ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ!
– ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ
– ಕುಕ್ಕೆ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ
– ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ
NAMMUR EXPRESS NEWS
ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ ಮನೆ ಮಾಡಿದೆ.
ಜನ ಮುಂಜಾನೆಯಿಂದಲೇ ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಕುಕ್ಕೆ ಸುಬ್ರಮಣ್ಯ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ ನಡೆಯಿತು. ಎಲ್ಲೆಡೆ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ನಡೆಯಿತು.
ಕುಡುಪುವಿನಲ್ಲಿ ಸಾವಿರಾರು ಜನ
ಮಂಗಳೂರಿನ ಕುಡುಪುವಿನ ಅನಂತ ಪದ್ಮನಾಭ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಜನ ಭಕ್ತರು ಪೂಜೆಯಲ್ಲಿ ಭಾಗಿಯಾದ್ರು. ಸುಮಾರು 3 ಲೋಡ್ನಷ್ಟು ಎಳೆನೀರು ಅಭಿಷೇಕ ಮಾಡಲಾಯಿತು.
ಕಾಪುವಿನಲ್ಲಿ ನಿಜ ಹಾವಿಗೆ ಪೂಜೆ
ಕಾಪುವಿನ ಮಜೂರು ನಿವಾಸಿ ಗೋವರ್ಧನ್ ರಾವ್ ರವರು ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ದಿಟ ನಾಗನಿಗೆ ಅಭಿಷೇಕ ನೆರವೇರಿಸಿದ್ದಾರೆ. ಗಾಯಗೊಂಡ ನಾಗರ ಹಾವನ್ನು ರಕ್ಷಿಸಿ, ಚಿಕಿತ್ಸೆ ನೀಡುವ ಕಾರ್ಯ ಮಾಡುತ್ತಿರುವ ಗೋವರ್ಧನ್ ರಾವ್ ಅವರು ನಾಗರಪಂಚಮಿ ಹಿನ್ನಲೆಯಲ್ಲಿ ಮನೆಯಲ್ಲಿರುವ ನಾಲ್ಕು ನಾಗರಹಾವಿಗೆ ಪೂಜೆ ಸಲ್ಲಿಸಿದ್ದಾರೆ.