ಮೈಸೂರಿನ ಪ್ರತಿಷ್ಠಿತ ಹೋಟೆಲಲ್ಲಿ ಬೌ ಬೌ ಬಿರಿಯಾನಿ!
– ನಾಯಿ ಮಾಂಸ ನೋಡಿ ಅಧಿಕಾರಿಗಳಿಗೆ ಬಿಗ್ ಶಾಕ್
– ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು!: 7 ಮಂದಿ ಪಾರು
NAMMUR EXPRESS NEWS
ಮೈಸೂರು: ಮೈಸೂರಿನ ಹೋಟೆಲ್ವೊಂದಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬೌ ಬೌ ಮಾಂಸ ಪತ್ತೆಯಾಗಿದೆ. ಅಧಿಕಾರಿಗಳು ದಾಳಿ ಮಾಡಿದ ಹೋಟೆಲ್ ಮೈಸೂರಿನ ಕೆ.ಆರ್.ನಗರದ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಬೆಳಕಿಗೆ ಬಂದಿದೆ.
ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ವೇಳೆ ನಾಯಿ ಮಾಂಸ ಅಲ್ಲದೆ ಕೊಳೆತ ಇತರ ಮಾಂಸಗಳನ್ನೂ ಪತ್ತೆ ಹಚ್ಚಿದ್ದಾರೆ. ಕೊಳೆತ ಮಾಂಸದ ಜೊತೆಗೆ ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್ ಹಿಡಿದ ಮಾಂಸಾಹಾರ ಪತ್ತೆಯಾಗಿದೆ
ಈ ರೀತಿಯ ಆಹಾರವನ್ನು ಸೇವಿಸುವುದರಿಂದ ತೀವ್ರ ಅನಾರೋಗ್ಯ ಕಾಣಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಮೂಲಕರಿಗೆ ದಂಡ ವಿಧಿಸಿ ರೆಸ್ಟೋರೆಂಟ್ ಬಂದ್ ಮಾಡಿಸಿದ್ದಾರೆ.
ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು!:
ಓಮಿನಿ ಕಾರೊಂದು ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ದೊಡ್ಡನಗುಡ್ಡದಲ್ಲಿ ನಡೆದಿದೆ.
ಕಾಫಿ ಎಸ್ಟೇಟ್ ನಲ್ಲಿ ಕಳೆತೆಗೆಯಲೆಂದು ಓಮಿನಿ ಕಾರಿನಲ್ಲಿ ಏಳು ಮಂದಿ ಹೋಗುತ್ತಿದ್ದ ವೇಳೆ ಆಲ್ದೂರು ಸಮೀಪದ ದೊಡ್ಡನಗುಡ್ಡ ಬಳಿ ಏಕಾಏಕಿ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಕಾರಿನ ತುಂಬಾ ಆವರಿಸಿಕೊಂಡಿದೆ. ಕಾರು ಮತ್ತು ಕಾರಿನ ಮೇಲೆ ಇರಿಸಿದ್ದ ನಾಲ್ಕೈದು ಕಳೆ ತೆಗೆಯುವ ಯಂತ್ರಗಳು ಸೇರಿ ಸಂಪೂರ್ಣ ಸುಟ್ಟು ಭಸ್ಮವಾಗಿವೆಕಾರಿನಲ್ಲಿದ್ದ ಏಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023