ಮಂಗಳೂರು ಮುಂಬೈ ಅಂತೆ ಮಾದರಿ ಮಾಡುವೆ..!
– ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಹೊಸ ಕನಸು
– ಕೋಮುಸೂಕ್ಷ್ಮ ಹಣೆಪಟ್ಟ ಬದಲಾಯಿಸುವುದಕ್ಕೆ ಪ್ರಯತ್ನ
– ಪದ್ಮರಾಜ್ ಹೇಳಿದ್ದೇನು..?..ಕಾಂಗ್ರೆಸ್ ಪಕ್ಷವು ದ್ವೇಷವನ್ನು ಹಂಚಲ್ಲ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡದ ಅಭಿವೃದ್ಧಿಗೆ ನವಪಥದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಕೂಡ ದಕ್ಷಿಣ ಕನ್ನಡದ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ಮಂಗಳೂರು ನಗರವು ಮುಂಬೈನಂಥಹ ಮಹಾನಗರವಾಗಿ ಬೆಳೆಯಬೇಕಿದೆ. ಆ ನಗರ ಹೇಗೆ ದಿನದ 20 ಗಂಟೆ ಕಾರ್ಯಚಟುವಟಿಕೆಗಳಿಗೆ ತೆರೆದುಕೊಂಡಿರುತ್ತದೆಯೋ ಅದೇರೀತಿಯ ವ್ಯವಸ್ಥೆಯನ್ನು ಮಂಗಳೂರು ನಗರದಲ್ಲಿಯೂ ತರುವ ಅಗತ್ಯವಿದೆ. ಜತೆಗೆ ಕಳೆದ 33 ವರ್ಷಗಳಿಂದ ಕೋಮುಸೂಕ್ಷ್ಮ ಎಂಬ ಹಣೆಪಟ್ಟವನ್ನು ಪಡೆದುಕೊಂಡಿರುವ ಈ ಜಿಲ್ಲೆಯ ಪರಿಸ್ಥಿತಿಯನ್ನು ಬದಲಾಯಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಪದ್ಮರಾಜ್ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು ದ್ವೇಷವನ್ನು ಹಂಚಲ್ಲ. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆ ಬರದಂತೆ ಕಾರ್ಯಕರ್ತರು ಸಾಥ್ ಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ಬಾರಿ ಬದಲಾವಣೆ ಬಯಸಿದ್ದು ಸೋಲಿನ ಸರಪಣಿಯಿಂದ ಹೊರಬಂದು ವಿಜಯ ಸಾಧಿಸುತ್ತೇನೆ. ಮಂಗಳೂರಿನಲ್ಲಿ ಬಂದರು, ಏರ್ಪೋರ್ಟ್ ಸೇರಿದಂತೆ ಏನೆಲ್ಲ ದೊಡ್ಡ ಮಟ್ಟದ ಮೂಲಸೌಕರ್ಯ ಅಭಿವೃದ್ಧಿಗಳು ಆಗಿದೆಯೋ ಅದು ಕಾಂಗ್ರೆಸ್ ಕಾಲದ ಕೊಡುಗೆ. ಬಿಜೆಪಿ ನಾಯಕರು ಕಳೆದ 33 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಸಾಮರಸ್ಯದ ತುಳುನಾಡನ್ನು ದ್ವೇಷದ ಕಂದಕಕ್ಕೆ ದೂಡಿದ್ದು ಬಿಜೆಪಿ ಎಂದು ದೂರಿದರು.
ಮಂಗಳೂರು ನಗರ ಮತ್ತಷ್ಟು ಅಭಿವೃದ್ಧಿಯಾಗುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಕಂಬಳ, ಕರಾವಳಿ ಕಲೆ-ಸಂಸ್ಕೃತಿ ಹೆಸರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು. ಆದರೆ, ಹೊರಗಿನ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡುತ್ತಿಲ್ಲ. ಬಿಜೆಪಿಯವರಿಗೆ ಒಂದು ಸರಿಯಾದ ಹೈವೇ ಮಾಡುವುದಕ್ಕೂ ಆಗಿಲ್ಲ ಎಂದು ಹೇಳಿದರು.