ಮೈಸೂರು ದಸರಾ ಸೇರಿ ರಾಜ್ಯದಲ್ಲಿ ಹೈ ಅಲರ್ಟ್!
– ಮೈಸೂರು, ಕುದ್ರೋಳಿ, ಮಂಗಳೂರು ಸೇರಿ ಎಲ್ಲೆಡೆ ಬಿಗಿ ಬಂದೋಬಸ್ತ್
– ಸಿಗಂದೂರಿನಲ್ಲಿ ಪ್ರಸಿದ್ಧ ದಸರಾ ಆಚರಣೆಗೆ ಸಿದ್ಧತೆ
– ಪ್ರತಿ ಮನೆ ಮನೆಯಲ್ಲೂ ದಸರಾ ಸಂಭ್ರಮ
NAMMUR EXPRESS NEWS
ಮೈಸೂರು /ಬೆಂಗಳೂರು: ರಾಜ್ಯದ ಪ್ರಸಿದ್ಧ ದಸರಾ ಮೈಸೂರು ದಸರಾಕ್ಕೆ ಭಾರೀ ಅಲರ್ಟ್ ಮಾಡಲಾಗಿದೆ.
ಲಕ್ಷಾಂತರ ಜನ ಸೇರುವ ಕಾರಣ ಸರ್ಕಾರ ಬಿಗಿ ಬಂದೋಬಸ್ತ್ ಒದಗಿಸಿದೆ. ಇನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಸಂಭ್ರಮದ ದಸರಾ ಆಚರಣೆ ಮಾಡಲಾಗುತ್ತಿದೆ. ಆಯುಧ ಪೂಜೆ ಬಳಿಕ ವಿಜಯದಶಮಿಗೆ ಎಲ್ಲೆಡೆ ಮೆರವಣಿಗೆ, ಜಂಬೂ ಸವಾರಿಗೆ ಜನ ಸೇರಲಿದ್ದಾರೆ. ಭದ್ರತಾ ದೃಷ್ಟಿಯಿಂದ ಸಾವಿರರೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಆಗಮಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ದಸರಾ ಸಂಭ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಲು ಸರ್ಕಾರ ವಿಶೇಷ ಭದ್ರತೆಯನ್ನು ಒದಗಿಸಿದೆ. ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದ್ದು ಈಗಾಗಲೇ ಎಲ್ಲ ಸಿದ್ದತೆಗಳು ನಡೆದಿದೆ, ಕಳೆದ ಎಂಟು ದಿನಗಳಿಂದ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು ಆನೆಗಳು ಸಿದ್ಧತೆ ನಡೆಸಿವೆ. ಇನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ರಾಜ್ಯದ ಗಮನ ಸೆಳೆದಿದೆ.
ಇನ್ನು ಯುವ ದಸರಾ, ಕುಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕಾರ್ಯಕ್ರಮಗಳು ನಡೆದಿದ್ದು ಮೈಸೂರು ದಸರಾ ದೇಶದಲ್ಲೇ ವಿಶೇಷತೆ ಪಡೆದಿದೆ. ದಸರಾವನ್ನು ಸಿಎಂ ಹಾಗೂ ಖ್ಯಾತ ಸಂಗೀತ ಸಾಹಿತಿ ಹಂಸಲೇಖ ಉದ್ಘಾಟನೆ ಮಾಡಿದ್ದು ಇದೀಗ ಕೊನೆಯ ಹಂತಕ್ಕೆ ಬಂದಿದೆ. ಮೈಸೂರು ದಸರವನ್ನು ಈಗಾಗಲೇ ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ. ಈಗ ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ದಸರವನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿ ಈ ಬಾರಿ ಅತ್ಯಂತ ವೈಭವಯುತವಾದ ದಸರವನ್ನು ಆಚರಣೆ ಮಾಡಿದ್ದು ಮಂಗಳೂರು ನಗರ ಸಿಂಗಾರಗೊಂಡಿದೆ.
ಶಿವಮೊಗ್ಗ, ಸಿಗಂದೂರು, ಶೃಂಗೇರಿಯಲ್ಲಿ ಕೂಡ ದಸರವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ದಸರವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಇಂದು ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದರೆ ವಿಜಯದಶಮಿ ಎಂದು ಪ್ರತಿ ತಾಲೂಕಿನಲ್ಲಿ ದಸರಾ ಮೆರವಣಿಗೆ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಬನ್ನಿ ಬಿಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆಯಾ ಕ್ಷೇತ್ರದ ತಾಲೂಕು ದಂಡಾಧಿಕಾರಿಗಳು, ಶಾಸಕರು ಭಾಗಿಯಾಗಲಿದ್ದಾರೆ. ಜೊತೆಗೆ ಅಲ್ಲಿನ ದಸರಾ ಸಮಿತಿ ನಿರ್ವಹಣೆಯನ್ನು ಮಾಡುತ್ತಿದೆ. ದುರ್ಗಿ ದೇವರನ್ನು ಅನೇಕ ಕಡೆ ಪ್ರತಿಷ್ಠಾಪನೆ ಮಾಡಲಾಗಿದೆ.
ಮನೆ ಮನೆಗಳಲ್ಲೂ ಕೂಡ ಗೊಂಬೆಗಳ ಪ್ರದರ್ಶನ ನಡೆಯುತ್ತಿದೆ. ಹೀಗಾಗಿ ಇಡೀ ದಸರಾ ರಾಜ್ಯವನ್ನು ಸಂಭ್ರಮದಲ್ಲಿ ಮುಳುಗಿಸಿದೆ. ದಸರಾದ ಅಂಗವಾಗಿ ವಿಶೇಷವಾಗಿ ಕೆ ಎಸ್ ಆರ್ ಟಿ ಸಿ ಅನೇಕ ಹೆಚ್ಚುವರಿ ಬಸ್ ವ್ಯವಸ್ಥೆಗಳನ್ನು ಮಾಡಲಾಗಿದ್ದರೆ ರೈಲ್ವೆ ಸೇವೆಯಲ್ಲೂ ಕೂಡ ಹೆಚ್ಚಿನ ಭೋಗಿಗಳನು ಹಾಗೂ ರೈಲ್ವೆ ಸೇವೆಯನ್ನು ರೈಲ್ವೆ ಇಲಾಖೆ ಮಾಡಿದೆ. ಅಲ್ಲದೆ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.