ತಾಯಿ ಸೀರೆಯಿಂದ ನೇಣಿಗೆ ಕೊರಳೊಡ್ಡಿದ ಬಾಲಕ!
– ಮೊಬೈಲ್ ಚಾರ್ಜರ್ ಕೊಡಿಸದಿದ್ದಕ್ಕೆ ನೇಣಿಗೆ ಶರಣು!
– ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದ ಘಟನೆ
– ಟೊಮೆಟೊ ಗಿಡಕ್ಕೆ ಆಸಿಡ್ ಹಾಕಿದ ಕಿಡಿಗೇಡಿಗಳು
NAMMUR EXPRESS NWES
ತುಮಕೂರು: ಮೊಬೈಲ್ ಚಾರ್ಜರ್ ಕೊಡಿಸಲಿಲ್ಲವೆಂದು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರಿನ ಪಾವಗಡದಲ್ಲಿ ನಡೆದಿದೆ. ಶಾಂತಿ ಎಸ್ ಎಸ್ ಕೆ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ ಗೌ ಭಾನುವಾರ ರಜೆ ಕಾರಣ ಮನೆಯಲ್ಲಿದ್ದ. ತಾಯಿಯ ಬಳಿ ಚಾರ್ಜರ್ ಕೊಡು ಎಂದು ಗಲಾಟೆ ಮಾಡಿದ್ದ.
ಹೆಚ್ಚು ಅನಗತ್ಯದ ವಸ್ತುಗಳನ್ನು ಕೇಳುತ್ತಿದ್ದ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಾಯಿ ಸುಮ್ಮನಿದ್ದರು.ಹತ್ತಿರದವರ ಮನೆಗೆ ಹೂ ಕಟ್ಟಲು ಹೋಗಿದ್ದ ತಾಯಿ ಮರಳಿ ಬಂದ ನಂತರ ಬಾಗಿಲು ತಟ್ಟಿದಾಗ ಒಳಗಡೆಯಿಂದ ಶಬ್ದ ಬರದ ಕಾರಣ ಅನುಮಾನ ಬಂದು ಗ್ರಾಮಸ್ಥರಿಂದ ಮನೆ ಬಾಗಿಲು ಒಡೆದು ನೋಡಿದಾಗ ತಾಯಿಯ ಸೀರೆಯಿಂದ ನೇಣು ಬಿಗಿದು ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಸಿಂಗರೆಡ್ಡಿ ಹಳ್ಳಿಯಲ್ಲಿ ನಡೆದಿದೆ.
ಟೊಮೆಟೊ ಮೇಲೆ ಆಸಿಡ್ ಹಾಕಿದ ಕಿಡಿಗೇಡಿಗಳು
ಕಷ್ಟಪಟ್ಟು ರೈತ ಬೆಳೆದಿದ್ದ ಟೊಮೆಟೊ ಬೆಳೆಗಳ ಮೇಲೆ ಕಿಡಿಗೇಡಿ ಆಸಿಡ್ ಎರಚಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಯ ಹಂಗ್ರಾಹಳ್ಳಿಯಲ್ಲಿ ಜರುಗಿದೆ. ರೈತ ಮಹದೇವಸ್ವಾಮಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಟೊಮೆಟೊ ಬೆಳೆದಿದ್ದು ಎರಡು ಬಾರಿ ಕಟಾವು ಮಾಡಿ ತಮಿಳುನಾಡಿನ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದ್ದಾರೆ. ಸ್ವಲ್ಪ ಮಟ್ಟಿನ ಲಾಭವೂ ಬಂದಿದೆ. ಈಗ ಮತ್ತೊಂದು ಕಟಾವಿಗೆ ಸಿದ್ದವಾಗಿದ್ದ ಟೊಮೆಟೊ ಬೆಳೆ ಮೇಲೆ ಕಿಡಿಗೇಡಿಗಳು ಆಸಿಡ್ ಸಿಂಪಡಿಸಿದ್ದು, ಟೊಮೆಟೊ ಗಿಡ-ಹಣ್ಣುಗಳು ಸುಟ್ಟು ಹೋಗುತ್ತಿವೆ.
ಸುಮಾರು 2500 ಟೊಮೆಟೊ ಗಿಡಗಳ ತುಂಬೆಲ್ಲ ಬೆಳೆಗಳು ಬಂದಿದ್ದವು. ತಮಿಳುನಾಡಿಗೆ ಹೋಗಿ ಟೊಮೆಟೊ ಮಾರಾಟ ಮಾಡಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಟೊಮೆಟೊ ಗಿಡಗಳ ಮೇಲೆ ಆಸಿಡ್ ಮಿಶ್ರಿತ ನೀರು ಎರಚಿದ್ದಾರೆ. ವಾಪಸ್ ಬಂದು ತೋಟಕ್ಕೆ ಹೋದಾಗಲೇ ವಿಷಯ ಗೊತ್ತಾಗಿದೆ. ಟೊಮೆಟೊ ಗಿಡ, ಹಣ್ಣುಗಳು ಒಣಗುತ್ತಿವೆ. ಇದನ್ನು ಕಂಡು ರೈತ ಕಂಗಾಲಾಗಿದ್ದಾನೆ. ಅರ್ಧ ಎಕರೆ ಜಮೀನಿನಲ್ಲಿ ಅಲ್ಲಲ್ಲಿ ಆಸಿಡ್ ಎರಚಲಾಗಿದ್ದು, ಉಳಿದೆಡೆ ಇರುವ ಟೊಮೆಟೊ ಚನ್ನಾಗಿಯೇ ಇದೆ. ಆಸಿಡ್ ದಾಳಿಯಿಂದ ನಾಶವಾಗಿರುವ ಗಿಡಗಳು ಹಾಗೂ ಮಣ್ಣನ್ನು ತಪಾಸಣೆ ನಡೆಸಲು ರೈತ ಮುಂದಾಗಿದ್ದಾರೆ. ಸಾಲಮಾಡಿ ಟೊಮೆಟೊ ಬೆಳೆ ಬೆಳೆದು ಇನ್ನೇನು ಫಸಲು ಕೈಗೆ ಬಂದಿದೆ ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಕಳ್ಳತನ, ಆಸಿಡ್ ದಾಳಿಯಂತಹ ಕೃತ್ಯ ನಡೆಸಿ ರೈತರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
HOW TO APPLY : NEET-UG COUNSELLING 2023