ಭಾರತೀಯ ಸೈನಿಕರಿಂದ 4 ಪಾಕ್ ಉಗ್ರರ ಹತ್ಯೆ!
– ಗಡಿಯಲಿ ಒಳ ನುಸುಳಲು ಯತ್ನಿಸಿದ ಉಗ್ರರು
– ಚಾ.ನಗರ: ಒಂದೇ ಕುಟುಂಬದ ಮೂವರು ನೇಣಿಗೆ
– ಶಿಕ್ಷಕನ ಮೇಲೆ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಗಳು
– ಉಡುಪಿ ವಿದ್ಯಾರ್ಥಿನಿ ಸಾವು: ಹೋರಾಟಕ್ಕಿಳಿದ ಜನ
– ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಫುಲ್ ಟೈಟಾಗಿ ಜನರ ಜತೆ ಕಿರಿಕ್!
NAMMUR EXPRESS NEWS
ಕುಪ್ಪಾರ: ಭಾರತ ಗಡಿಯೊಳಗೆ ಒಳ ನುಸುಳಿ ಬರಲು ಯತ್ನಿಸಿದ್ದ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಸಾಯಿಸಿದ ಘಟನೆ ಶುಕ್ರವಾರ ನಸುಕಿನ ಹೊತ್ತು ಕುಪ್ಪಾರ ಜಿಲ್ಲೆಯಲ್ಲಿ ನಡೆದಿದೆ.
ಪಾಕ್ ಆಕ್ರಮಿತ ಕಾಶ್ಮೀರದಿಂದ ಒಳ ನುಸುಳಲು ಯತ್ನಸಿದ ನಾಲ್ವರು ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ. ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸದರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇದು ಈ ವಾರದಲ್ಲಿ ನಡೆದಿರುವ ಎರಡನೇ ದೊಡ್ಡ ಎನ್ಕೌಂಟರ್. ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಎನ್ಕೌಂಟರ್ ನಡೆದಿದೆ.
ಕೋಚಿಂಗ್ ಶಿಕ್ಷಕನ ಮೇಲೆ ಗುಂಡು ಹಾರಿಸಿದ ಪರಾರಿಯಾದ ವಿದ್ಯಾರ್ಥಿಗಳು: ಶುಲ್ಕ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೋಚಿಂಗ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಹಾಗೂ ಶಿಕ್ಷಕನ ಮೇಲೆ ಇಬ್ಬರು ಹುಡುಗರು ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ಗುರುವಾರ ನಡೆದಿದೆ.
ಮೂಲಗಳ ಪ್ರಕಾರ, ಮಾಜಿ ವಿದ್ಯಾರ್ಥಿಗಳೇ ಕೋಚಿಂಗ್ ಇನ್ಸ್ಟಿಟ್ಯೂಟ್ನ ಶಿಕ್ಷಕನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಲ್ಲೆಯ ಚೌರಾ ರಸ್ತೆಯಲ್ಲಿರುವ ಮೈದಾ ಫ್ಯಾಕ್ಟರಿ ಎದುರು ಈ ಘಟನೆ ನಡೆದಿದೆ. ಘಟನಾ ಸ್ಥಳದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆಯ ದೃಶ್ಯಾವಳಿ ಸೆರೆಯಾಗಿದೆ.
ಒಂದೇ ಕುಟುಂಬದ ಮೂವರು ಸಾವು.!
ಚಾಮರಾಜನಗರ ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಆಸ್ತಿಗೆ ಸಂಬಂಧಿಸಿದ ಕೌಟುಂಬಿಕ ಕಲಹದ ಕಾರಣದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡವರು ಮಹದೇವಸ್ವಾಮಿ (45) ಅವರ ಪತ್ನಿ ಸವಿತಾ (35) ಮತ್ತು ಮಗಳು ಸಿಂಚನಾ (14) ಎಂದು ತಿಳಿದುಬಂದಿದೆ.
ಮಹದೇವಸ್ವಾಮಿ ಮತ್ತು ಸಿಂಚನಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸವಿತಾ ಅವರು ಕ್ರಿಮಿನಾಶಕ ಸೇವಿಸಿ ಸಾವಿಗೀಡಾಗಿದ್ದಾರೆ. ಕುಟುಂಬವು ಸಾಲ ಬಾಧೆಯನ್ನೂ ಎದುರಿಸುತ್ತಿತ್ತು ಎನ್ನಲಾಗಿದೆ ಆದರೆ ಸಾವಿಗೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ನಾಲ್ವರು ಪೊಲೀಸರ ಕಿರಿಕ್!
ಬೆಂಗಳೂರಿನ ಮಾಗಡಿ ಪೊಲೀಸರು ಕರ್ತವ್ಯದ ವೇಳೆಯೇ ಫುಲ್ ಟೈಟಾಗಿ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.ಮಾಗಡಿ ಎಎಸ್ಐ ಮಂಜುನಾಥ್, ಕುದೂರು ಕ್ರೈಂ ಪಿಸಿ ನಾರಾಯಣ ಸೇರಿ ಮತ್ತಿಬ್ಬರು ಪೊಲೀಸರ ಮೋಜು ಮಸ್ತಿ ಮಾಡಿದ್ದಾರೆ. ಮಾಗಡಿ ಠಾಣೆಯಿಂದ ಕೈದಿಯನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಬಿಡಲು ಬಂದಿದ್ದ ಖಾಕಿ ಪಡೆಯು ಖೈದಿಯನ್ನು ಬಿಟ್ಟು ನಂತರ ಮಾಗಡಿಗೆ ಬರುವಾಗ ಪುಲ್ ಟೈಟ್ ಆಗಿದ್ದಾರೆ.
ಮೈ ಮೇಲೆ ಪ್ರಜ್ಞೆ ಇಲ್ಲದ ಪೊಲೀಸರು, ಯೂನಿಫಾರ್ಮ್ ಕಳಚಿಟ್ಟಿದ್ದಾರೆ. ಈ ವೇಳೆ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.ಈ ಕಾರಿನಲ್ಲಿದ್ದವರು ಟೈಟ್ ಆಗಿ ತೂರಾಡುತ್ತಿದ್ದ ಪೊಲೀಸರ ವೀಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಉಡುಪಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!
ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕೆಮ್ಮುಂಡೇಲಿನ ವಿದ್ಯಾರ್ಥಿನಿ ನಿಖಿತಾ ಕುಲಾಲ್ ಅನುಮಾನಾಸ್ಪದ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಉಡುಪಿಯ ಸಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದ್ದು, ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಸ್ಪತ್ರೆಯ ಮುತ್ತಿಗೆಗೆ ಮುಂದಾದ ಘಟನೆ ನಡೆಸಿದೆ.
ವಿದ್ಯಾರ್ಥಿನಿ ನಿಖಿತಾ ಕುಲಾಲ್ಗೆ ಜೂನ್ 13ರಂದು ವಾಂತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ಆಕೆಯನ್ನು ಪೋಷಕರು ಜೂನ್ 14 ರಂದು ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಸಾವನ್ನಪ್ಪಿದ್ದರು. ಇದೀಗ ವಿದ್ಯಾರ್ಥಿನಿಯ ಸಾವಿಗೆ ವೈದ್ಯರೇ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿತಾ ಕುಲಾಲ್ ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆಗೆ ಕರೆ ನೀಡಿತ್ತು.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023