ಆಸ್ಟ್ರೇಲಿಯಾ ತಂಡದಲ್ಲಿ ಕರಾವಳಿ ಮ್ಯಾನೇಜರ್!
– ವಿಶ್ವ ಕಪ್ ಗೆಲುವಿನ ಹಿಂದೆ ಕನ್ನಡತಿಯ ಶ್ರಮ
– ತಂಡದ ಆಟಗಾರರ ಪ್ಲಾನರ್ ಇವರೇ..!
NAMMUR EXPRESS NEWS
ಮಂಗಳೂರು: ವಿಶ್ವಕಪ್ ಕ್ರಿಕೆಟಿನಲ್ಲಿ ಆಸ್ಟ್ರೇಲಿಯಾ ಭಾರತದ ಭರ್ಜರಿ ಗೆಲುವು ಸಾಧಿಸಿದೆ. ಭಾರತ ತಂಡ ಇಲ್ಲಿ ಸೋತರೂ ಭಾರತ ಮೂಲದ ಮಹಿಳೆ ಸಾಧನೆ ಇಲ್ಲಿದೆ. ಹೌದು ಆಸ್ಟ್ರೇಲಿಯಾ ತಂಡದ ಮ್ಯಾನೇಜರ್ ಆಗಿ ಮಂಗಳೂರು ಮೂಲದ ಯುವತಿ ಕಾರ್ಯನಿರ್ವಹಿಸಿದ್ದು, ಕಪ್ ಗೆಲ್ಲುವುದಕ್ಕೆ ಇವರೂ ಕಾರಣರಾಗಿದ್ದಾರೆ . ಹೌದು… ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್, ಮ್ಯಾನೇಜರ್ ಆಗಿ ಮಂಗಳೂರಿನ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೋ ಕಾರ್ಯನಿರ್ವಹಿಸುತ್ತಿದ್ದಾರೆ. 34 ವರ್ಷದ ಊರ್ಮಿಳಾ ಹೆತ್ತವರಾದ ಐವಿ ಮತ್ತು ವಾಲೆಂಟೈನ್ ದಂಪತಿಯ ಸದ್ಯ ಏಳು ವರ್ಷಗಳಿಂದ ಸಕಲೇಶಪುರದ ಎಸ್ಟೇಟ್ ನಲ್ಲಿ ವಾಸ್ತವ್ಯವಿದ್ದಾರೆ. ಆದರೆ ಇವರು ಸಾಕಷ್ಟು ವರ್ಷಗಳಿಂದ ಉದ್ಯೋಗದ ನಿಮಿತ್ತ ದೋಹಾ ಕತಾರ್ ನಲ್ಲಿ ವಾಸವಾಗಿದ್ದರು. ಊರ್ಮಿಳಾ ಅವರು ಹುಟ್ಟಿದ್ದೇ ಕತಾರ್ ನಲ್ಲಿ. ಬಾಲ್ಯದಿಂದಲೇ ಕ್ರೀಡೆಯತ್ತ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ ಮೊದಲು ಕತಾರ್ ಟೆನ್ನಿಸ್ ಫೆಡೆರೇಶನ್ ನಲ್ಲಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್ ಕ್ರಿಕೆಟ್ ಟೀಂ ನಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿಕಾರ್ಯ ನಿರ್ವಹಿಸಿದ್ದರು. ಬಳಿಕ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಂ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಕತಾರ್ ನಲ್ಲಿ ನಡೆದ ವಿಶ್ವ ಫುಟ್ಬಾಲ್ ನಲ್ಲಿ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಅಪಾರ ಅನುಭವದೊಂದಿಗೆ ಮತ್ತೆ ಆಸ್ಟ್ರೇಲಿಯಾಗೆ ಮರಳಿರುವ ಊರ್ಮಿಳಾ ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿದ್ದಾರೆ. ಊರ್ಮಿಳಾಗೆ ಬಾಲ್ಯದಲ್ಲಿ ಬಾಸ್ಕೆಟ್ಬಾಲ್, ಟೆನ್ನಿಸ್ ಸೇರಿದಂತೆ ಅಥ್ಲೆಟಿಕ್ ಮೇಲೆ ಆಸಕ್ತಿಯಿತ್ತು. ಬಳಿಕ ಆ ಆಸಕ್ತಿ ಕ್ರಿಕೆಟ್ ಮೇಲೆ ಹೊರಳಿತು. ಊರ್ಮಿಳಾ ರೊಸಾರಿಯೋ ಆಸ್ಟ್ರೇಲಿಯಾ ಮೂಲದವರಲ್ಲದಿದ್ದರೂ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ನಾಲ್ಕು ವರ್ಷಗಳ ಕಾಲ ಕೇರ್ ಟೇಕರ್ ಆಗಿದ್ದರು. ಜೊತೆಗೆ ಊರ್ಮಿಳಾ ಬಹಳಷ್ಟು ಭಾಷೆಗಳನ್ನು ಬಲ್ಲವಳಾಗಿದ್ದರು. ಆದ್ದರಿಂದ ಆಟಗಾರರು ಹೋಗುವ ದೇಶದಲ್ಲಿ ಆಟಗಾರರ ಊಟೋಪಚಾರ, ವಸತಿ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರ ಕೈಕೆಳಗೆ ಬಹುದೊಡ್ಡ ತಂಡವೇ ಕಾರ್ಯ ನಿರ್ವಹಿಸುತ್ತಿದೆ.