ಕಲುಷಿತ ಕುಡಿದು ಮೂವರು ಸಾವು!
– ಸಿದ್ದರಾಮಯ್ಯ ಭೇಟಿ, ಪರಿಹಾರ ಘೋಷಣೆ
– ಅಧಿಕಾರಿಗಳ ಅಮಾನತು: ಏನಿದು ಘಟನೆ?
NAMMUR EXPRESS NEWS
ಮೈಸೂರು: ಕಲುಷಿತ ನೀರು ಕುಡಿದು ಕೆ.ಸಾಲುಂಡಿ ಗ್ರಾಮದ ಅನೇಕ ಜನರು ಅಸ್ವಸ್ಥಗೊಂಡಿದ್ದರು. ಮೂರು ಜನ ಸಾವನ್ನಪ್ಪಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಮೃತರಿಗೆ ಪರಿಹಾರವನ್ನು ನೀಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬೋಗಾದಿ ಪಟ್ಟಣ ಪಂಚಾಯ್ತಿಯವರು ಪರೀಕ್ಷೆ ಮಾಡದೆ ನೀರು ಸರಬರಾಜು ಮಾಡಿದ್ದಾರೆ. ಕಲುಷಿತ ನೀರಿನಿಂದ ಕೆ.ಸಾಲುಂಡಿ ಗ್ರಾಮದ ಅನೇಕ ಜನ ಅಸ್ವಸ್ಥರಾಗಿದ್ದಾರೆ. ಬೋಗಾದಿ ಪಟ್ಟಣ ಪಂಚಾಯ್ತಿ ಚೀಫ್ ಆಫೀಸರ್, ಇಇ ಹಾಗೂ ಎಇಇ ಅವರನ್ನು ಅಮಾನತು ಮಾಡಲಾಗಿದೆ ಎಂದಿದ್ದಾರೆ.
ಇದೆ ವೇಳೆ ಕೆ ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಕಾಂತರಾಜು ಅವರ ನಿವಾಸಕ್ಕೆ ಗುರುವಾರ ಸಂಜೆ ಸಿಎಂ ಸಿದ್ದರಾಮ್ಯಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಅವರು, ರಾಜ್ಯ ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಮೃತ ಕಾಂತರಾಜು ಅವರ ಸಹೋದರ ರವಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.