ಕಾಫಿ ನಾಡಲ್ಲಿ ಹೆಚ್ಚಿದ ಮಂಗನ ಕಾಯಲೆ!
– ಕೊಪ್ಪ, ಶೃಂಗೇರಿ, ನರಸಿಂಹರಾಜಪುರದಲ್ಲಿ ಹೆಚ್ಚಿದ ಮಂಗನ ಕಾಯಲೆ
– ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಳ: ಬೇಕು ಅಲರ್ಟ್
NAMMUR EXPRESS NEWS
ಎನ್.ಆರ್.ಪುರ: ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮೂವರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ಕಾನೂರು, ಗುಬ್ಬಿಗಾ, 8ನೇ ಮೈಲಿಕಲ್ಲು ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗನ ಕಾಯಿಲೆ ಇರುವ ಪ್ರಕರಣ ಪತ್ತೆಯಾಗಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಹೇಳಿದರು.
ಕೊಪ್ಪದಲ್ಲಿ ಒಬ್ಬರಿಗೆ ಮಂಗನ ಕಾಯಲೆ
ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮದ ಒಬ್ಬರಿಗೆ ಕೆ.ಎಫ್.ಡಿ ಪತ್ತೆಯಾಗಿದೆ. ಇವರ ರಕ್ತ ಮಾದರಿಯನ್ನು ಮಂಗಳವಾರದಂದು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬುಧವಾರ ಪಾಸಿಟಿವ್ ವರದಿ ಬಂದಿದ್ದು, ಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಳ
ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಮಂಗನ ಕಾಯಲೆ ಹೆಚ್ಚಾಗಿದ್ದು, ದಿನೇ ದಿನೇ ಏರಿಕೆ ಆಗುತ್ತಿದೆ. ಈ ಬಗ್ಗೆ ಜನ ಮತ್ತು ಸರ್ಕಾರ ಗಮನ ವಹಿಸುವುದು ಅಗತ್ಯವಾಗಿದೆ.