 4 ಕೆಜಿ 461 ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ.
– ಟರ್ಪನ್ ಟಯಿಲ್ ಕುಡಿದ ಮಗು: ಅಪಾಯದಿಂದ ಪಾರು
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ನಿವಾಸಿ ಒಬ್ಬರ 5 ವರ್ಷದ ಮಗು ನೀರು ಎಂದು ಭಾವಿಸಿ ಹಬ್ಬದ ಬಣ್ಣಕ್ಕೆ ಮಿಕ್ಸ್ ಮಾಡಲು ತಂದಿದ್ದ ಟರ್ಪನ್ ಟಯಿಲ್ ಆಕಸ್ಮಿಕವಾಗಿ ಕುಡಿದು ತಕ್ಷಣಕ್ಕೆ ಚಿಕಿತ್ಸೆ ಸಿಕ್ಕ ಕಾರಣ ಮಗು ಅಪಾಯದಿಂದ ಪಾರಾಗಿದ್ದಾರೆ. ಜೆಸಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಶಿವಮೊಗ್ಗ ಸರ್ಜಿ ಆಸ್ಪತ್ರೆಯಲ್ಲಿ ಈಗ ಮಗು ಆರೋಗ್ಯವಾಗಿದೆ. ಪೋಷಕರು ಹಬ್ಬದ ಸಂದರ್ಭದಲ್ಲಿ ಟರ್ಪನ್ ಟಯಿಲ್ ತಂದಿದ್ದರು ಎನ್ನಲಾಗಿದೆ. ಕುರುವಳ್ಳಿ ನಾಗರಾಜ್ ಮತ್ತು ಸ್ನೇಹಿತರು ಚಿಕಿತ್ಸೆಗಾಗಿ ಸಹಾಯ ಮಾಡಿದ್ದರು.