ಲಿಫ್ಟ್ ಒಳಗಡೆ ಸಿಲುಕಿದ ವಿದ್ಯಾರ್ಥಿಗಳು!
– ವಿಟ್ಲದಲ್ಲಿ ನಡೆದ ಘಟನೆ: ಸ್ಥಳೀಯರಿಂದ ರಕ್ಷಣೆ
– ವಿದ್ಯಾರ್ಥಿಗಳನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನೆ
– ಸುರತ್ಕಲ್: ಅಡ್ಡ ಬಂದ ದನ: ಸ್ಕೂಟರ್ ಸವಾರ ಮೃತ್ಯು!
NAMMUR EXPRESS NEWS
ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ವಿದ್ಯಾರ್ಥಿಗಳು ಬಾಗಿಲು ಓಪನೆ ಆಗದೆ ಲಿಫ್ಟ್ನೊಳಗೆ ಸಿಲುಕಿ ಘಟನೆ ನಡೆದಿದೆ. ಬಹುಮಹಡಿ ಕಟ್ಟಡದಲ್ಲಿ ಲಿಫ್ಟ್ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿಗಳು, ಎಷ್ಟು ಹೊತ್ತಾದರೂ ಲಿಫ್ಟ್ನ ಬಾಗಿಲು ತೆರೆಯದೇ ಅದರ ಒಳಗೆ ಸಿಲುಕಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೊಂದರೆ ಕಂಡುಬಂದಿದ್ದು, ಕೂಡಲೇ ವಿದ್ಯಾರ್ಥಿಗಳು ತಮ್ಮ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿ ಲಿಫ್ಟ್ನ ಬಾಗಿಲಿಗೆ ರಾಡ್ ಹಾಕಿ ಮೀಟಿ ಬಾಗಿಲು ತೆಗೆದು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
ಬಳಿಕ ವಿದ್ಯಾರ್ಥಿಗಳನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ವಿಫ್ಟ್ ಸ್ಪೇಸ್ ಸಂಸ್ಥೆಯ ತಾಂತ್ರಿಕ ದೋಷದಿಂದ ಲಿಫ್ಟ್ನಲ್ಲಿ ವಿದ್ಯಾರ್ಥಿಗಳು ಸಿಲುಕಿ ಸ್ಥಳೀಯರ ರಕ್ಷಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುರತ್ಕಲ್: ಅಡ್ಡ ಬಂದ ದನ: ಸ್ಕೂಟರ್ ಸವಾರ ಮೃತ್ಯು!
ಸುರತ್ಕಲ್: ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಸವಾರ ರಸ್ತೆಗೆಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಪಣಂಬೂರು ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಕುಳಾಯಿ ನಿವಾಸಿ ಉಜ್ವಲ್(26) ಎಂದು ಗುರುತಿಸಲಾಗಿದೆ. ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.