ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಶಾಕ್!
– ಮಂಗಳೂರು ನಗರದಲ್ಲಿ 2543 ಕೇಸ್
– ಕುಡಿದು ಚಾಲನೆ, ನೋ ಪಾರ್ಕಿಂಗ್ ಸೇರಿ ಹಲವು ಕೇಸ್
NAMMUR EXPRESS NEWS
ಮಂಗಳೂರು: ನವೆಂಬರ್ 5ರಿಂದ ನವೆಂಬರ್ 12ರವರೆಗಿನ ಅವಧಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷರೇಟ್ ವ್ಯಾಪ್ತಿಯ ರಸ್ತೆಗಳಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ 2543 ಪ್ರಕರಣ ದಾಖಲಾಗಿದೆ. ಕುಡಿದು ವಾಹನ ಚಾಲನೆ ಮಾಡಿದ 21 ಪ್ರಕರಣ, ನಿಷೇಧಿತ ವಲಯಗಳಲ್ಲಿ ಪಾರ್ಕಿಂಗ್ 148 ಪ್ರಕರಣ, ಹೆಲೈಟ್ ರಹಿತ ಚಾಲನೆ 768 ಪ್ರಕರಣ, ಬಸ್ ಫುಟ್ ಬೋರ್ಡ್ ನಲ್ಲಿ ಪ್ರಯಾಣ, ಅಧಿಕ ಸಂಖ್ಯೆಯ ಪ್ರಯಾಣಕರನ್ನು ಹೇರಿಕೊಂಡು ಸಾವು 205 ಪ್ರಕರಣ ಒನ್ ವೇ, ನೋಎಂಟ್ರಿ ಪ್ರದೇಶದಲ್ಲಿ ವಾಹನ ಚಾಲನೆಯ 96 ಪ್ರಕರಣ, ಸಮರ್ಪಕ ನಂಬರ್ ಪ್ಲೇಟ್ ಇಲ್ಲದ 75 ಪ್ರಕರಣ, ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯ 55 ಪ್ರಕರಣ, ಟಿಂಟ್ ಅಳವಡಿಕೆ 48, ಸೀಟ್ ಬೆಲ್ಟ್ ಇಲ್ಲದೆ ಸಾಗಿದ 35, ರಿಕ್ಷಾ ಬಾಡಿಗೆ ನಿರಾಕರಣೆ, ಅತಿ ದುಬಾರಿ ಪ್ರಯಾಣ ದರದ 11 ಪ್ರಕರಣ, ಬೈಕ್ನಲ್ಲಿ ತ್ರಿವಳಿ ಸವಾರಿಯ 20 ಪ್ರಕರಣಗಳನ್ನು ದಾಖಲಿಸಲಾಗಿದೆ.