ಬೆಂಗಳೂರು-ಮಂಗಳೂರು ಬಸ್ನಲ್ಲಿ ಯುವತಿಗೆ ಕಿರುಕುಳ!
– ಅನ್ಯಕೋಮಿನ ಯುವಕ ಕಿರುಕುಳ; ಉಪ್ಪಿನಂಗಡಿ ಠಾಣೆಗೆ ದೂರು
– ಬಸ್ಸಲ್ಲೇ ಧರ್ಮದೇಟು: ಅರ್ಧ ದಾರಿಯಲ್ಲೇ ಇಳಿದ ಯುವಕ
NAMMUR EXPRESS NEWS
ಗುಂಡ್ಯ: ಬೆಂಗಳೂರಿನಿಂದ ಮತದಾನಕ್ಕಾಗಿ ಖಾಸಗಿ ಬಸ್ಸಿನಲ್ಲಿ ಊರಿಗೆ ಬರುತ್ತಿದ್ದ ಹಿಂದು ಯುವತಿಗೆ ಅನ್ಯಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಗುಂಡ್ಯ ಬಳಿ ನಡೆದಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಬಸ್ನಲ್ಲಿ ಬರಬೇಕಾದರೆ ನಸುಕಿನ ವೇಳೆ ಯುವಕನೊಬ್ಬ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವತಿ ಮೇಲೆ ಕೈ ಮಾಡಿದ್ದಾನೆ. ಆಗ ಯುವತಿ ಸಿಟ್ಟಿಗೆದ್ದಿದ್ದು, ಕೂಡಲೇ ಈ ವಿಚಾರವನ್ನು ಚಾಲಕನ ಗಮನಕ್ಕೆ ತರಲಾಗಿದೆ. ಆದರೆ, ಯುವಕ ಕಿರುಕುಳ ನೀಡುವುದನ್ನು ಮತ್ತೆ ಮುಂದುವರಿಸಿದ್ದು, ಇದರಿಂದ ಸಿಟ್ಟಿಗೆದ್ದ ಯುವತಿ ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಅಷ್ಟರಲ್ಲಿ ಬೇರೆ ಪ್ರಯಾಣಿಕರೆಲ್ಲ ಎಚ್ಚರಗೊಂಡಿದ್ದು, ಯುವಕನ ವಿರುದ್ದ ಎಲ್ಲರೂ ಸಿಟ್ಟಾಗಿದ್ದಾರೆ. ಇನ್ನು ಬಸ್ನಲ್ಲಿ ಇದ್ದರೆ ಗೂಸಾ ಬೀಳಬಹುದೆಂಬ ಭಯದಿಂದ ಅರ್ಧಕ್ಕೆ ಇಳಿದು ಹೋಗಿದ್ದಾನೆ.
ತನಗೆ ಆಗಿರುವ ಅನ್ಯಾಯದ ಬಗ್ಗೆ ಯುವತಿ ಭಜರಂಗದ ದಳದ ಮುಖಂಡರಿಗೆ ತಿಳಿಸಿದ್ದು, ಉಪ್ಪಿನಂಗಡಿ ಠಾಣೆಗೆ ದೂರು ಕೂಡ ನೀಡಿದ್ದಾರೆ. ಯುವಕನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡಿದ್ದು, ಅದರಲ್ಲಿ ಆತನ ಆಧಾರ್ ಕಾರ್ಡ್ ಇತ್ತು. ಆ ವಿಳಾಸದಲ್ಲಿ ಲಾಯಿಲಾ ಗ್ರಾಮದ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳುವ ಸಾಧ್ಯತೆಯಿದೆ.