8 ತಿಂಗಳ ಮಗು ಸಾವಿಗೆ ಕಾರಣ ಆಯ್ತು ಮೊಬೈಲ್ ಚಾರ್ಜರ್!
– ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಘಟನೆ
– ಅಂಡಮಾನ್- ನಿಕೋಬಾರ್ ದ್ವೀಪದಲ್ಲಿ ಭೂಕಂಪನ
NAMMUR EXPRESS NWES
ಕಾರವಾರ: ಮೊಬೈಲ್ ಚಾರ್ಜ್ ಗೆ ಹಾಕಿದ ಪೋಷಕರು ಆಫ್ ಮಾಡದೇ ಬಿಟ್ಟಿದ್ದರು. ಇದರಿಂದಾಗಿ 8 ವರ್ಷದ ಹೆಣ್ಣು ಮಗುವೊಂದು ಪ್ರಾಣ ಕಳೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಚಾರ್ಜರ್ ವೈರ್ ನಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ 8 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ. ಸಂಜನ ದಂಪತಿಯ 8 ತಿಂಗಳ ಮಗು, ಆನ್ ಮಾಡಿಟ್ಟಿದ್ದ ಮೊಬೈಲ್ ಚಾರ್ಜರ್ ನ್ನು ಬಾಯಿಗೆ ಹಾಕಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿದ್ದು, ವಿದ್ಯುತ್ ಶಾಕ್ ನಿಂದಾಗಿ ಮಗು ಸಾವನ್ನಪ್ಪಿದೆ.
ಅಂಡಮಾನ್- ನಿಕೋಬಾರ್ ದ್ವೀಪದಲ್ಲಿ ಭೂಕಂಪನ
ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 5.40ರ ಸುಮಾರಿಗೆ 5.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಇದು 10. ಕಿ.ಮೀ ಆಳದಲ್ಲಿ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದುವು ನಿಕೋಬಾರ್ ದ್ವೀಪಗಳಲ್ಲಿ ಅಕ್ಷಾಂಶ 9.32 ಮತ್ತು ರೇಖಾಂಶ 94.03 ರಲ್ಲಿದೆ. ಎನ್ಸಿಎಸ್ ಟ್ವಿಟ್ನಲ್ಲಿ ಉಲ್ಲೇಖಿಸಿದಂತೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023