ಮೈಸೂರಲ್ಲಿ ಚಿತ್ರನಗರಿ ಕನಸು ನನಸಾಗುತ್ತಾ?
– ವರುಣ ಕ್ಷೇತ್ರದಲ್ಲಿ 110 ಎಕರೆ ಜಾಗ ನಿಗದಿ
– ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಚಿತ್ರರಂಗದ ನಿಯೋಗ
NAMMUR EXPRESS NEWS
ಮೈಸೂರು: ಮೈಸೂರಲ್ಲಿ ಚಿತ್ರನಗರಿ ಕನಸು ನನಸಾಗುತ್ತಾ?. ಹೀಗೊಂದು ಭರವಸೆ ಈಗ ಮೂಡಿದೆ.
ಬಹುನಿರೀಕ್ಷಿತ ಚಿತ್ರನಗರಿಯನ್ನು ಮೈಸೂರಿನಲ್ಲೇ ಸ್ಥಾಪಿಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಪ್ರಶಸ್ತಿ ವಿಜೇತ ಚಲನಚಿತ್ರ ಕಲಾವಿದರ ನೇತೃತ್ವದಲ್ಲಿ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವುದರೊಂದಿಗೆ ಯೋಜನೆಯ ಕನಸಿಗೆ ಮತ್ತೆ ರೆಕ್ಕೆ ಮೂಡಿದೆ.
ಚಿತ್ರನಗರಿಯನ್ನು ಎಲ್ಲಿ ಸ್ಥಾಪಿಸಬೇಕೆಂಬ ಚರ್ಚೆಯೂ ಹಲವು ವರ್ಷಗಳಿಂದ ನಡೆದಿದ್ದು, ಬೆಂಗಳೂರು, ಮೈಸೂರು, ಹೆಸರಘಟ್ಟ ನಂತರ ರಾಮನಗರದ ಪ್ರಸ್ತಾಪವೂ ಬಂದಿತ್ತು. ಆದರೆ, ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 2014ರಲ್ಲೇ 110 ಎಕರ ಜಾಗವನ್ನು ಗುರುತಿಸಿದ ಬಳಿಕ ಹೆಚ್ಚೇನು ಪ್ರಗತಿ ಕಂಡು ಬಂದಿರಲಿಲ್ಲ. ಇದೀಗ ಭರವಸೆ ಮೂಡಿದೆ.
ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ ಕೂಡ ಮೈಸೂರಿನಲ್ಲೆ ಚಿತ್ರನಗರಿ ಸ್ಥಾಪನೆಯಾಗಬೇಕೆಂದು ಬಯಸಿದ್ದರು. ಸಿಎಂ ತವರಲ್ಲೇ ಚಿತ್ರ ನಗರಿ ನಿರ್ಮಾಣವಾಗಲಿದೆ.
ಉದ್ಯೋಗ ಸೃಷ್ಟಿ ಅವಕಾಶ!?
‘ಪ್ರತ್ಯಕ್ಷ ಪರೋಕ್ಷವಾಗಿ ಕನಿಷ್ಠ 50 ಸಾವಿರ ಮಂದಿಗೆ ಉದ್ಯೋಗ ಸಿಗುತ್ತದೆ. ದಿನಕ್ಕೆ 10 ಸಿನಿಮಾ ಅಥವಾ ಧಾರಾವಾಹಿಗಳ ಚಿತ್ರೀಕರಣ ನಡೆದರೆ 2 ಸಾವಿರ ಮಂದಿಗೆ ಕೆಲಸ ದೊರೆಯುತ್ತದೆ’ ಎಂದು ಹೇಳಲಾಗಿದೆ. ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 300 ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಚಲನಚಿತ್ರ ಪ್ರವಾಸೋದ್ಯಮ ನೀತಿ ಜಾರಿಗೊಳಿಸಿ, ಅತ್ಯಾಧುನಿಕ ಸ್ಟುಡಿಯೊ ನಿರ್ಮಿಸಿದರೆ ಹಲವು ಭಾಷೆಗಳವರೂ ಚಿತ್ರೀಕರಣಕ್ಕೆ ಬರುತ್ತಾರೆ. ಅದರಿಂದಲೂ ಸುಮಾರು 2ಸಾವಿರ ಮಂದಿಗೆ ಕೆಲಸ ಸಿಗುತ್ತದೆ. ಹೋಟೆಲ್, ಟ್ಯಾಕ್ಸಿ, ಸ್ಥಳೀಯ ಕಲಾವಿದರು, ಕಾರ್ಮಿಕರಿಗೂ ಉದ್ಯೋಗ ದೊರೆಯುತ್ತದೆ ಎನ್ನಲಾಗಿದೆ.
‘ಹೊರಾಂಗಣ ಹಾಗೂ ಒಳಾಂಗಣದ ಚಿತ್ರೀಕರಣಕ್ಕೆ ಪೂರಕವಾದ 250 ಸ್ಥಳಗಳು ಒಂದೇ ಕಡೆ ಇರುವ ಅವಕಾಶ ದೇಶದ ಇನ್ನೆಲ್ಲೂ ಇಲ್ಲ. ಹಾಲಿವುಡ್ನವರೂ ಇಲ್ಲಿ ಚಿತ್ರೀಕರಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ಇಲ್ಲ’. ಚಲನಚಿತ್ರ ಪ್ರವಾಸೋದ್ಯಮ ನೀತಿಯ ಪ್ರಕಾರ 1 1 ಕೋಟಿ ಅಥವಾ 1 2 ಕೋಟಿ ಸಹಾಯಧನ ನೀಡಿದರೆ ಚಿತ್ರನಗರಿ ಬಳಸುವವರೂ ಹೆಚ್ಚುತ್ತಾರೆ.
ಮಂಡಕಳ್ಳಿ ವಿಮಾನ ನಿಲ್ದಾಣ, ಎಕ್ಸ್ಪ್ರೆಸ್ ಹೈವೇ, ಚೆನ್ನೈ-ಮೈಸೂರು ಮಾರ್ಗದ ರೈಲು ಚಿತ್ರನಗರಿಗೆ ಪೂರಕವಾಗಿದೆ’.
ಮುಂಬೈ ಹಾಗೂ ಕೇರಳದ ಚಲನಚಿತ್ರ ಅಭಿವೃದ್ಧಿ ನಿಗಮದ ಮಾದರಿಯಲ್ಲಿ ಇಲ್ಲೂ ನಿಗಮ ಸ್ಥಾಪಿಸಬೇಕು. ಹೊರಗಿನವರಿಗೆ ಹೂಡಿಕೆಗೆ ಅವಕಾಶ ಕೊಡಬಾರದು. ನಿಗಮದ ಮೂಲಕವೇ ಎಲ್ಲವನ್ನೂ ನಿರ್ವಹಿಸಬೇಕು. ಇದೆಲ್ಲವನ್ನೂ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದರು.
ಮುಂದಿನ 25-30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರನಗರಿಯನ್ನು ಅತ್ಯಾಧುನಿಕವಾಗಿ ನಿರ್ಮಿಸಬೇಕೆಂದು ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರೆಲ್ಲರೂ ಸೇರಿ ಮನವಿ ಸಲ್ಲಿಸಿದ್ದೇವೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅದ.ಕ ಭಾ.ಮ.ಹರೀಶ್ ಪತಿಕಿಯಿಸಿದ್ದಾರೆ.