- ರಾತ್ರಿ, ಹಗಲು ಕರಾಮತ್ತು
- ಕರೋನಾ ಭಯ ಕಾಣಲಿಲ್ಲ..
- ಮತ ಮಾರಿಕೊಂಡರೆ ಮತದಾರರು?
ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆ ಪಕ್ಷಾತೀತವಾಗಿ ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಆದರೆ ಅದು ಸುಳ್ಳಾಗಿದೆ.
ಬಹುತೇಕ ಕಡೆ ಹಣ, ಹೆಂಡ, ಪ್ರಭಾವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕರಾಮತ್ತು ಮಾಡಿದೆ.
ಒಂದು ಮತಕ್ಕೆ 100 ರೂ ನಿಂದ ಹಿಡಿದು 2000 ರೂ.ವರೆಗೆ ಬಿಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸೋಮವಾರ ಮತ್ತು ಮಂಗಳವಾರ ಬೆಳಗ್ಗೆವರೆಗೆ ಹಣ, ಹೆಂಡ ಹಂಚಲಾಗಿದೆ. ಕೆಲವೆಡೆ ವಸ್ತುಗಳನ್ನು ಕೂಡ ನೀಡಲಾಗಿದೆ.ಶಿವಮೊಗ್ಗ ಗ್ರಾಮಾಂತರದಲ್ಲಿ ಕುಕ್ಕರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇನ್ನು ಚುನಾವಣಾ ಅಕ್ರಮದ ಮೇಲೆ ಇಲಾಖೆ ನಿಗಾ ಇದ್ದರೂ ಹಲವೆಡೆ ಕರಾಮತ್ತು ನಡೆದಿದೆ.
ಕರೋನಾ ನಿಯಮ ಕೂಡ ಎಲ್ಲಿಯೂ ಕಾಣಲಿಲ್ಲ. ಆದರೆ ಆಶಾ ಕಾರ್ಯಕರ್ತೆಯರು ಮತದಾರರಿಗೆ ಸ್ಯಾನಿಟೈಸರ್ ಮಾಡಿದ್ದಾರೆ.