ಕರಾವಳಿ ನ್ಯೂಸ್
ವಿದ್ಯಾರ್ಥಿಗೆ ಎದೆನೋವು: ಆಸ್ಪತ್ರೆಗೆ ಬಸ್!
– ಪ್ರಯಾಣಿಕರ ಸಮೇತ ಆಸ್ಪತ್ರೆಗೆ ತೆರಳಿದ ಬಸ್ ಸಿಬ್ಬಂದಿ
– ವಿದ್ಯಾರ್ಥಿಗೆ ಚಿಕಿತ್ಸೆ: ಸಾರ್ವಜನಿಕರ ಮೆಚ್ಚುಗೆ
– ಉಡುಪಿ ಜಿಲ್ಲೆಯಲ್ಲಿ ಶಾಲೆ ಕಾಲೇಜಿಗೆ ರಜೆ
– ಕಾಪು, ಹೆಬ್ರಿ, ಕಾರ್ಕಳ ಮತ್ತು ಉಡುಪಿ ತಾಲ್ಲೂಕು ರಜೆ
NAMMUR EXPRESS NEWS
ಮಂಗಳೂರು: 13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಕಾಲೇಜು ವಿದ್ಯಾರ್ಥಿ ತಟ್ಟನೆ ಎದೆ ನೋವೆಂದು ಹಾರ್ಟ್ ಅಟ್ಯಾಕ್ ಸೂಚನೆ ನೀಡುತ್ತಿದ್ದಂತೆ ಎಚೆತ್ತು ಗೊಂಡ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗೂ ಮಹೇಶ್ ಪೂಜಾರಿ, ಸುರೇಶ್ ವಿದ್ಯಾರ್ಥಿ ಅರೋಗ್ಯ ದೃಷ್ಟಿಯಿಂದ ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 ಕಿಮೀ ದೂರವನ್ನು 6ನಿಮಿಷಗಳಲ್ಲಿ ಪ್ರಯಾಣಿಸಿ ನಗರದ ಕಂಕನಾಡಿ ಆಸ್ಪತ್ರೆಯ ಹೊರಗಣವನ್ನು ಯಾರ ಅಪ್ಪಣೆಯನ್ನು ಕೇಳದೆ ಪ್ರಾಮುಖ್ಯತೆ ಯನ್ನು ಅರಿತು ಒಳ ಪ್ರವೇಶಿಸಿ ವಿದ್ಯಾರ್ಥಿ ಯನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಿ ಜೀವ ಉಳಿಸಿದ್ದಾರೆ.
ಕರಾವಳಿಯಲ್ಲಿ ಬಸ್ಸು ಚಾಲಕ ನಿರ್ವಹಕ ಶ್ರಮಿಕ ವರ್ಗ ಮಾನವೀಯತೆ ಮತ್ತೆ ಸಾಬೀತಾಗಿದೆ
ಉಡುಪಿ ಜಿಲ್ಲೆಯಲ್ಲಿ ಶಾಲೆ ಕಾಲೇಜಿಗೆ ರಜೆ
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನಲೆ ನಾಲ್ಕು ತಾಲೂಕಿನ ಎಲ್ಲಾ ಶಾಲಾ ಕಾಲೇಜಿಗೆ (ಜು.31) ರಜೆ ಘೋಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಕಾಪು, ಹೆಬ್ರಿ, ಕಾರ್ಕಳ ಮತ್ತು ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ದಿನಾಂಕ 31.07.2024 ರಂದು ರಜೆಯನ್ನು ತಾಲ್ಲೂಕಿನ ತಹಸಿಲ್ದಾರ್ ಘೋಷಣೆ ಮಾಡಿದ್ದಾರೆ.
ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ತಹಸೀಲ್ದಾರ್ ರಜೆ ಘೋಷಿಸಿದ್ದು, ಈ ದಿನವನ್ನು ಶನಿವಾರ ಪೂರ್ಣ ದಿನ/ಭಾನುವಾರ ತರಗತಿಗಳನ್ನು ಮಾಡಿ ಸರಿದೂಗಿಸಿಕೊಳ್ಳುವಂತೆ ಆದೇಶಿಸಲಾಗಿದೆ.