ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಡೌನ್!
– ಲಾಗಿನ್ ಸಮಸ್ಯೆ, ಫೀಡ್ ರಿಫ್ರೆಶ್ ಸಮಸ್ಯೆ: ಬಳಕೆದಾರರ ಪರದಾಟ
– ಏಕೆ ಹ್ಯಾಂಗ್ ಆಯ್ತು..ಏನಿದು ಸಮಸ್ಯೆ
NAMMUR EXPRESS NEWS
ನವದೆಹಲಿ : ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಟುಕ್ ಪ್ರೊಫೈಲ್ ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇರಿದಂತೆ ಕಂಪನಿಯ ಒಡೆತನದ ಇತರ ಸೇವೆಗಳಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.
ಲಾಗಿನ್ ಸಮಸ್ಯೆಗಳು ಮತ್ತು ಫೀಡ್ ರಿಫ್ರೆಶ್ ಸಮಸ್ಯೆಗಳು.!
ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಗಳಿಂದ ಲಾಗ್ ಔಟ್ ಆಗುವುದು, ಮತ್ತೆ ಲಾಗ್ ಇನ್ ಮಾಡುವುದು ಅಸಾಧ್ಯವಾಗುವಂತಹ ವಿವಿಧ ಸಮಸ್ಯೆಗಳನ್ನ ವರದಿ ಮಾಡುತ್ತಿದ್ದಾರೆ. ಅಂತೆಯೇ, ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಫೀಡ್ ಗಳನ್ನ ರಿಫ್ರೆಶ್’ಗೊಳಿಸಲು ತೊಂದರೆಗಳನ್ನ ಎದುರಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳಿಗೆ ಸ್ಟೋರಿ ಮತ್ತು ಕಾಮೆಂಟ್ಗಳು ಲೋಡ್ ಆಗಲು ವಿಫಲವಾಗಿವೆ. ಮೆಟಾ ಅಭಿವೃದ್ಧಿಪಡಿಸಿದ ಬ್ರೆಡ್ಸ್ ಎಂಬ ಅಪ್ಲಿಕೇಶನ್ ಸಹ ಸಂಪೂರ್ಣ ಸ್ಥಗಿತವನ್ನ ಅನುಭವಿಸುತ್ತಿದೆ, ಬಿಡುಗಡೆಯಾದ ನಂತರ ದೋಷ ಸಂದೇಶವನ್ನ ಪ್ರದರ್ಶಿಸುತ್ತದೆ.