ಮೋದಿ ಮಂಗಳೂರು ಆಗಮನಕ್ಕೆ ಕೌಂಟ್ಡೌನ್!
– ರೋಡ್ ಶೋಗೆ ಅಂತಿಮ ಹಂತದ ಸಿದ್ಧತೆ
– ಸಂಚಾರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ
– ಎಲ್ಲೆಲ್ಲಿ ವಾಹನ ಹೋಗಬೇಕು… ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಮಂಗಳೂರು: ಪ್ರಧಾನಿ ಮೋದಿ ಅವರು ಮಂಗಳೂರಿನಲ್ಲಿ ಬೃಹತ್ ರೋಡ್ಶೋ ಮಾಡುವುದಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ನಗರದೆಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗುತ್ತಿದೆ. ಮೋದಿ ಅವರು ಭಾನುವಾರ ಸಂಜೆ 5 ಗಂಟೆಗೆ ನಗರದ ಲೆಡೀಲ್ ಬಳಿಯಿರುವ ನಾರಾಯಣಗುರು ವೃತ್ತದಿಂದ ನವ ಭಾರತ ಸರ್ಕಲ್ವರೆಗೆ ರೋಡ್ಶೋ ನಡೆಸಲಿದ್ದು, ಭಾರೀ ಸಂಖ್ಯೆಯಲ್ಲಿ ಮೋದಿ ಅವರ ಅಭಿಮಾನಿಗಳನ್ನು ಕರೆತರುವ ಮೂಲಕ ಈ ರೋಡ್ಶೋ ಅನ್ನು ಐತಿಹಾಸಿಕ ಕಾರ್ಯಕ್ರಮವಾಗಿ ಬದಲಾಯಿಸುವುದಕ್ಕೆ ಬಿಜೆಪಿ ಪಾಳೆಯದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ.
ಮೋದಿ ಅವರು ರೋಡ್ ಶೋ ನಡೆಸುವ ರಸ್ತೆಗಳ ಇಕ್ಕೆಲಗಳಲ್ಲಿ ಈಗಾಗಲೇ ಬ್ಯಾರಿಕೇಡ್ ಮಾದರಿ ಕಬ್ಬಿಣದ ತಡೆ ಗೋಡೆಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅದರೊಳಗೆ ನಿಂತುಕೊಂಡು ಮೋದಿ ಆಗಮನದ ವೇಳೆ ಜೈಕಾರ ಹಾಕುವುದು, ಕೈಬೀಸುವ ಮೂಲಕ ಸ್ವಾಗತ ಕೋರಬೇಕಿದೆ. ಮೋದಿ ಅವರ ರೋಡ್ ಶೋ ಹಿನ್ನಲೆ ಈಗಾಗಲೇ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ನಗರದಲ್ಲಿ ಠಿಕ್ಕಾಣಿ ಹೂಡಿದ್ದು, ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ನಿಗಾ ವಹಿಸುತ್ತಿದ್ದಾರೆ.
ಸಂಚಾರದಲ್ಲಿ ಅಮೂಲಾಗ್ರ ಬದಲಾವಣೆ
ಇನ್ನೊಂದೆಡೆ ಮೋದಿ ಅವರ ಆಗಮನದಲ್ಲಿ ಯಾವುದೇ ರೀತಿ ಸಂಚಾರ ದಟ್ಟಣೆ ಉಂಟಾಗದಂತೆ ಮಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬಹುತೇಕ ರಸ್ತೆಗಳಲ್ಲಿ ಸಂಚಾರದಲ್ಲಿ ಮಾರ್ಪಾಟು ಮಾಡಲಾಗಿದೆ. ಪ್ರಧಾನಿ ಮೋದಿ ರೋಡ್ಶೋ ಹಿನ್ನಲೆ ಉಡುಪಿಯಿಂದ ಮಂಗಳೂರಿಗೆ ಬರುವ ಎಲ್ಲ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್, ಕೆಪಿಟಿ ಜಂಕ್ಷನ್, ನಂತೂರು ಜಂಕ್ಷನ್, ಶಿವಭಾಗ್ ಜಂಕ್ಷನ್, ಸೆಂಟ್ ಆಗ್ನೇಸ್, ಕಂಕನಾಡಿ ಜಂಕ್ಷನ್, ಅವೇರಿ ಜಂಕ್ಷನ್, ಮಿಲಾಗ್ರಿಸ್ ಜಂಕ್ಷನ್, ಹಂಪನಕಟ್ಟ ಜಂಕ್ಷನ್, ಕ್ಲಾಕ್ ಟವರ್ ಮೂಲಕ ಸಂಚರಿಸಬೇಕು. ಅದೇರೀತಿ ಸ್ಟೇಟ್ಬ್ಯಾಂಕ್ ಕಡೆಯಿಂದ ಉಡುಪಿ ಕಡೆ ಹೋಗುವ ವಾಹನಗಳು ಲೇಡಿ ಗೋಷನ್, ಕ್ಲಾಕ್ ಟವರ್, ರೈಲ್ವೇ ಸ್ಟೇಷನ್ ಜಂಕ್ಷನ್, ನಂದಿಗುಡ್ಡ ರೋಡ್, ಕೋಟಿ ಚೆನ್ನಯ್ಯ ಸರ್ಕಲ್, ಕಂಕನಾಡಿ ಜಂಕ್ಷನ್ ಮೂಲಕ ಮಾರ್ಗ ಬದಲಾವಣೆ ಮಾಡಲಾಗಿದೆ.
ಮಂಗಳೂರು ನಗರಕ್ಕೆ ಬರುವ ವಾಹನ ಹೇಗೆ ಹೋಗಬೇಕು?
ಪಂಪ್ವೆಲ್ನಿಂದ ಮಂಗಳೂರು ನಗರಕ್ಕೆ ಬರುವ ವಾಹನ ಕರಾವಳಿ ಜಂಕ್ಷನ್, ಕಂಕನಾಡಿ ಜಂಕ್ಷನ್, ಮಿಲಾಗ್ರಿಸ್ ಜಂಕ್ಷನ್, ಹಂಪನಕಟ್ಟ, ಕ್ಲಾಕ್ ಟವರ್ ಮೂಲಕ ಚಲಿಸಬೇಕು. ಸ್ಟೇಟ್ಬ್ಯಾಂಕ್ನಿಂದ ಪಂಪ್ವಲ್ ಕಡೆ ಹೋಗುವ ವಾಹನ ಲೇಡಿಗೋಷನ್, ಕ್ಲಾಕ್ ಟವರ್, ರೈಲ್ವೇ ಸ್ಟೇಷನ್ ಜಂಕ್ಷನ್, ನಂದಿಗುಡ್ಡ, ಕೋಟಿಚೆನ್ನಯ್ಯ ಸರ್ಕಲ್, ಕಂಕನಾಡಿ ಜಂಕ್ಷನ್ ಮೂಲಕ ಸಂಚರಿಸಬೇಕು. ಕಾರ್ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ವಾಹನ ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್, ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ &ಬಿಜೈ ಚರ್ಚ್ ಕಡೆಯಿಂದ ಬರುವ ವಾಹನ ಕೆಎಸ್ಆರ್ಟಿಸಿ ಜಂಕ್ಷನ್ ಮೂಲಕ ಸಂಚರಿಸಬೇಕು.
ಬಲ್ಮಠ ರೋಡ್, ರೂಪಾ ಹೋಟೆಲ್ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಕಲೆಕ್ಟರ್ಸ್್ ಗೇಟ್ ವೃತ್ತ, ಹಾರ್ಟಿಕಲ್ಚರ್ ಜಂಕ್ಷನ್, ಸೈಂಟ್ ಆಗ್ನೇಸ್, ಶಿವಭಾಗ್, ನಂತೂರು ವೃತ್ತ, ಪದುವಾ – ಕೆಪಿಟಿ, ಬಿಜಿ ಜಂಕ್ಷನ್, ಜೈಲ್ ರೋಡ್ – ಬಿಜೈ ಚರ್ಚ್ ರೋಡ್, ಕಾವೂರು, ಪಂಜಿಮೊಗೆರು, ಕೂಳೂರು 4ನೇ ಮೈಲು, ಕೊಟ್ಟಾರಚೌಕಿವರೆಗೆ ರಸ್ತೆಯ ಎರಡು ಬದಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಬಜಪೆ ವಿಮಾನ ನಿಲ್ದಾಣದಿಂದ ಹೇಗೆ ಬರಬೇಕು?
ಬಜಪೆ ವಿಮಾನ ನಿಲ್ದಾಣದಿಂದ ಕೆಂಜಾರು-ಮರವೂರು, ಕಾವೂರು, ಬೊಂದೇಲ್, ಮೇರಿಹಿಲ್, ಕೆಪಿಟಿ, ಕೊಟ್ಟಾರ ಚೌಕಿ, ಉರ್ವ ಸ್ಟೋರ್, ಲಾಲ್ಬಾಗ್, ಬಲ್ಲಾಳ್ಬಾಗ್, ಕೊಡಿಯಾಲ್ ಗುತ್ತು, ಬಿಜಿ ಸ್ಕೂಲ್ ಜಂಕ್ಷನ್, ಪಿವಿಎಸ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಎಲ್ಎಚ್ಎಚ್, ಬಾವುಟಗುಡ್ಡ, ಡಾ.ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಭಾರತ್ ಬೀಡಿ, ಕದ್ರಿ ಕಂಬಳ, ಭಟ್ಟಗುಡ್ಡೆ ಹಂಪನಕಟ್ಟ ರಸ್ತೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.