- ಮೈಸೂರಿನ ಟಿ.ನರಸೀಪುರದಲ್ಲಿ ಘಟನೆ
- ಚುನಾವಣೆ ಖರ್ಚಿಗೆ ಹಣ ಕೊಡದಿದ್ದಕ್ಕೆ ಸಿಟ್ಟು
ಮೈಸೂರು: ಚುನಾವಣೆ ಖರ್ಚಿಗೆ ಹಣ ನೀಡದ ಕಾರಣಕ್ಕೆ ದೀಪಾವಳಿ ಹಬ್ಬದಂದೇ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಮೈಸೂರಿನ ಟಿ.ನರಸೀಪುರದಲ್ಲಿ ನಡೆದಿದೆ.
ಟಿ.ನರಸೀಪುರದ ದೊಡ್ಡಮುಲಗೂಡು ಗ್ರಾಮದ ಮಾಜಿ ಗ್ರಾಪಂ ಸದಸ್ಯ ರಮೇಶ್(30) ಪತ್ನಿಯ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿ. ಪತ್ನಿ ಶಾಂತಮ್ಮ(22) ಪತಿಯಿಂದ ಸಾವನ್ನಪ್ಪಿರುವ ದುರ್ದೈವಿ. ರಮೇಶ್ ಕೃತ್ಯದ ನಂತರ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೆÇೀಲೀಸರು ಶೋಧಕಾರ್ಯ ನಡೆಸಿದ್ದಾರೆ. ಬನ್ನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.