ಅಬ್ಬಾ…ಚಳಿ ಶುರುವಾಯ್ತು!
– ರಾತ್ರಿ ಮತ್ತು ಮುಂಜಾನೆ ಸಾಕಷ್ಟು ಚಳಿ ವಾತಾವರಣ
– ಮುಂದಿನ ತಿಂಗಳು ಚಳಿ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ
– ಚಳಿ ಇರುವುದರಿಂದ ಮಳೆ ಮರೆಯಲಾಗುತ್ತಾ?
ವಿಶೇಷ ವರದಿ: ಪ್ರಾಪ್ತಿ ಸಾಗರ
NAMMUR EXPRESS NEWS
ರಾಜ್ಯಾದ್ಯಂತ ಮಳೆ ಪ್ರಮಾಣ ತಗ್ಗುತ್ತಿದ್ದಂತೆಯೇ ಚಳಿ ಎಂಟ್ರಿ ಕೊಟ್ಟಿದೆ, ಇದರಿಂದ ರಾಜ್ಯದಲ್ಲಿ ಚಳಿ ಶುರುವಾಗಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಇರುವುದರಿಂದ ತಣ್ಣನೆ ಗಾಳಿ ಬೀಸುತ್ತಿದ್ದು, ರಾತ್ರಿ ವೇಳೆ ಚಳಿ ಕಾಣಿಸಿಕೊಳ್ಳುತ್ತಿದೆ.
ಎಲ್ಲಾ ಜಿಲ್ಲೆಗಳಲ್ಲಿ ಒಂದು ವಾರದಿಂದ ತಂಪಾದ ವಾತಾವರಣ ಕಂಡುಬಂದಿದ್ದು ರಾತ್ರಿ ಕ್ರಮೇಣ ಚಳಿ ಆವರಿಸಿಕೊಂಡ ಅನುಭವವಾಗುತ್ತಿದೆ. ಮಳೆಯ ವಾತಾವರಣ ಕಡಿಮೆಯಾಗಿದ್ದು ಇದರಿಂದ ಕೆಲವು ಜಿಲ್ಲೆಗಳಲ್ಲಿಯೂ ಚಳಿ ಆವರಿಸಿಕೊಂಡಿದೆ ಎಂದು ಹೇಳಬಹುದು, ತಾಪಮಾನ ಹೆಚ್ಚಾಗಿದ್ದರೆ, ಬೀಸುವ ಗಾಳಿ ತಂಪಾಗಿರುವುದಿಲ್ಲ. ವಾರದಿಂದ ಕೆಲ ಜಿಲ್ಲೆಗಳಲ್ಲಿ ಹಗಲಿನಲ್ಲಿ ಬಿಸಿಲು ಕಡಿಮೆ ಇದ್ದರೆ ಸಂಜೆ ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಈ ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ತಿಂಗಳು ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ. ವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ ಸಾಕಷ್ಟು ಚಳಿ ವಾತಾವರಣ ಇದ್ದು ಇನ್ನೂ ಕೆಲ ತಿಂಗಳುಗಳ ಕಾಲ ಮುಂದುವರಿಯಲಿದೆ. ಚಳಿಯ ಜತೆಗೆ ಮಂಜು ಕೂಡ ಬೀಳುತ್ತಿದೆ,
ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲು ಆರಂಭ
ಮಲೆನಾಡು ಭಾಗದಲ್ಲಿ ಚಳಿ ಬೀಳುತ್ತಿದ್ದಂತೆ ಅಡಿಕೆ ಕೊಯ್ಲು ಕೂಡ ಆರಂಭವಾಗಿದೆ. ಚಳಿಯ ವಾತಾವರಣ ಇರುವುದರಿಂದ ಮಳೆ ಹೋಗುವ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ ಈಗಾಗಲೇ ಎಲ್ಲಾ ಕಡೆಯೂ ಕೂಡ ಅಡಿಕೆ ಕೊಯ್ಲು ಆರಂಭವಾಗಿದೆ. ಚಳಿಯ ವಾತಾವರಣ ಇರುವುದರಿಂದ ರೈತರಿಗೆ ಒಂದು ರೀತಿಯ ಸಂತಸ ಎಂದೇ ಹೇಳಬಹುದು.