ನೀಟ್ ಪರೀಕ್ಷೆ: ನ್ಯೂ ವೈಬ್ರೆಂಟ್ ಕಾಲೇಜು ಅಮೋಘ ಸಾಧನೆ
– ಕಾಲೇಜಿನ 28 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ
– ವೈಬ್ರೆಂಟ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ
– ನೀಟ್ ಲಾಂಗ್ ಟರ್ಮ್ ಕೋರ್ಸ್ ಅಲ್ಲಿ ವಿಶೇಷ ಸೇವೆ
– ಮಹೇಶ್ 695 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಹಾಗೂ ಕೆಟಗರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 73ನೇ Rank ಅನ್ನು ಪಡೆದಿರುತ್ತಾರೆ
NAMMUR EXPRESS NEWS
ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಮೂಡುಬಿದಿರೆಯ ನ್ಯೂ ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಪಿಯುಸಿ ಮತ್ತು ಒಂದು ವರ್ಷದ ನೀಟ್ ಲಾಂಗ್ರ್ಮ್ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಪಡೆದು ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾರೆ.
200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ಮೆಡಿಕಲ್ ಸೀಟ್ ಸಾಧ್ಯತೆ
ಸಂಸ್ಥೆಯಿಂದ ಪರೀಕ್ಷೆ ಬರೆದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟ್ ಲಭಿಸುವ ನಿರೀಕ್ಷೆ ಇದೆ. ಮಹೇಶ್ 695 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಕೆಟಗೆರಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 73ನೇ ಬ್ಯಾಂಕ್ ಗಳಿಸಿ ಸಾಧನೆಗೈದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳು ಇವರೇ..!
ಚಂದನ್ ಆರ್ 690, ಮಹೇಂದ್ರ ರೆಡ್ಡಿ 675, ಪ್ರಜ್ವಲ್ 662, ಜಿ.ಟಿ. ಸೃಷ್ಟಿ ಕೋಟಿ 661, ಬೆನಕ ಟಿ.ಎಸ್ 648, ರಾಹುಲ್ ಕೆ.ಎಸ್ 646, ಸೂರಜ್ ಎಂ. ಸಾಗರ್ 643, ಐರೋಲ್ ಡೀನಾ ರೋಡ್ರಿಗಸ್ 642, ಸುಜಯ್ ಪಿ.ವಿ 632, ಅಕ್ಷತಾ ಪಿ ಬಿರದರ್ 632, ಇ ಧನುಶ್ರೀ 631, ಎಂ. ಸುಹಾಸ್ 630. ಕೆ. ಪ್ರಗತಿ 630. ವಿಕಾಸ್ ಬಿ.ಆರ್ 630, ಪ್ರೀತಮ್ ನಾಯ್ಡ್ 627. ಹೆಚ್.ಎಸ್ ಪ್ರಜ್ವಲ್ 620, ಎನ್.ಎಸ್ ಹರ್ಷಿತ್ 620. ವಿಶಾಲ್ ವಿ ಪಟ್ಟಣಶೆಟ್ಟಿ 617, ಬೀರಪ್ಪ ಎಂ.ಕೆ 615. ಸಿಂಚನಾ ಅರಸ್ 612. ಪಿ.ಎಸ್ ಚಂದನ್ ಕುಮಾರ್ 612, ಮುಹಮ್ಮದ್ ರುಹೈಬ್ 611. ಅಶ್ವಿನ್ ಸಿ.ನಾಯ್ಕ 609, ಅಭಿಷೇಕ್ ಶೇಟ್ 606, ಅನಿಲ್ ಕುಮಾರ್ 606, ಮಲ್ಲಿಕಾರ್ಜುನ್ ಜೆ.ಕಂಬಾರ್ 604, ಕಾರ್ತಿಕ್ ಕರೋಲಿ 600.
650ಕ್ಕಿಂತ ಹೆಚ್ಚು ಅಂಕಗಳನ್ನು 5 ವಿದ್ಯಾರ್ಥಿಗಳು, 600ಕ್ಕಿಂತ ಹೆಚ್ಚು ಅಂಕ 28, 550ಕ್ಕಿಂತ ಹೆಚ್ಚು ಅಂಕ 86, 500 ಕ್ಕಿಂತ ಹೆಚ್ಚು ಅಂಕ 162 ವಿದ್ಯಾರ್ಥಿಗಳು ಪಡೆದಿರುತ್ತಾರೆ.
ಆರು ಜನ ನುರಿತ ಉಪನ್ಯಾಸಕರ ತಂಡ ಕಟ್ಟಿ ಬೆಳೆಸಿದ ಸಂಸ್ಥೆ!
ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ಕಳೆದೆರಡು ವರ್ಷದ ಹಿಂದೆ ಆರು ಜನ ನುರಿತ ಉಪನ್ಯಾಸಕರ ತಂಡವು ಕಟ್ಟಿ ಬೆಳೆಸಿದ ನ್ಯೂ ವೈಬ್ರೆಂಟ್ ಕಾಲೇಜಿನಲ್ಲಿ ಪಿಯು ಬೋರ್ಡ್ ಪರೀಕ್ಷೆಯ ತಯಾರಿಯೊಂದಿಗೆ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಉತ್ತಮ ತರಬೇತಿಯನ್ನು ನೀಡುವ ಇಂಟಿಗ್ರೇಟೆಡ್ ಕೋಚಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಒಂದು ವರ್ಷದ ನೀಟ್ ಲಾಂಗ್ ಟರ್ಮ್ ತರಬೇತಿಯಲ್ಲೂ ಬೆಸ್ಟ್ ಕಾಲೇಜು
ಪಿಯುಸಿ ಶಿಕ್ಷಣದೊಂದಿಗೆ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಪ್ರವೇಶದ ಅರ್ಹತೆಗೆ ಬೇಕಾದಷ್ಟು ಅಂಕ ಗಳಿಸಲು ವಿಫಲರಾದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಒಂದು ವರ್ಷದ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡಲಾಗುತ್ತಿದೆ. ಕಾಲೇಜಿನಿಂದ ತರಬೇತಿ ಪಡೆದು ಕಠಿಣ ಪರಿಶ್ರಮದಿಂದ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ