- ಶಿವಮೊಗ್ಗದ ಬಳಿ ಯುವತಿಯ ಮೃತ ದೇಹ ಪತ್ತೆ
ಶಿವಮೊಗ್ಗ: ಮೊಬೈಲ್ ಮಾತು ಅತಿಯಾದರೆ ಅಪಾಯ ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ಬೆಂಗಳೂರಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ರೈಲು ಬೋಗಿಯ ಡೋರ್ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಾ ನಿಂತಿದ್ದ ಯುವತಿ ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿದ್ದಾಳೆ. 2 ದಿನಗಳ ಬಳಿಕ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನೊಂದಿಗೆ ಶವ ಪತ್ತೆಯಾಗಿದೆ.
ನಡೆದಿದ್ದೇನು?: ನ.12ರಂದು ಶಿವಮೊಗ್ಗ ಮೂಲದ ಸಹನಾ(24) ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಶಿವಮೊಗ್ಗ ಸಮೀಪದ ತುಂಗಾ ಸೇತುವೆ ಬಳಿ ಆಕೆ ರೈಲಿನಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಕಾರಣ ಆಯತಪ್ಪಿ ಕೆಳಗೆ ಬಿದ್ದಿದ್ದರು. ಬಳಿಕ ಆಕೆಯ ಪತ್ತೆಗಾಗಿ ಎಲ್ಲರೂ 2 ದಿನ ಸಾಹಸ ಮಾಡಿದ್ದರು. ನ.14ರಂದು ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗದ ಗಾಡಿಕೊಪ್ಪದ ಸಹನಾ ಸಿಎ ವ್ಯಾಸಂಗ ಮಾಡುತ್ತಿದ್ದರು. ಮೊಬೈಲ್, ಬಸ್, ವಾಹನ ಅಥವಾ ಯಾವುದೇ ಕಡೆ ಮೊಬೈಲ್ನಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸುವುದು ಒಳಿತು. ಇದು ನಮ್ಮ ಕಾಳಜಿ ಮತ್ತು ಕಳಕಳಿ.