ಎನ್.ಡಿ.ಎಗೆ ಇಂಡಿಯಾ ಟಕ್ಕರ್!
– ಭಾರೀ ಪೈಪೋಟಿ: ಮೊದಲ ಗೆಲುವು ಬಿಜೆಪಿಗೆ!
– ಎಕ್ಸಿಟ್ ಪೋಲ್ ಹೇಳಿದಷ್ಟು ಸುಲಭ ಇಲ್ವಾ?
– ಆರಂಭಿಕ ಹಂತದಲ್ಲಿ ಭಾರೀ ಹೋರಾಟ!
– ಮೋದಿ ತಂಡಕ್ಕೆ ಗೆಲುವು ಪಕ್ಕಾ ಅಂತಿದೆ ರಿಸಲ್ಟ್ಸ್
NAMMUR EXPRESS NEWS
ನವ ದೆಹಲಿ: ಎನ್.ಡಿ.ಎಗೆ ಇಂಡಿಯಾ ಟಕ್ಕರ್ ನೀಡುತ್ತಿದೆ. ಸುಮಾರು 210 ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದೆ. ಎಕ್ಸಿಟ್ ಪೋಲ್ ಹೇಳಿದಷ್ಟು ಸುಲಭ ಇಲ್ಲ. ಆದರೆ ಮೋದಿ ನೇತೃತ್ವ ಸರ್ಕಾರ ರಚನೆ ಸೂಚನೆ ಕಾಣುತ್ತಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಭಾರೀ ಮುನ್ನಡೆ ಸಾಧಿಸುತ್ತಿದೆ.
ಬಿಜೆಪಿಗೆ ಮೊದಲ ಗೆಲುವು!
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿದೆ. ಮತ ಎಣಿಕೆ ಆರಂಭಕ್ಕೂ ಮೊದಲೇ ಬಿಜೆಪಿ ಒಂದು ಸ್ಥಾನ ಗೆದ್ದು ಬೀಗಿದೆ. ಅಷ್ಟಕ್ಕೂ ಬಿಜೆಪಿಯ ಭದ್ರಕೋಟೆ ಗುಜರಾತ್ ರಾಜ್ಯದ ಸೂರತ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾದ ನಂತರ, ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡ ಬಳಿಕ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಖೇಶ್ ದಲಾಲ್ ಅವರ ಎದುರಲ್ಲಿ, ಯಾವುದೇ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯೂ ಆಗಿದ್ದಾರೆ.