- ಹೊಸನಗರದ ರಿಪ್ಪಿನಪೇಟೆಯಲ್ಲಿ ಘಟನೆ
- ಲಕ್ಷಾಂತರ ಮೌಲ್ಯದ ಚಿನ್ನ ಕಳ್ಳತನ
ಹೊಸನಗರ: ಮಲೆನಾಡಿನಲ್ಲಿ ದಿನೇ ದಿನೇ ಕಳ್ಳತನ, ದರೋಡೆ ಹೆಚ್ಚುತ್ತಿದೆ. ಈ ನಡುವೆ ಹೊಸನಗರದ ರಿಪ್ಪಿನಪೇಟೆಯ ಬಳಿ ಮತ್ತೊಂದು ದರೋಡೆ ಲಕ್ಷ್ಮಿ ಪೂಜೆಯ ದಿನ ನಡೆದಿದೆ.
ಹೌದು. ಶನಿವಾರ ಎಲ್ಲೆಡೆ ದೀಪಾವಳಿ ಖರೀದಿ, ಲಕ್ಷ್ಮಿ ಪೂಜೆ ಸಂಭ್ರಮ. ಹೀಗೆಯೇ ತಾಲೂಕಿನ ಗವಟೂರು ಬಳಿಯ ಹುಳಿಗದ್ದೆ ಶಿವಕುಮಾರ ಎಂಬುವರ ಮನೆ ನುಗ್ಗಿ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಶಿವಕುಮಾರ್ ರಿಪ್ಪಿನಪೇಟೆಯಲ್ಲಿದ್ದ ತಮ್ಮ ಅಂಗಡಿ ಪೂಜೆಗೆ ಮನೆ ಮಂದಿಯೆಲ್ಲಾ ಮನೆ ಬೀಗ ಹಾಕಿ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು ಮನೆ ದೋಚಿದ್ದಾರೆ. ಸುಮಾರು 10 ಸಾವಿರ ಹಣ ಮತ್ತು 1.5 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.