ಕುಚ್ಚಲಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳ..!
– ಕೆಜಿಗೆ 15ರಿಂದ 20 ರೂ ಏರಿಕೆ, ಮಲೆನಾಡ ಅಕ್ಕಿಗೂ ಬೆಲೆ ಹೆಚ್ಚು
– ಭತ್ತದ ಬೆಳೆ ಕಡಿಮೆಯೇ ಬೆಲೆ ಏರಿಕೆಗೆ ಕಾರಣ
– ಮಲೆನಾಡ ಅಕ್ಕಿಗೂ ಹೆಚ್ಚಿದ ಡಿಮ್ಯಾಂಡ್
NAMMUR EXPRESS NEWS
ಮಂಗಳೂರು: ಕುಚ್ಚಲಕ್ಕಿ ದರ ಬಾರಿ ಏರಿಕೆ ಕಂಡಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಕೆ.ಜಿ.ಗೆ 15ರಿಂದ 20 ರೂ. ಹೆಚ್ಚಳವಾಗಿ 48 ರಿಂದ 50 ರೂ.ನಲ್ಲಿ ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯ ಜನರು ಕಂಗಾಲಾಗಿದ್ದಾರೆ. ಇನ್ನು ಮಲೆನಾಡ ಕೆಂಪು ಅಕ್ಕಿಗೂ ಡಿಮ್ಯಾಂಡ್ ಹೆಚ್ಚಿದೆ. ಕಳೆದ ವರುಷ ಡಿಸೆಂಬರ್ ನಲ್ಲಿ ಒಂದು ಕ್ವಿಂಟಾಲ್ ಕುಚ್ಚಲಕ್ಕಿ ದರ 3200 ರೂ.ನಿಂದ 3300 ರೂ.ವರೆಗೆ ಇತ್ತು. 2023ರ ಮಾರ್ಚ್ ಏಪ್ರಿಲ್ ನಲ್ಲಿ ಭಾರಿ ಏರಿಕೆ ಖಂಡ ಕುಚಲಕ್ಕಿ ದರ ಕ್ವಿಂಟಾಲ್ ಗೆ 4,200 ರೂ.ವರೆಗೂ ತಲುಪಿತ್ತು.ಕುಚ್ಚಲಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳವಾದರೂ ಸಹ ಭತ್ತದ ಬೆಲೆ ಕೆ.ಜಿ.ಗೆ 2-3 ರೂ. ಮಾತ್ರ ಏರಿಕೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಬೇಸಾಯದ ಕೊರತೆಯೆ ಬೆಲೆ ಏರಿಕೆಗೆ ಕಾರಣ :
ಕರಾವಳಿ ಸೇರಿದಂತೆ ಮಲೆನಾಡು, ಬಯಲುಸೀಮೆ ಭಾಗದಲ್ಲೂ ಕಾರ್ಮಿಕರ ಕೊರತೆ, ಬೆಲೆಯ ಅಸ್ಥಿರತೆ ಇತ್ಯಾದಿ ಕಾರಣಕ್ಕೆ ಭತ್ತದ ಬೇಸಾಯ ಕುಸಿತ ಕಂಡಿದ್ದು, ಇದರಿಂದಾಗಿ ಕುಚ್ಚಲಕ್ಕಿ ಬೆಲೆ ಏರಿಕೆಯಾಗಿದೆ. ಮಲೆನಾಡ ಕೆಂಪಕ್ಕಿ ಕೂಡ 50-55 ರೂ ಕೆಜಿಗೆ ಆಗಿದ್ದು, ಭಾರೀ ಡಿಮ್ಯಾಂಡ್ ಸೃಷ್ಟಿ ಆಗಿದೆ.