- ಶಿರುಪತಿಯಲ್ಲಿ ಮೊಳಗಿದ ಜನಪದ ಕಲರವ
- ತೀರ್ಥಹಳ್ಳಿ ಜಾನಪದ ಪರಿಷತ್ ಕಾರ್ಯಕ್ರಮ
ತೀರ್ಥಹಳ್ಳಿ: ಸೂವಿರೋ…ಸಂಗಯ್ಯ..ಸೂವಿರೋ ಲಿಂಗಯ್ಯ….ದೀಪಗಳ ಹಬ್ಬ ದೀಪಾವಳಿಯಂದು ಮಲೆನಾಡಿನ ಅನಾದಿ ಕಾಲದ ಕಲೆ ಅಂಟಿಗೆ ಪಿಂಟಿಗೆ ಎಲ್ಲೆಡೆ ಕಂಡು ಬರುತ್ತದೆ. ಆದರೆ ಆಧುನೀಕತೆಯ ನಾಗಾಲೋಟಕ್ಕೆ ಈ ಕಲೆ ಗತಿಸುವ ಅಪಾಯದಲ್ಲಿದೆ.
ದೀಪಾವಳಿಯ ರಾತ್ರಿಗಳಲ್ಲಿ ಜ್ಯೋತಿ ಹಿಡಿದು ಮನೆ ಮನೆಯಲ್ಲಿ ಹಾಡು ಹೇಳಿ ರಾತ್ರಿ ಕಳೆಯುವ ಅಪರೂಪದ ಕಲೆ ಅಂಟಿಗೆ ಪಿಂಟಿಗೆ. ಅಂಟಿಗೆ ಪಿಂಟಿಗೆ ಜಾನಪದ ಕಲೆಯು ಮಲೆನಾಡಿನ ತೀರ್ಥಹಳ್ಳಿ ಭಾಗದಲ್ಲಿಯೇ ಆರಂಭಗೊಂಡಿತು ಎನ್ನಲಾಗುತ್ತದೆ. ಅಂಟಿಗೆ ಅಂದರೆ ದೀಪವನ್ನು ಅಂಟಿಸುವುದು. ದೀಪದಿಂದ ದೀಪ ಹಚ್ಚುತ್ತಾ ತಂಡದಲ್ಲಿ ಮನೆ ಮನೆಗೆ ತೆರಳಿ ಮಲೆನಾಡಿನ ಬದುಕು, ಪರಿಸರಕ್ಕೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾ ಸಾಗುವ ಈ ಜಾನಪದ ಕಲೆಗೆ ತನ್ನದೆ ಆದ ವೈಶಿಷ್ಟ್ಯವಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಡಿ.ಸಿ.ದೇವರಾಜ್ ಮಾಹಿತಿ ನೀಡಿದರು.
ತೀರ್ಥಹಳ್ಳಿಗೆ ಸಮೀಪದ ಶಿರುಪತಿಯ ಶ್ರೀ ವ್ಯಾಘ್ರ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನ.16 ರಂದು ಸಂಜೆ ತೀರ್ಥಹಳ್ಳಿ ತಾಲೂಕು ಜಾನಪದ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕøತಿಕ ವೇದಿಕೆ ಮತ್ತು ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ದೇವಸ್ಥಾನದ ಮುಂಭಾಗ ಅಂಟಿಗೆ ಪಿಂಟಿಗೆ ಕಲಾ ಪ್ರದರ್ಶನ ಹಾಗೂ ದೀಪೆÇೀತ್ಸವ ನಡೆಯಿತು.
ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಮಹತ್ಕಾರ್ಯಕ್ಕೆ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಹೆಗಲುಕೊಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ, ತಾಲೂಕಿನ ಕ್ರಿಯಾಶೀಲ ಯುವ ನಾಯಕ ಟಿ.ಎನ್. ಮಂಜುನಾಥ್ ಇಡೀ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು. ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಲಯನ್ ಪಾಂಡುರಂಗಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಪುರುಷೋತ್ತಮ, ಸಾಮಾಜಿಕ ಕಾರ್ಯಕರ್ತೆ ಸುಲೋಚನಾ, ಕಲಾವಿದ ನಿಶ್ಚಲ್ ಜಾದೂಗಾರ್, ಶಿವಮೊಗ್ಗದ ಹಿರಿಯ ಪತ್ರಕರ್ತ ಜೇಸುದಾಸ್, ನಮ್ಮೂರ್ ಎಕ್ಸ್ಪ್ರೆಸ್ ಸಂಸ್ಥಾಪಕ ರಾಘವೇಂದ್ರ ತೀರ್ಥಹಳ್ಳಿ, ಸಮಾಜ ಸೇವಕ ವಿಶಾಲ್ ಕುಮಾರ್ ಸೇರಿದಂತೆ ಊರಿನ ಹಿರಿಯರು, ದೇವಸ್ಥಾನದ ಭಕ್ತರು ಹಾಜರಿದ್ದರು.