ಮಂಗಳೂರಿನ ಆಸ್ಪತ್ರೆಯಲ್ಲೇ ಯುವತಿ ಮೇಲೆ ರೇಪ್!
– ನಗ್ನ ಫೋಟೊ ಇಟ್ಟುಕೊಂಡು ಬ್ಲ್ಯಾಕ್ಮೇಲೆ ಮಾಡಿ ದೌರ್ಜನ್ಯ
– ಕಾಸರಗೋಡು ಮೂಲದ ಆರೋಪಿಯ ಬಂಧನ
– ಕರಾವಳಿಯಲ್ಲಿ ಮತ್ತೊಂದು ಲವ್-ಜಿಹಾದ್ ಕೇಸ್!
NAMMUR EXPRESS NEWS
ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಮಾದರಿಯ ಕೃತ್ಯವೊಂದು ಮಂಗಳೂರಿನಲ್ಲಿ ವರದಿಯಾಗಿದೆ. ಚಿಕಿತ್ಸೆಗೆಂದು ಬಂದ ಯುವತಿಯನ್ನು ಆಸ್ಪತ್ರೆಯಲ್ಲೇ ರೇಪ್ ಮಾಡಿ ಆಕೆಯ ಬೆತ್ತಲೆ ಫೋಟೊಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡಿರುವ ಹೇಯ ಕೃತ್ಯ ಇದಾಗಿದೆ. ಪಿಸ್ತೂಲ ಕಾಯಿಲೆ ಇರುವ ಕಾರಣ ಚಿಕಿತ್ಸೆಗೆಂದು ಮಂಗಳೂರು ನಗರದ ಪ್ರತಿಷ್ಠಿತ ಏಜೆ ಆಸ್ಪತ್ರೆಗೆ ಕಾಸರಗೋಡು ಮೂಲದ ಯುವತಿಯನ್ನು ದಾಖಲಿಸಲಾಗಿತ್ತು. ಈಕೆ ರೂಂ ನಂಬರ್ 4ಬಿನಲ್ಲಿ ಚಿಕಿತ್ಸೆ ಪಡೆಯುತ್ತಿರಬೇಕಾದರೆ ಮಾ.16ರಂದು ರಾತ್ರಿ ಸುಮಾರು 8 ಗಂಟೆಗೆ ಸುಜಿತ್ ಎಂಬಾತ ಬಲವಂತವಾಗಿ ಬಂದು ಒಪ್ಪಿಗೆ ಇಲ್ಲದೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ನಗ್ನ ಫೋಟೊಗಳನ್ನು ತನ್ನ ಫೋನ್ನಲ್ಲಿ ತೆಗೆದುಕೊಂಡು ಇಟ್ಟಿದ್ದ. ಮತ್ತೆ ಅದನ್ನೇ ಇಟ್ಟುಕೊಂಡು ಮಂಗಳೂರಿಗೆ ಬಲವಂತ ಕರೆಸಿಕೊಂಡು ಹೋಟೆಲ್ನಲ್ಲಿ ಅತ್ಯಾಚಾರ ಎಸಗಿದ್ದ.
ಅದಾದ ಬಳಿಕ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಮತ್ತೆ ಅತ್ಯಾಚಾರ ಮಾಡಿದ್ದು, ಈ ವಿಚಾರ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರಿನ ಪೂರ್ವ ಠಾಣೆ ಪೊಲೀಸರು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಕೊಡವಳಂನ ಪುಲ್ಲೂರು ನಿವಾಸಿ ಸಜಿತ್ ಕೆ ಎಂಬಾತನನ್ನು ಬಂಧಿಸಿದ್ದು, ಪ್ರಕರಣ ದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕರಾವಳಿಯಲ್ಲಿ ಮತ್ತೊಂದು ಲವ್-ಜಿಹಾದ್ ಕೇಸ್!
– ಕಾಸರಗೋಡಿನ ಬದಿಯಡ್ಕದ ಹಿಂದೂ ಶಿಕ್ಷಕಿಯನ್ನು ರಿಜಿಸ್ಟ್ರಾರ್ ಮದುವೆಯಾದ ಮುಸ್ಲಿಂ ಯುವಕ
ಕರ್ನಾಟಕದ ಗಡಿ ಜಿಲ್ಲೆಯಾಗಿರುವ ಕಾಸರಗೋಡಿನ ಬದಿಯಡ್ಕದಲ್ಲಿ ಇದೀಗ ಲವ್ ಜಿಹಾದ್ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಹಿಂದೂ ಯುವತಿಯನ್ನು ಮುಸ್ಲಿಂ ಸಮುದಾಯದ ಯುವಕನೊಬ್ಬ ನೋಂದಣಿ ಕಚೇರಿಯಲ್ಲಿ ಕಾನೂನು ಪ್ರಕಾರ ಮದುವೆ ಮಾಡಿಕೊಂಡಿದ್ದು, ಹಿಂದು ಸಂಘಟನೆಯವರು ಈ ಮದುವೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 23ರಂದು ಬಡಿಯಡ್ಕ ನಿವಾಸಿ ನೇಹಾ ಎಂಬ ಯುವತಿ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಮೇ 27ರಂದು ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಿರ್ಶಾದ್ ಎಂಬ ಯುವಕನೊಂದಿಗೆ ಮದುವೆಯಾಗಿರುವ ಬಗ್ಗೆ ನೋಟಿಸ್ ಹಾಕಲಾಗಿತ್ತು. ಇದಕ್ಕೂ ಮೊದಲು ಯುವತಿ ಮನೆಯವರು ನೇಹಾಳನ್ನು ಮಿರ್ಶಾದ್ ಎಂಬಾತ ಅಪಹರಣ ಮಾಡಿರುವುದಾಗಿ ಬದಿಯಡ್ಕ ಠಾಣೆಗೆ ದೂರು ಕೊಟ್ಟಿದ್ದರು.
ಇನ್ನು ರಿಜಿಸ್ಟ್ರಾರ್ ಮದುವೆಯಾಗಿರುವ ಯುವಕ-ಯುವತಿ ಬದಿಯಡ್ಕ ಠಾಣೆಗೆ ಹಾಜರಾಗಿದ್ದು, ಯುವತಿ ಮಿರ್ಶಾದ್ ಜತೆ ತೆರಳುವುದಾಗಿ ಹೇಳಿರುವ ಕಾರಣ ಪೊಲೀಸರು ಇಬ್ಬರನ್ನು ಕಾಸರಗೋಡಿನ ಕೋರ್ಟ್ಗೆ ಹಾಜರುಪಡಿಸಿ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಈಗ ಈ ಮದುವೆಗೆ ಮುಸ್ಲಿಂ ಲೀಗ್ ನಾಯಕರು ಬೆಂಬಲವಾಗಿ ನಿಂತಿದ್ದು, ಹಿಂದು ಸಂಘಟನೆಗಳನ್ನು ಕೆರಳಿಸಿದೆ. ಅತ್ತ ಪೋಷಕರು ಅಸಹಾಯಕರಾಗಿದ್ದು, ಮಗಳು ತಮ್ಮಿಂದ ದೂರವಾಗಿರುವ ನೋವಿನಲ್ಲಿ ಇದ್ದಾರೆ.