ದೇಶವೇ ಈಗ ಸಸ್ಪೆನ್ಸ್!
– ಮೋದಿ ಪ್ರಧಾನಿ ಓಕೆ, ಇನ್ನು ಸ್ಪಷ್ಟ ಇಲ್ಲ!
– ಪ್ರಧಾನಿ ರೇಸ್ ಅಲ್ಲಿ ಹೊಸ ಮುಖಗಳು!
– ಈಗ ಜೆಡಿಯು- ಟಿಡಿಪಿ ಕಿಂಗ್ ಮೇಕರ್ ಆಗುತ್ತಾ?
– ನಿತೀಶ್ ಕುಮಾರ್ ಪ್ರಧಾನಿ ಆಗ್ತಾರಾ?
– ಪಕ್ಷೇತರರಿಗೂ ಡಿಮ್ಯಾಂಡ್ ಸೆಟ್ ಆಗುತ್ತಾ?
– ಜೆಡಿಯು, ಟಿಡಿಪಿ ಜತೆ ಕಾಂಗ್ರೆಸ್-ಬಿಜೆಪಿ ಮಾತುಕತೆ
– ಪ್ರಧಾನಿ ಅಭ್ಯರ್ಥಿ ಬದಲಾವಣೆ?
NAMMUR EXPRESS NEWS
ನವದೆಹಲಿ: ದೇಶದ ರಾಜಕೀಯ ಸಸ್ಪೆನ್ಸ್ ಹಂತಕ್ಕೆ ತಲುಪಿದೆ. ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಇಕ್ಕಟ್ಟು ಸೃಷ್ಟಿ ಆಗಲಿದೆ. ಲೋಕಸಭಾ ಚುನಾವಣೆ 2024 ರ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದ್ದು, ಬಿಜೆಪಿಗೆ ಇನ್ನೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಇಂಡಿಯಾ ಮೈತ್ರಿಕೂಟ ಕಸರತ್ತು ಆರಂಭಿಸಿದೆ. ಸದ್ಯ ಎನ್ ಡಿಎ ಈ ಪೈಕಿ ಜೆಡಿಯು, ಟಿಡಿಪಿ ಒಟ್ಟು 30 ಕ್ಷೇತ್ರಗಳಲ್ಲಿ ಮುನ್ನಡೆ, ಇಬ್ಬರು ನಾಯಕರ ಜೊತೆಗೆ ಮಾತನಾಡಲು ಕಾಂಗ್ರೆಸ್ ನಾಯಕರು ಸಿದ್ದರಾಗಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಬಿಜೆಪಿ 238, ಕಾಂಗ್ರೆಸ್ 97, ಎಸ್ಪಿ 33, ಟಿಎಂಸಿ 29, ಡಿಎಂಕೆ 21, ಜೆಡಿಯು 15, ಎಸ್ಎಸ್ (ಉದ್ಧವ್ ಠಾಕ್ರೆ ಬಣ) 10, ಎಸ್ಎಸ್ ಶಿಂಧೆ 6, ಟಿಡಿಪಿ 16, ವೈಎಸ್ಆರ್ಸಿಪಿ 4, ಎಎಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಸದ್ಯದ ಸ್ಥಿತಿ ಏನಿದು?
ಎನ್. ಡಿ. ಎ ಒಕ್ಕೂಟ 290, ಇಂಡಿಯಾ ಒಕ್ಕೂಟ 230, ಪಕ್ಷೇತರರು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ಬಿಜೆಪಿ 236 ಸ್ಥಾನ ಪಡೆದಿದೆ.
ಪ್ರಧಾನಿ ರೇಸ್ ಅಲ್ಲಿ ಹೊಸ ಮುಖಗಳು!
ಕಳೆದ ಎರಡು ಅವಧಿಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇತ್ತು. ಆದರೆ ಈಗ ಗೊಂದಲ ಸೃಷ್ಟಿಯಾಗಿದೆ. ಏಕೆಂದರೆ ದೇಶದಲ್ಲಿ ರಾಜಕೀಯ ಭಾರೀ ಟ್ವಿಸ್ಟ್ ಪಡೆದಿದೆ. ನರೇಂದ್ರ ಮೋದಿ ಬಹುತೇಕ ಪಕ್ಕಾ. ಒಂದು ವೇಳೆ ಸರ್ಕಾರ ರಚನೆ ಮಾಡದಿದ್ರೆ ಅಚ್ಚರಿ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್, ಶರದ್ ಪಾವರ್, ಚಂದ್ರಬಾಬು ನಾಯ್ಡು, ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಧಾನಿ ರೇಸ್ ಬಂದಿದೆ.