ದೇವರಿಗೂ ಕಳ್ಳ ನೋಟು ಕಾಣಿಕೆ ಹಾಕಿದ ಭೂಪ!
– ಕಳಸದ ಕಳಸೇಶ್ವರನಿಗೆ 2000 ರೂ. ನಕಲಿ ನೋಟು
– ಕರ್ಮ ಕರ್ಮ..ಬಾಲಕಿ ರೇಪ್ ಮಾಡಿದ ಅಜ್ಜ!?
– ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಪೋಟ!
NAMMUR EXPRESS NEWS
ಕಳಸ: ದೇವರನ್ನೇ ಮಂಗ ಮಾಡುವ ಜನರೂ ಇದ್ದಾರೆ. ಹೌದು. ದೇವರ ದರ್ಶನದ ನಂತರ ಹುಂಡಿಗೆ ಕೈಲಾದಷ್ಟು ಕಾಣಿಕೆ ಹಾಕಿ ಪ್ರಾರ್ಥಿಸುವುದು ವಾಡಿಕೆ. ಆದರೆ ಇಲ್ಲೊಬ್ಬ ಭೂಪ ದೇವರ ಹುಂಡಿಗೆ ನಕಲಿ ನೋಟು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ನಡೆದಿದೆ. ದಕ್ಷಿಣ ಕಾಶಿ ಕಳಸೇಶ್ವರ ದೇವಾಲಯಕ್ಕೆ ಭೇಟಿಕೊಟ್ಟ ಭಕ್ತನೊಬ್ಬ ಕಾಣಿಕೆ ಹುಂಡಿಗೆ 2000 ರೂ. ಮುಖಬೆಲೆಯ ನಕಲಿ ನೋಟನ್ನು ಹಾಕಿದ್ದಾನೆ. ಈ ಕಲರ್ ಜೆರಾಕ್ಸ್ ನೋಟು ಹುಂಡಿಯ ಹಣ ಎಣಿಕೆಯ ವೇಳೆ ಪತ್ತೆಯಾಗಿದೆ. ಈ ನಕಲಿ ನೋಟನ್ನು ನೋಡಿ ದೇವಸ್ಥಾನದ ಆಡಳಿತ ಮಂಡಳಿ ಬೆರಗಾಗಿದೆ. ಕೊನೆಗೆ ಆಡಳಿತ ಮಂಡಳಿಯ ಸದಸ್ಯರು ನಕಲಿ ನೋಟನ್ನು ಹರಿದು ಹಾಕಿದ್ದಾರೆ.
ಕರ್ಮ ಕರ್ಮ..ಬಾಲಕಿ ರೇಪ್ ಮಾಡಿದ ಅಜ್ಜ!?
– ರಾಜಧಾನಿಯಲ್ಲೊಂದು ಹೇಯ ಕೃತ್ಯ: ಪ್ರಾಂಶುಪಾಲ ಸೆರೆ
ಹತ್ತು ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಶಾಲೆಯೊಂದರ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ (65) ಅವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘2ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ತರಗತಿ ಕೊಠಡಿಯಲ್ಲಿ ಗುರುವಾರ ಒಂಟಿಯಾಗಿ ಕುಳಿತಿದ್ದಳು. 11.30 ಗಂಟೆ ಸುಮಾರಿಗೆ ತರಗತಿಯೊಳಗೆ ನುಗ್ಗಿದ್ದ ಆರೋಪಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪವಿದೆ. ಪೋಷಕರು ನೀಡಿರುವ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಕೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಅತ್ಯಾಚಾರದ ಬಳಿಕ ಆರೋಪಿ, ಬಾಲಕಿಗೆ ಕೇಕ್ ಕೊಟ್ಟು ಮನೆಗೆ ಕಳುಹಿಸಿದ್ದ. ಮನೆಗೆ ಹೋಗಿದ್ದ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಜೊತೆಗೆ, ಒಳ ಉಡುಪಿನಲ್ಲಿ ರಕ್ತಸ್ರಾವವಾಗಿತ್ತು. ಅದನ್ನು ಗಮನಿಸಿದ್ದ ತಾಯಿ, ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಅತ್ಯಾಚಾರವಾಗಿರುವುದಾಗಿ ತಿಳಿಸಿದ್ದರು. ನಂತರವೇ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ. ಬಾಲಕಿ ಸಹ ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದಾಳೆ’ ಎಂದು ಪೊಲೀಸರು ಹೇಳಿದ್ದಾರೆ.
ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಪೋಟ!
ಚಲಿಸುತ್ತಿದ್ದ ಆ್ಯಂಬುಲೆನ್ಸ್ ಟೈಯರ್ ಸ್ಫೋಟಗೊಂಡು ರೋಗಿ ಮತ್ತು ಸಂಬಂಧಿಕರು ಪರದಾಡಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಶೆಳ್ಳಗಿ ಗ್ರಾಮದ ಬಳಿ ನಡೆದಿದೆ. ಕೆಂಭಾವಿಯಿಂದ ವಿಜಯಪುರಕ್ಕೆ ಆ್ಯಂಬುಲೆನ್ಸ್ ವಾಹನ ತೆರಳುತ್ತಿದ್ದು ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ಹಿಂಬದಿಯ ಟೈಯರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಆ್ಯಂಬುಲೆನ್ಸ್ನಲ್ಲಿ ರೋಗಿಯನ್ನು ಕರೆದು ಕೊಂಡು ಹೋಗುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ಹಿಂಬದಿಯ ಟೈಯರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುರಪುರ ತಾಲೂಕಿನ ಪರಸನಹಳ್ಳಿಯ ರೋಗಿ ಸೋಮನಗೌಡರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಸದ್ಯ ಆ್ಯಂಬುಲೆನ್ಸ್ ಕೈಕೊಟ್ಟಿದ್ದಕ್ಕೆ ರೋಗಿ ಸಂಬಂಧಿಕರು ಪರದಾಡಿದ್ದಾರೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023