ಬಿಜೆಪಿ ಖಾತೆ ಓಪನ್!
– ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ
– ಮೋದಿ ತವರಲ್ಲಿ ಗುಜರಾತ್ನ 26 ಸ್ಥಾನಗಳ ಪೈಕಿ ಮೊದಲ ಗೆಲುವು
NAMMUR EXPRESS NEWS
ನವ ದೆಹಲಿ: ದೇಶದಲ್ಲಿ ಬಿಜೆಪಿ ತನ್ನ ಗೆಲುವಿನ ಖಾತೆ ತೆರೆದಿದೆ. ಈಗಾಗಲೇ ದೇಶದಲ್ಲಿ ಲೋಕ ಸಭಾ ಚುನಾವಣೆ ಶುರುವಾಗಿದೆ. ಜೂ.4ರಂದು ಫಲಿತಾಂಶ ಬರಲಿದೆ.
ಮೊದಲ ಗೆದ್ದವರು ಯಾರು?
ಏಪ್ರಿಲ್ 22 ರಂದು ಬಿಜೆಪಿಯ ಮುಖೇಶ್ ದಲಾಲ್ ಅವರು ಸೂರತ್ನ ಲೋಕಸಭಾ ಕ್ಷೇತ್ರದಿಂದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖೇಶ್ ದಲಾಲ್ ವಿಜೇಯದ ಪರಿಣಾಮ ಗುಜರಾತ್ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಿದೆ.
ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಸೋಮವಾರ ಬಹುಜನ ಪಕ್ಷೇತರರು ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಪ್ಯಾರೇಲಾಲ್ ಭಾರ್ತಿ ಸೇರಿದಂತೆ ಎಂಟು ಅಭ್ಯರ್ಥಿಗಳು ತಮ್ಮ ಪತ್ರಗಳನ್ನು ಹಿಂಪಡೆದಿದ್ದಾರೆ. ಭಾನುವಾರ ಸೂರತ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ಫಾರಂ ಕೂಡ ರದ್ದಾಗಿತ್ತು, ಅದರ ನಂತರ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಪರಿಣಾಮ ಮುಖೇಶ್ ದಲಾಲ್ ಅವಿರೋಧವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಸೂರತ್ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧದ 8 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಹಾಗಾಗಿ ಬಿಜೆಪಿಯ ಮುಖೇಶ್ ದಲಾಲ್ ಅವರನ್ನು ಅವಿರೋಧವಾಗಿ ಘೋಷಿಸಲಾಗಿದೆ. ಬಿಜೆಪಿಯ ಮುಖೇಶ್ ದಲಾಲ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಮೇ 7 ರಂದು ಸೂರತ್ ಸಂಸದೀಯ ಸ್ಥಾನಕ್ಕೆ ಈಗ ಯಾವುದೇ ಮತದಾನ ಇರುವುದಿಲ್ಲ.