ಕಟಪಾಡಿಯಲ್ಲಿ ಎರಡು ದಿನದ ಹಲಸು ಮೇಳ!
– ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಆಯೋಜನೆ
– ಹಲಸು ಖಾದ್ಯ ಸೇರಿ ಅನೇಕ ಆಕರ್ಷಣೆ
NAMMUR EXPRESS NEWS
ಮಂಗಳೂರು : ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು( ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ) ಇದರ ಸಹಯೋಗದೊಂದಿಗೆದ್ವಿತೀಯ ವರ್ಷದ ಹಲಸುಮೇಳ 2024 ಜೂನ್ 22-23 ರಂದು ನಡೆಯುತ್ತಿದೆ.
9.00 ಬೆಳಿಗ್ಗೆ ಯಿಂದ 9.00 ರಾತ್ರಿಯವರೆಗೆ ಎಸ್.ವಿ.ಎಸ್ ಹೈಸ್ಕೂಲ್, ಕಟಪಾಡಿ, ಉಡುಪಿಯಲ್ಲಿ ಹಲಸಿನ ಮೇಳ ನಡೆಯುತ್ತಿದೆ.
ಹಲಸಿನ ಹಣ್ಣಿನ ವಿವಿಧ ಬಗೆಯ ವಸ್ತುಗಳು ಹಾಗೆ ಹೀಗೆ ತಿನಿಸುಗಳು ಕೂಡ ಇಲ್ಲಿ ಲಭ್ಯವಿದೆ. ವಿವಿಧ ಬಗೆಯ ಹಲಸಿನ ಹಣ್ಣಿನ ಮಾರಾಟ, ಆಯುರ್ವೇದಿಕ್ ಗಿಡಮೂಲಿಕೆ ಬಳಸಿ ತಯಾರಿಸಲಾದ ವಸ್ತುಗಳು, ಶುದ್ಧವಾದ ಅಂತಹ ಜೇನುತುಪ್ಪ, ಸ್ವದೇಶಿ ಖಾದಿ ಬಟ್ಟೆಗಳು ಸೀರೆಗಳು, ಪರಿಸರ ಸ್ನೇಹಿ ಉತ್ಪನ್ನಗಳು, ಅಲಂಕಾರಿಕ ಗಿಡಗಳು ತೆಂಗಿನ ಗಿಡಗಳು, ಗೋ ಉತ್ಪನ್ನಗಳು, ಸಾವಯವ ಗೊಬ್ಬರ ವಿವಿಧ ಬಗೆಯ ಗಿಡಗಳು, ದೇಸಿ ತರಕಾರಿ ಬೀಜ, ಆಯುರ್ವೇದಿಕ್ ಉತ್ಪನ್ನಗಳು ಹಾಗೂ ಇನ್ನಿತರ ಸಾವಯವ ಉತ್ಪನ್ನಗಳು ಇದ್ದವು ಹಾಗೆಯೇ ಅನೇಕ ವಸ್ತುಗಳನ್ನು ಇಲ್ಲಿರುವಂತಹ ಜನರು ಪಡೆದುಕೊಳ್ಳಲು ಮುಂದಾಗಿದ್ದರು.
ಹಲಸಿನ ಖಾದ್ಯಕ್ಕೆ ಡಿಮ್ಯಾಂಡ್ ಡಿಮ್ಯಾಂಡ್!
ಹಲಸಿನ ಖಾದ್ಯಗಳಾದ ಹಲಸಿನ ಹೋಳಿಗೆ, ಹಲ್ವಾ, ಚಿಪ್ಸ್, ಮಾಂಬಳ, ಹಲಸಿನ ಗಟ್ಟಿ, ಐಸ್ ಕ್ರೀಮ್, ಮಿಲ್ಕ್ ಶೇಕ್, ಹಾಗೂ ಹಲಸಿನ ಹಣ್ಣಿನ ಕಬಾಬ್, ಗೋಬಿ ಹಾಗು ಇನ್ನಿತರ ಖಾದ್ಯಗಳು ಹಾಗೂ ವಸ್ತುಗಳು ಈ ಹಲಸಿನ ಮೇಳದಲ್ಲಿ ಬಂದಿದೆ ಸಾಕಷ್ಟು ಜನ ಈ ಹಲಸಿನ ಮೇಳದಲ್ಲಿ ಭಾಗವಹಿಸಿದ್ದು ವಿವಿಧ ಖಾದ್ಯ ಸೇವಿಸಿ ಸಂಭ್ರಮಪಟ್ಟರು.