ಡ್ರಗ್ಸ್ ಮಿಶ್ರಿತ ಚಾಕಲೇಟ್. ಹುಷಾರ್..!
– ಕರಾವಳಿಯಲ್ಲೂ ಮಾದಕ ದ್ರವ್ಯ ದಂಧೆ
– ಯುವ ಸಮುದಾಯ, ವಿದ್ಯಾರ್ಥಿಗಳಿಗೆ ಟಾರ್ಗೆಟ್
– ಮಹಾಶಕ್ತಿ ಮುನಕ್ಕಾ, ಬಮ್ ಬಮ್ ಮುನಕ್ಕಾ ಹೆಸರು!… ಮಲೆನಾಡಿನಲ್ಲೂ ಮಾರಾಟ
– ವೆಬ್ ಸೀರೀಸ್… ಸಿನಿಮಾ ಪ್ರೇರಣೆ ಆಗ್ತಿದೆಯಾ?
NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಮಾದಕ ದ್ರವ್ಯ ಮಿಶ್ರಿತ ಚಾಕಲೇಟ್ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಡ್ರಗ್ಸ್ ಮಾಫಿಯಾ ತನ್ನ ಕರಾಳ ಮುಖ ಅನಾವರಣ ಮಾಡಿದೆ. ಮಂಗಳೂರಿನ ಎರಡು ಅಂಗಡಿಗಳಲ್ಲಿ ಮಾದಕ ಚಾಕಲೇಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ, ಉತ್ತರ ಪ್ರದೇಶ ಮೂಲದ ಬೆಚನ್ ಸೋಲ್ಕರ್ (45), ಹಾಗೂ ಗುಜರಾತ್ ಮೂಲದ ಮನೋಹರ್ ಶೇಟ್ (49) ಎಂಬುವವರನ್ನು ಬಂಧಿಸಲಾಗಿದೆ. ಈ ಖದೀಮ ಸೋಲ್ಕರ್, ಫಳೀರಿನ ಹೈಲ್ಯಾಂಡ್ ಆಸ್ಪತ್ರೆ ಬಳಿ ಗೂಡಂಗಡಿಯಲ್ಲಿ ಗಾಂಜಾ ತುಂಬಿದ ಚಾಕಲೇಟ್ ಮಾರುತ್ತಿದ್ದ. ಅದೇ ಮನೋಹರ್ ಶೇಟ್ ಕಾರ್ ಸ್ಟ್ರೀಟ್ ಬಳಿಯಲ್ಲಿ ಮಾರುತ್ತಿದ್ದ ಎನ್ನಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ, ಮಲೆನಾಡು ಭಾಗದಲ್ಲಿ ಡ್ರಗ್ಸ್ ಮಾಫಿಯಾ ಯುವ ಜನತೆಯನ್ನು ಹಾಳು ಮಾಡುತ್ತಿದೆ ಎಂಬ ಆರೋಪದ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೂರು ಗೋಣಿ ಚೀಲ ಚಾಕಲೇಟ್ ವಶ!
ಚಾಕಲೇಟ್ನಲ್ಲಿ ಗಾಂಜಾವನ್ನು ಮಿಶ್ರಿಸಲಾಗುತ್ತಿತ್ತು. ಅದಕ್ಕೆ ‘ಮಹಾಶಕ್ತಿ ಮುನಕ್ಕಾ’, ಬಮ್ ಬಮ್ ಮುನಕ್ಕಾ, ಪವರ್ ಮುನಕ್ಕಾ ವಟಿ, ಆನಂದ ಚೂರ್ಣ ಎಂದೆಲ್ಲ ಹೆಸರಿಟ್ಟು ಮಾರಾಟ ಮಾಡಲಾಗುತ್ತಿತ್ತು. ಮನೋಹರ್ ಶೇಟ್ ಬಳಿ ಮೂರು ಗೋಣಿ ಚೀಲಗಳಲ್ಲಿ ಇಟ್ಟಿದ್ದ 48 ಸಾವಿರ ಮೌಲ್ಯದ ಚಾಕಲೇಟ್ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಈ ಮಂಗಳೂರಿನ ಬಂದರು ಮತ್ತು ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವೆಬ್ ಸೀರೀಸ್… ಸಿನಿಮಾ ಪ್ರೇರಣೆ ಆಗ್ತಿದೆಯಾ?
ಇತ್ತೀಚಿಗೆ ಅನೇಕ ಓಟಿಟಿ ಪ್ಲಾಟ್ ಫಾರ್ಮ್ ಸೇರಿದಂತೆ ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ಡ್ರಗ್ಸ್ ಬಳಕೆ ಬಗ್ಗೆ ವಿವಿಧ ಕಥಾ ಆಧಾರಿತ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದೇ ಈ ದಂಧೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಲ್ಲದೆ ವಾಮಮಾರ್ಗದ ಮೂಲಕ ಬಳಕೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.
ಮಲೆನಾಡಲ್ಲೂ ಮಾರಾಟ?
ಕರಾವಳಿ ಮತ್ತು ಮಲೆನಾಡು ಡ್ರಗ್ಸ್ ಮಾಫಿಯಾದ ಕೇಂದ್ರ ಸ್ಥಾನಗಳು. ಇಲ್ಲಿ ಯುವ ಜನತೆ, ಕಾಲೇಜು ವಿದ್ಯಾರ್ಥಿಗಳೇ ಈ ದಂಧೆಯ ಟಾರ್ಗೆಟ್. ಇನ್ನು ಇತ್ತೀಚಿಗೆ ಯುವ ಸಮುದಾಯ ಅತೀ ಹೆಚ್ಚು ಗಾಂಜಾ, ಡ್ರಗ್ಸ್ ಸೇವನೆಗೆ ದಾಸರಾಗುತ್ತಿದ್ದು, ತಮ್ಮ ಬದುಕು, ಕುಟುಂಬದ ನೆಮ್ಮದಿ ಹಾಳು ಮಾಡುತ್ತಿವೆ. ಅಲ್ಲದೆ ಅನೇಕ ಅಪರಾಧ ಪ್ರಕರಣದಲ್ಲಿ ಈ ಡ್ರಗ್ಸ್ ಸೇವನೆ ಮಾಡುವವರೆ ಕಾರಣರಾಗಿದ್ದಾರೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023