ಕಸ ಕಸ ಕಸ: ಬಜ್ಪೆಯಲ್ಲಿ ಹೋರಾಟ..!
– ಪ. ಪಂ ಆಡಳಿತಾಧಿಕಾರಿಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ
– ಬಜ್ಪೆ ನಾಗರಿಕರ ವೇದಿಕೆಯ ವತಿಯಿಂದ ಪ್ರತಿಭಟನೆ
NAMMUR EXPRESS NEWS
ಮಂಗಳೂರು: ಬಜ್ಪೆ ನಾಗರಿಕರ ವೇದಿಕೆಯ ವತಿಯಿಂದ, ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಅಸಮರ್ಪಕ ಕಸವಿಲೇವಾರಿ ವಿರುದ್ಧ ಸೋಮವಾರ ಭಾರೀ ಪ್ರತಿಭಟನೆ ನಡೆದಿದೆ. ಮನೆಗಳಲ್ಲಿ ಶೇಖರಿಸಿದ ಕಸಗಳಲ್ಲಿ ಹುಳಗಳು ಆಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಜನ ಬಜ್ಪೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು ,ಬಜ್ಪೆ ಚರ್ಚ್ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ,ಪಟ್ಟಣ ಪಂಚಾಯತ್ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮಾಡಿ ಅಧಿಕಾರಿ ವರ್ಗದ ವಿರುದ್ದ ಘೋಷಣೆಗಳನ್ನು ಕೂಗಿದರು. ಬಜ್ಪೆ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಯಾದ ತಹಶೀಲ್ದಾರ್ ಬಂದು ಮನವಿ ಸ್ವೀಕರಿಸಬೇಕು,ಮುಂದಿನ ದಿನಗಳಲ್ಲಿ ಕಸ ವಿಲೇವಾರಿಗೆ ಶಾಶ್ವತವಾದ ಪರಿಹಾರ ಆಗಬೇಕು,ಇಲ್ಲದಿದ್ದಲ್ಲಿ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ನಾಗರಿಕರ ಬೇಡಿಕೆಗೆ ಸ್ಪಂದಿಸಿ, ತಹಶೀಲ್ದಾರರು ಮಂಗಳೂರಿನಿಂದ ಬಂದು,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮನವಿ ಸ್ವೀಕರಿಸಿ, ಆದಷ್ಟು ಬೇಗ ಶಾಶ್ವತ ಪರಿಹಾರ ಮಾಡುವುದಾಗಿ ತಿಳಿಸಿದರು.
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ , ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್ ,ದಲಿತ ಸಂಘ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್, ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ ,ಮಹಿಳಾ ಮುಖಂಡರಾದ ವಿಜಯ ಗೋಪಾಲ ಸುವರ್ಣ , ಮಾದವ ಅಮೀನ್ , ಕ್ರೈಸ್ತ ಸಮುದಾಯದ ಮುಖಂಡರಾದ ಜೇಕಬ್ ಪಿರೇರಾ,ರೋಟರಿ ಮುಖಂಡರಾದ ರೇಗೊ ,ಎಸ್ ಡಿಪಿಐ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ ,ಆಯಿಷಾ ,ನಜೀರ್ ಕಿನ್ನಿಪದವು ,ಸಾಮಾಜಿಕ ಮುಖಂಡರಾದ ದೀಪಕ್ ಪೂಜಾರಿ,ಕುಡುಬಿ ಸಮಾಜದ ನಾಯಕರಾದ ಶೇಖರ್ ಗೌಡ,ಕಾಂಗ್ರೆಸ್ ಮುಖಂಡರಾದ ಡಾ.ಶೇಖರ್ ಪೂಜಾರಿ.ಬಿ ಜೆ ರಹೀಮ್,ಉದಯ ಕುಮಾರ್,ರೋನಿ ಪೆರ್ಮುದೆ , ನವಾಜ್ ಭಟ್ರಕೆರೆ, ಹಫೀಜ್ ಕೊಳಂಬೆ ಮತ್ತು ಗ್ರಾ ಪಂ ಮಾಜಿ ಸದಸ್ಯರುಗಳು, ಊರಿನ ಹಿರಿಯರು, ಉದ್ಯಮಿಗಳು, ಮಹಿಳಾ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.