- ಕಿಮ್ಮನೆ ಬೇಡ ಅಂದರೂ ಭಾಗಿಯಾದ ನಾಯಕರು
- ನಾಯಕರು ಹೇಳಿದ್ದೇನು..?, ಮಾಡಿದ್ದೇನು..?
ತೀರ್ಥಹಳ್ಳಿ: ಸಹಕಾರಿ ನಾಯಕ ಮಂಜುನಾಥ ಗೌಡ ಅವರ ನಾಯಕತ್ವದ ರೈತ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುವ ಮೂಲಕ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಜತೆಗೆ ಕಾಂಗ್ರೆಸ್ ಪಕ್ಷದಲ್ಲೂ ಸಣ್ಣನೆ ಕಿಡಿ ಹೊತ್ತಿದೆ.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಅವರು ಮಂಜುನಾಥ ಗೌಡರ ನೇತೃತ್ವದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುವುದು ಬೇಡ ಎಂದು ಮಾಧ್ಯಮಗಳ ಮೂಲಕ ಕರೆ ನೀಡಿದ್ದರು. ಆದರೆ ಅನೇಕ ಮುಂಚೂಣಿ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗುವ ಮೂಲಕ ಈಗ ಕಾಂಗ್ರೆಸ್ ಪಾಳಯದಲ್ಲಿ ಸಣ್ಣ ಕಿಡಿ ಹೊತ್ತಿದೆ. ಇದು ಯಾವ ರೂಪ ತಾಳುವುದು ಎಂಬ ಕುತೂಹಲ ಮೂಡಿದೆ.
ಜೊತೆಗೆ ಸಭೆಯಲ್ಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಶುಭ ಕೋರಿ ಓರ್ವ ನಾಯಕನನ್ನು ಕಳಿಸಿಕೊಟ್ಟಿದ್ದಾರೆ ಎಂದು ಮಂಜುನಾಥ ಗೌಡರೇ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಕಾಂಗ್ರೆಸ್ ನಾಯಕರು, ಇದೊಂದು ರೈತಪರ, ಪಕ್ಷಾತೀತ ಹೋರಾಟ. ನಾವು ಜನರ ಪರ ಹೋರಾಟಕ್ಕೆ ಬಂದಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ.