ಸಿಡಿಲು ಬಡಿದು ಒಂದೇ ದಿನ 26 ಮಂದಿ ಸಾವು!
– ಬಿಹಾರದ ಹಲವು ಜಿಲ್ಲೆಯಲ್ಲಿ ಮಳೆ ದುರಂತ
– ಚೀನಾದಲ್ಲಿ ಮಳೆ ಅಬ್ಬರಕ್ಕೆ 15 ಮಂದಿ ಬಲಿ
– ಕಮಲಶಿಲೆಯಲ್ಲಿ ಅರ್ಚಕರು ನೀರುಪಾಲು!
– ಅನಿಲ ಸೋರಿಕೆಯಿಂದ 16 ಮಂದಿ ದುರ್ಮರಣ
NAMMUR EXPRESS NEWS
ಪಾಟ್ನಾ (ಬಿಹಾರ):ಸಿಡಿಲು ಬಡಿದು ಒಂದೇ ದಿನ 26 ಮಂದಿ ಸಾವು ಕಂಡಿರುವ ಘಟನೆ ಬಿಹಾರದ ಹಲವು ಜಿಲ್ಲೆಯಲ್ಲಿ ನಡೆದಿದೆ.
ಸಿಡಿಲು ಬಡಿದು ರೋಹ್ಲಾಸ್ನಲ್ಲಿ 6 ಮಂದಿ ಹಾಗೂ ಬಕ್ಸಾರ್ನಲ್ಲಿ 3 ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಹಸುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ ಮಹಿಳೆ ಕೂಡ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಬಿಹಾರದ ಜನಜೀವನ ಅಸ್ತವ್ಯಸ್ತವಾಗಿದೆ. ಬಿಹಾರದ ಹಲವು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಬರೋಬ್ಬರಿ 26 ಮಂದಿ 24 ಗಂಟೆಯೊಳಗೆ ಸಾವನ್ನಪ್ಪಿದ್ದಾರೆ.ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು 26 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಚೀನಾದಲ್ಲಿ ಮಳೆರಾಯನ ಅಬ್ಬರ:15 ಮಂದಿ ಬಲಿ!
ಚೀನಾದಲ್ಲಿ ಮಳೆ ಅಬ್ಬರ ಜೋರಾಗಿದೆ. ಪರಿಣಾಮವಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವು ಮಂದಿ ಕಾಣೆಯಾಗಿದ್ದಾರೆ. ಸೋಮವಾರದಿಂದ ಈವರೆಗೆ ಸುರಿದ ಭಾರಿ ಮಳೆಗೆ 15 ಜನರು ಸಾವನ್ನಪ್ಪಿದ್ದಾರೆ ಮತ್ತು ನೈಋತ್ಯ ಚೀನಾದ ಚಾಂಗ್ಕಿಂಗ್ ಪುರಸಭೆಯಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ ಕ್ಸಿನ್ಹುವಾ ಹೇಳಿದೆ.
ಕಾಲು ತೊಳೆಯಲು ಹೋದ ಅರ್ಚಕ ನೀರುಪಾಲು
ಕುಂದಾಪುರ ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಸ್ಥಳಿಯರು ಎಚ್ಚರಿಕೆ ವಹಿಸಬೇಕಿದೆ. ಅಂದಿನ ದಿನಗಳಲ್ಲಿ ಕಮಲಶಿಲೆಯ ಗರ್ಭಗುಡಿಯಲ್ಲಿ ತಾಯಿ ಬ್ರಾಹ್ಮ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಮಾಡಿಕೊಂಡಿದ್ದ ಶೇಷಾದ್ರಿ ಐತಾಳ್ (75) ಅವರು ಭಾರೀ ಮಳೆಗೆ ಬಲಿಯಾಗಿದ್ದಾರೆ.
ಕಮಲಶಿಲೆ ದೇವಸ್ಥಾನದ ಹಿರಿಯ ಅರ್ಚಕರಾದ ಶೇಷಾದ್ರಿ ಐತಾಳ್ ಅವರು ಕಾಲು ತೊಳೆಯಲು ಕುಬ್ಬಾ ನದಿಗೆ ಮೆಟ್ಟಿಲು ಇಳಿದು ಹೋಗುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಅವರನ್ನು ಯಾರು ಗಮನಿಸಿದ ಕಾರಣ ನೀರಿನ ಹರಿವು ಜೋರಾಗಿ ಇದ್ದದ್ದರಿಂದ ಶೇಷಾದ್ರಿ ಐತಾಳ್ ಅವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಎಂದಿನಂತೆ ಕಾಲು ತೊಳೆಯಲು ಕುಬ್ಬಾ ನದಿಗೆ ಇಳಿದಿದ್ದಾರೆ. ಕಾಲು ಜಾರಿದೆ ಅ ಸಮಯದಲ್ಲಿ ಕುಬ್ಬೆಯ ಹರಿವು ಜೋರಾಗಿದ್ದರಿಂದ ಐತಾಳರು ಕುಬ್ಬೆಯಲ್ಲಿ ಕೊಚ್ಚಿ ಹೋಗಿದ್ದಾರೆ ಈ ಘಟನೆ ಬುಧವಾರ ಸಂಭವಿಸಿದೆ. ನದಿಗೆ ಬಿದ್ದ ಜಾಗದಿಂದ ಸುಮಾರು ನೂರು ಮೀಟರ್ ದೂರಲ್ಲಿ ಶವ ಪತ್ತೆಯಾಗಿದ್ದು ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡದಿಂದ ಶವ ಪತ್ತೆ ಕಾರ್ಯ ನಡೆಸಿ ಶವವನ್ನು ಹೊರತೆಗೆಯಲಾಗಿದೆ.
ಅನಿಲ ಸೋರಿಕೆ 3 ಮಕ್ಕಳು ಸೇರಿ 16 ಮಂದಿ ಸಾವು
ದಕ್ಷಿಣ ಆಫ್ರಿಕಾದಲ್ಲಿ ವಿಷ ಅನಿಲ ಸೋರಿಕೆಯಿಂದ ಸುಮಾರು 16 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ವರದಿ ಆಗಿದೆ. ಉಳಿದವರ ರಕ್ಷಣೆ ಕಾರ್ಯಚರಣೆ
ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನ ಪೂರ್ವದಲ್ಲಿರುವ ಬೋಕ್ಸ್ಬರ್ಗ್ ಬಳಿಯ ಅನೌಪಚಾರಿಕ ವಸಾಹತು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಅನಿಲ ಸೋರಿಕೆಯಾಗಿದೆ ಎಂದು ಶಂಕಿಸಲಾದ ಪ್ರದೇಶದಲ್ಲಿ ಮೃತ ದೇಹಗಳು ಚದುರಿಹೋಗಿವೆ. ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆಯ ಕೆಳಗೆ ಸಿಲುಕಿ ಸ್ಫೋಟಗೊಂಡ ನಂತರ ಕನಿಷ್ಠ 41 ಜನರು ಸಾವನ್ನಪ್ಪಿದರು.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?
HOW TO APPLY : NEET-UG COUNSELLING 2023