ಹ್ಯಾಪಿ ಬರ್ತ್ ಡೇ ನಮೋ…!
– ಪ್ರಧಾನಿ ಮೋದಿ ಅವರಿಗೆ 74 ವರ್ಷದ ಸಂಭ್ರಮ: ದೇಶದೆಲ್ಲೆಡೆ ರಕ್ತದಾನ, ವಿಶೇಷ ಕಾರ್ಯಕ್ರಮ
– ಗುಜರಾತಿನ ಗಲ್ಲಿಯಿಂದ ದೇಶದ ಚುಕ್ಕಾಣಿ ಹಿಡಿವವರೆಗೆ ಪಯಣ
NAMMUR EXPRESS NEWS
ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಜೀ ಅವರಿಗೆ 74 ವರ್ಷ!.
ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ನಾಯಕ ಸೆಪ್ಟೆಂಬರ್ 17, 1950 ರಂದು ಗುಜರಾತಿನ ವಡ್ನಗರದಲ್ಲಿ ದಿನಸಿ ವ್ಯಾಪಾರಿಗಳ ಕುಟುಂಬದಲ್ಲಿ ಜನಿಸಿದರು. ಭಾರತದ 15ನೇ ಪ್ರಧಾನ ಮಂತ್ರಿಯಾಗಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಎಂದರೆ ತಪ್ಪಾಗದು.
ಬಾಲ್ಯದಲ್ಲಿ, ಮೋದಿಯವರು ತಮ್ಮ ತಂದೆಗೆ ವಡ್ನಗರ್ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರಲು ಸಹಾಯ ಮಾಡುತ್ತಿದ್ದರು. ನಂತರ ಬಸ್ ನಿಲ್ದಾಣದ ಬಳಿ ತನ್ನ ಸಹೋದರನೊಂದಿಗೆ ಟೀ ಸ್ಟಾಲ್ ನಡೆಸುತ್ತಿದ್ದರು ಎಂದು ನರೇಂದ್ರ ಮೋದಿ ದಿ ಮ್ಯಾನ್, ದಿ ಟೈಮ್ಸ್ ಎಂಬ ಪುಸ್ತಕದ ಪ್ರಕಾರ ನಿಲಂಜನ್ ಮುಖೋಪಾಧ್ಯಾಯ ಅವರು ಬರೆದಿದ್ದಾರೆ.
ನರೇಂದ್ರ ಮೋದಿಯವರು “ ಜನ ನಾಯಕ”. ಜನಸಾಮಾನ್ಯರ ಕ್ಷೇಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಬಡಜನತೆಯ ಕಷ್ಟಕಾರ್ಪಣ್ಯ ನಿವಾರಣೆಗೆ , ಸಮಸ್ಯೆಗಳ ಪರಿಹಾರಕ್ಕಾಗಿ ಜೀವನವನ್ನು ಸಮರ್ಪಿಸಿಕೊಂಡವರು. ಜನರ ಜೊತೆ ಬೆರೆವ, ಅವರ ಜೀವನಾನುಭವ ಹಂಚಿಕೊಳ್ಳುವ ವ್ಯಕ್ತಿತ್ವ . ಜನರ ನೋವು, ನಲಿವು, ಸುಖ ದುಃಖಗಳಲ್ಲಿ ಪಾಲುದಾರರಾಗುವುದಕ್ಕಿಂತ ಹೆಚ್ಚಿನ ಏನನ್ನೂ ಬಯಸದ ಪ್ರಾಮಾಣಿಕ ಜೀವ.
ದೇಶ ಕಂಡ ಅಪ್ರತಿಮ ನಾಯಕ
ಭಾರತ ಕಂಡ ಅಪ್ರತಿಮ ನಾಯಕ ಮೋದಿ ಮೂರನೇ ಬಾರಿಗೆ ದಾಖಲೆಯ ಪ್ರಧಾನಿ ಪಟ್ಟ ಏರಿದ್ದಾರೆ. ಅದರಲ್ಲೂ ಕಾಂಗ್ರೆಸ್ಸೇತರ ನಾಯಕರಾಗಿ ಅತೀ ಹೆಚ್ಚು ವರ್ಷ ದೇಶವನ್ನು ಆಳುತ್ತಿರುವವರು ಮೋದಿ. ವಿಶ್ವ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಮೋದಿ ಅವರ ಹುಟ್ಟು ಹಬ್ಬದಂದು ಅವರ ಸೇವೆಗೆ ನಮನಗಳು.
2024ರಲ್ಲಿ ಮತ್ತೆ ಅಧಿಕಾರಕ್ಕೆ ಮೋದಿ ಟೀಂ
2 ಬಾರಿ 10 ವರ್ಷ ಆಡಳಿತ ನಡೆಸಿದ ಮೋದಿ ಅವರು 2024ರ ಲೋಕ ಸಭಾ ಚುನಾವಣೆಯಲ್ಲಿ ಎನ್.ಡಿ. ಎ ಒಕ್ಕೂಟದ ಬಹುಮತದೊದಿಗೆ ಮತ್ತೆ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಈ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಿಸಲು ಶ್ರಮ ವಹಿಸುತ್ತಿದ್ದಾರೆ.
ದೇಶದ ಎಲ್ಲೆಡೆ ಸಂಭ್ರಮ: ವಿಶೇಷ ಪೂಜೆ, ರಕ್ತದಾನ
ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ದೇಶದ ಎಲ್ಲೆಡೆ ಮೋದಿ ಅವರ ಹುಟ್ಟು ಹಬ್ಬವನ್ನು ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಶೇಷ ಪ್ರಾರ್ಥನೆ, ರಕ್ತದಾನ ಶಿಿದ ಮೂಲಕ ಆರಣೆ ಮಾಡುತ್ತಿದ್ದರೆ. ಎಲ್ಲೆಡೆ ಮೋದಿ ಅಭಿಮಾನ ಮೆರೆಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇವತ್ತು ಟ್ರೆಂಡಿಂಗ್
ಮೋದಿ ಅವರಿಗೆ ಶುಭಾಶಯ ಮತ್ತು ಅವರ ಬಗೆಗಿನ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ಹುಟ್ಟು ಹಬ್ಬವನ್ನು ತಮ್ಮ ಹುಟ್ಟು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.