ಅಡಿಕೆ ಸುಲಿಯುವ ಯಂತ್ರ ಸೇರಿ ರೈತರ ಕೆಲಸಕ್ಕೆ ಒಡನಾಡಿ ವಿ ಟೆಕ್
– ಯಂತ್ರೋಪಕರಣಗಳಿಗೆ ತೋಟಗಾರಿಕಾ ಇಲಾಖೆ ನೀಡುವ ಸಹಾಯಧನ
– ಸಹಾಯಧನದ ಮೊತ್ತವನ್ನು ಯಂತ್ರದ ಮಾರಾಟ ಬೆಲೆಯಲ್ಲಿ ನೇರವಾಗಿ ಕಡಿತ
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ರೈತರಿಗೆ ಸಿಹಿ ಸುದ್ದಿ!
NAMMUR EXPRESS NEWS
ವೃತ್ತಿಯಲ್ಲಿ ಕೃಷಿಕರಾಗಿ, ಆರ್ಥಿಕತೆಯಲ್ಲಿ ದೇಶದ ಬೆನ್ನೆಲುಬಾಗಿರುವ ರೈತರಿಗೆ ವಿ-ಟೆಕ್ ಎಂಜಿನಿಯರ್ಸ್ ಸಂಸ್ಥೆ ಇದೀಗ ಜೀವನಾಡಿಯಾಗಿದೆ.ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ರೈತಾಪಿ ವರ್ಗಕ್ಕೆ ನೆಮ್ಮದಿಯಿಂದ ಕೃಷಿ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ.
ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುವವರ ಪರಿಸ್ಥಿತಿಯಂತೂ ಶೋಚನೀಯ. ವಿಶೇಷವಾಗಿ ಕಳೆದ ವರ್ಷದಿಂದ ಈಚೆಗೆ ಅಡಿಕೆ ಬೆಳೆಗಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಪ್ರಾರಂಭದಲ್ಲಿ ಅಡಿಕೆ ಕ್ಷೇತ್ರದಲ್ಲಿ ಬೆಳೆಗಾರರು ಅನುಭವಿಸುತ್ತಿದ್ದ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಮನಗಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ದೃಷ್ಟಿಯಲ್ಲಿ, ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಮಾರುಕಟ್ಟೆಗೆ ಮೊಟ್ಟ ಮೊದಲು ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ಕಂಡುಹಿಡಿದು-ಮಾರುಕಟ್ಟೆಗೆ ಪರಿಚಯಿಸಿದ
ಸಂಸ್ಥೆ ವಿ ಟೆಕ್ ಇಂಜಿನಿಯರ್ಸ್.
ಸಂಸ್ಥೆ, ಅಡಿಕೆ ಬೆಳೆಗಾರರಿಗೆ ಹೊಸ ಆಶಾಕಿರಣವಾಗಿ ಬೆಳೆಯಿತು. ಮೊದಲಿನಿಂದಲೂ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಾ ಬಂದಿರುವ, ಹಾಗು ಅನೇಕ ಸಮಸ್ಯೆಗಳ ಸಂದರ್ಭದಲ್ಲಿ ರೈತರಿಗೆ ಸದಾ ನಿಂತು ಬೆಳೆಗಾರರನ್ನು ಹುರಿದುಂಬಿಸುವ ಏಕೈಕ ಸಂಸ್ಥೆ ಎಂದರೆ ಅದು ಕುಂಟವಳ್ಳಿಯ ವಿ ಟೆಕ್ ಇಂಜಿನಿಯರ್ ಸಂಸ್ಥೆ ಮಾತ್ರ.
ಕಳೆದ ವರ್ಷ ಅನಾವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಎಲೆ ಚುಕ್ಕಿ ರೋಗ ದಂತಹ ಸಮಸ್ಯೆಯಿಂದ ಅಡಿಕೆ ಬೆಳೆಗಾರರು ಕಂಗೆಡುವುವಂತಾಗಿದ್ದರೆ, ಈ ವರ್ಷ ಅತಿವೃಷ್ಟಿ ಹಾಗು ಅಕಾಲಿಕ ಮಳೆ ಉಲ್ಬಣಗೊಂಡಿರುವ ಕೊಳೆ ರೋಗ, ಬೇರುಹುಳು ಬಾದೆ, ಅಡಿಕೆ ಉದುರುವ ಸಮಸ್ಯೆ, ಇಳುವಳಿಯಲ್ಲಿನ ಕುಸಿತ, ಹೀಗೆ ಹತ್ತು ಹಲವರು ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ಬೇಸತ್ತಿದ್ದಾರೆ. ಇವೆಲ್ಲವುಗಳ ನಡುವೆ ಅಡಿಕೆ ಬೆಳೆಯಲ್ಲಿನ ಏರುಪೇರು, ಹಾಗೆಯೇ ವಿದೇಶದಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಗೆ ಮಾರುಕಟ್ಟೆಯಲ್ಲಿ ಸ್ಥಾನ ಲಭಿಸುತ್ತಿರುವುದು, ಅಲ್ಲದೆ ಮುಂದುವರೆದಿರುವ ಕಾರ್ಮಿಕ ಸಮಸ್ಯೆಗಳು- ನಮ್ಮ ಅಡಿಕೆ ಬೆಳೆಗಾರರ ಮನಸ್ಥಿತಿ ದುರ್ಬಲಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ಒಂದಲ್ಲೊಂದು ಹೊಸ ಯೋಜನೆಯನ್ನು ರೂಪಿಸುತ್ತಾ ಬಂದಿರುವ ನಮ್ಮ ಹೆಮ್ಮೆಯ ವಿ- ಟೆಕ್ ಸಂಸ್ಥೆ ಈ ವರ್ಷ ಮಲೆನಾಡಿನ ರೈತರಿಗಾಗಿ ಅನೇಕ ವಿಶೇಷ ಯೋಜನೆಗಳನ್ನು ಪರಿಚಯಿಸುತ್ತಿದೆ. ಸಂಸ್ಥೆಯಲ್ಲಿ ತಯಾರಾಗುತ್ತಿರುವ ಅನೇಕ ಯಂತ್ರೋಪಕರಣಗಳಿಗೆ ತೋಟಗಾರಿಕಾ ಇಲಾಖೆ ನೀಡುವ ಸಹಾಯಧನದ ಮೊತ್ತವನ್ನು ಯಂತ್ರದ ಮಾರಾಟ ಬೆಲೆಯಲ್ಲಿ ನೇರವಾಗಿ ಕಡಿತಗೊಳಿಸಿ ಯಂತ್ರಗಳನ್ನು ರೈತರಿಗೆ ಮಾರಾಟ ಮಾಡಲು ಸಂಸ್ಥೆ ಇಚ್ಛಿಸಿದ್ದು, ಇದರ ಸದುಪಯೋಗವನ್ನು ಎಲ್ಲಾ ಅಡಿಕೆ ಬೆಳೆಗಾರರು ಪಡೆದುಕೊಳ್ಳಬೇಕೆಂದು ಸಂಸ್ಥೆ ಈ ಮೂಲಕ ನಿಮಗೆ ತಿಳಿಸಬಯಸುತ್ತದೆ.
ಈ ಉಪಯೋಗವನ್ನು ಈಗಲೇ ಪಡೆಯಿರಿ. ನಿಮ್ಮ ಹತ್ತಿರದ ವಿ ಟೆಕ್ ಶಾಖಾ ಕಚೇರಿಯನ್ನು ಭೇಟಿ ಮಾಡಿ.
ಸಂಪರ್ಕಿಸಿ
8197692653
9740537707
8971312191
9902804602