35 ಗ್ರಾಂ ಚಿನ್ನದ ಸರ ನುಂಗಿತು ಎಮ್ಮೆ!
– ಹೊಟ್ಟೆಯಿಂದ ಸರ ತೆಗೆಯಲು ವೈದ್ಯರ ಆಪರೇಷನ್
– ಏನಿದು ಘಟನೆ..?, ಎಮ್ಮೆ ತಿಂದಿದ್ದು ಹೇಗೆ…?
NAMMUR EXPRESS NEWS
ನಾಗ್ಫುರ: ಎಮ್ಮೆ ಮೇವಿನೊಂದಿಗೆ ಆಕಸ್ಮಿಕವಾಗಿ 35 ಗ್ರಾಮ ಬಂಗಾರದ ಸರವನ್ನು ತಿಂದಿರುವ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಸರ್ಸಿಯಲ್ಲಿ ನಡೆದಿದೆ. ವೈದ್ಯರು ಶಾಸ್ತ್ರ ಚಿಕಿತ್ಸೆ ಮೂಲಕ ಎಮ್ಮೆ ಹೊಟ್ಟೆಯಿಂದ ಚಿನ್ನದ ಸರವನ್ನು ಶುಕ್ರವಾರ ಹೊರತೆಗೆದಿದ್ದಾರೆ. ರಾಮ ಹರಿ ಬೋಯರ್ ಎಂಬ ರೈತ ಎಮ್ಮೆಗೆ ಮೆವಿಗೆಂದು ಸೋಯಾಬೀನ್ ತಂದಿದ್ದಾರೆ. ದನದ ಕೊಟ್ಟಿಗೆಗೆ ಸೋಯಾಬೀನ್ ಹಾಕಲು ಅವರ ಪತ್ನಿ ಗೀತಾ ಬಾಯಿ ತೆರಳಿದಾಗ ಅವರ ಕತ್ತಿನಲ್ಲಿದ್ದ 35 ಗ್ರಾಮ ಚಿನ್ನದ ಸರ ಅವರ ಅರಿವಿಗೆ ತಿಳಿಯದೆ ಮೇವಿನೊಂದಿಗೆ ಬಿದ್ದಿದೆ. ಬೇವಿನ ಜೊತೆ ಇದ್ದ ಚಿನ್ನದ ಸರ ಎಮ್ಮೆಯ ಹೊಟ್ಟೆಗೆ ಸೇರಿದೆ.
ಚಿನ್ನದ ಸರ ನಾಪತ್ತೆಯಾಗಿರುವುದು ಗೊತ್ತಾದಾಗ ಯಾರೋ ಕಳ್ಳತನ ಮಾಡಿದ್ದಾರೆ ಎಂದು ಭಾವಿಸಿದ್ದೆವು. ಬಳಿಕ ಎಮ್ಮೆ ಸೋಯಾಬೀನ್ ಜೊತೆ ಬಂಗಾರದ ಸರವನ್ನು ತಿಂದಿದೆ ಎಂಬುದು ತಿಳಿಯಿತು ಎಂದು ದಂಪತಿ ತಿಳಿಸಿದ್ದಾರೆ.
ನಗರದಲ್ಲಿ ಪ್ಲಾಸ್ಟಿಕ್, ನಾಣ್ಯ ಮತ್ತಿತರ ಅಪಾಯಕಾರಿ ವಸ್ತುಗಳನ್ನು ಸೇವಿಸುವ ದೇಸಿ ಹಸುಗಳಿಗೆ ಶಸ್ತ್ರಚಿಕಿತ್ಸೆ ನಡೆಸುವುದು ನಿಯಮಿತವಾಗಿದ್ದು, ಚಿನ್ನದ ಸರ ನುಂಗಿದ್ದ ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿ ಸರ ಹೊರ ತೆಗಿಯಲಾಗಿದೆ.