ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ: ಮಂಗಳೂರಿನಲ್ಲಿ ಮತ್ತೆ 7 ಮಂದಿಯ ಬಂಧನ
– ಬಂಧಿತರ ಸಂಖ್ಯೆ 13ಕ್ಕೆ ಏರಿಕೆ: ಗಾಯಾಳುಗಳ ವಿಚಾರಣೆ
– ಸುರತ್ಕಲ್: ಕಾರು, ಬಸ್ ಚಾಲಕ ಗಲಾಟೆ!
– ಅನ್ಯ ಕೋಮಿನ ಹುಡುಗರ ಜತೆ ಯುವತಿ!
NAMMUR EXPRESS NEWS
ಮಂಗಳೂರು: ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಬಂಟ್ವಾಳ ತಾಲೂಕಿನ ಬೋಳಿಯಾರ್ನಲ್ಲಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ತಾಜುದ್ದೀನ್ ಅಲಿಯಾಸ್ ಸಾದಿಕ್, ಸರ್ವಾನ್, ಮುಬಾರಕ್, ಅಶ್ರಫ್, ತಲ್ಲತ್, ಇಬ್ರಾನ್, ಕೋಲಿ ಇರ್ಶಾದ್ ಬಂಧಿತರು. ಇದಕ್ಕೂ ಮೊದಲು ಆರು ಮಂದಿಯನ್ನು ಬಂಧಿಸಲಾಗಿತ್ತು. ಶಾಕೀರ್, ಅಬ್ದುಲ್ ರಜಾಕ್, ಅಬುಬಕ್ಕರ್ ಸಿದ್ಧಿಕ್, ಸವಾದ್, ಮೋನು, ಅಬೂಬಕ್ಕರ್ ಎಂಬವರನ್ನು ಬಂಧಿಸಲಾಗಿತ್ತು. ಇದರೊಂದಿಗೆ ಒಟ್ಟು ಬಂಧಿತರ ಸಂಖ್ಯೆ 13ಕ್ಕೆ ಏರಿದೆ.
ಬೋಳಿಯಾರ್ ಬಾರ್ ಮುಂಭಾಗದಲ್ಲಿ ಹಲ್ಲೆ ಮತ್ತು ಚೂರಿ ಇರಿತ ಘಟನೆ ನಡೆದಿತ್ತು. ಈ ಘಟನೆ ದೃಶ್ಯ ಬಾರ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಡಿವಿಡಿಆರ್ನ್ನು ವಶಪಡಿಸಿಕೊಂಡಿದ್ದರು. ಈ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಮೂರು ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇತ್ತ ಈ ಕೃತ್ಯವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಹಿಂದೂಗಳ ಮೇಲಿನ ನಿರಂತರ ದಾಳಿ ಖಂಡಿಸಿ ರಾಜ್ಯವ್ಯಾಪಿ ಹೋರಾಟ ನಡೆಸುವುದಕ್ಕೆ ಮುಂದಾಗಿದೆ. ಇಂದು ಮಂಗಳೂರಿಗೆ ಭೇಟಿ ನೀಡಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ನಿಂದ ತಾಲಿಬಾಲ್ ಸರ್ಕಾರದ ಆಡಳಿತ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದರು.