ಮಕ್ಕಳ ಮದುವೆ ಸಂಭ್ರಮದಲ್ಲೇ ಅಪ್ಪ ವಿಧಿಯಾಟಕ್ಕೆ ಬಲಿ!
– ನಿರ್ದೇಶಕ ಶಿವಶಂಕರ್ ಹೃದಯಾಘಾತದಿಂದ ನಿಧನ
– ಸೊರಬ ಪುರಸಭೆ ನೌಕರ ಲೋಕಾಯುಕ್ತ ದಾಳಿಗೆ!
NAMMUR EXPRESS NEWS
ಸಾಗರ: ಇಬ್ಬರು ಮಕ್ಕಳ ಮದುವೆ ಸಂಭ್ರಮದಲ್ಲೇ ಅಪ್ಪ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ ಆನಂದಪುರದ ಕಡೆ ತೆರಳುತ್ತಿದ್ದ ಪಾದಾಚಾರಿಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಮೃತಪಟ್ಟವರು ಬನವಾಸಿ ನಿವಾಸಿ ಮಂಜುನಾಥ ಗೌಡ. ಆ ಮನೆಯಲ್ಲಿ ಇಬ್ಬರು ಹೆಣ್ಮಕ್ಕಳ ಮದುವೆ ಇತ್ತು. ಇಡೀ ಮನೆ ಬಂಧು ಮಿತ್ರರಿಂದ ಖುಷಿಖುಷಿಯಾಗಿ ನಲಿದಾಡುತ್ತಿತ್ತು. ಆದರೆ, ಒಮ್ಮಿಂದೊಮ್ಮೆಗೇ ಈ ಮನೆಯಲ್ಲಿ ಸೂತಕದ ಕಳೆ ಆವರಿಸಿದೆ. ಮದುವೆಯಾಗಬೇಕಾದ ಆ ಇಬ್ಬರು ಹೆಣ್ಣು ಮಕ್ಕಳ ತಂದೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಪೇಟೆಗೆ ಬಂದಿದ್ದ ಮಂಜುನಾಥ್ ಅವರಿಗೆ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರು ಅಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ದುರಂತವೆಂದರೆ ಮಂಜುನಾಥ್ ಅವರು ಕೆಲವು ಸಮಯದ ಹಿಂದೆ ತಮ್ಮ ಹೆಂಡತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು.
ನಿರ್ದೇಶಕ ಶಿವಶಂಕರ್ ಹೃದಯಾಘಾತದಿಂದ ನಿಧನ
ಚಂದನವನದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ನಟ, ನಿರ್ದೇಶಕ ಸಿ.ವಿ. ಶಿವಶಂಕರ್ ಅವರು ನಿಧನರಾಗಿದ್ದಾರೆ. ಇಂದು (ಜೂನ್ 27) ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಿ.ವಿ. ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ‘ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಅವರಿಗೆ ಇರಲಿಲ್ಲ. ಮಧ್ಯಾಹ್ನ ಊಟ ಮುಗಿಸಿದರು. ಪೂಜೆ ಮಾಡಿದ ಬಳಿಕ ಹಾರ್ಟ್ ಅಟ್ಯಾಕ್ ಆಯಿತು’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸಿ.ವಿ. ಶಿವಶಂಕರ್ ಅವರ ನಿಧನಕ್ಕೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ. ಸಿ.ವಿ. ಶಿವಶಂಕರ್ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಬಾಲನಟನಾಗಿಯೇ ರಂಗಭೂಮಿ ಪ್ರವೇಶಿಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಸ್ಕೂಲ್ ಮಾಸ್ಟರ್’, ‘ಕೃಷ್ಣ ಗಾರುಡಿ’, ‘ರತ್ಮಮಂಜರಿ’, ‘ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಹಲವು ನಿರ್ದೇಶಕರ ಜೊತೆ ಸಹಾಯಕರಾಗಿ ಅನುಭವ ಪಡೆದ ಬಳಿಕ ‘ಮನೆ ಕಟ್ಟಿ ನೋಡು’ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಹೊಯ್ಸಳ, ‘ಮಹಾ ತಪಸ್ವಿ’, ‘ಕನ್ನಡ ಕುವರ’, ‘ವೀರ ಮಹಾದೇವ’ ಮತ್ತಿತರ ಸಿನಿಮಾಗಳಿಗೆ ಸಿ.ವಿ. ಶಿವಶಂಕರ್ ಅವರು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದರು.
ಸೊರಬ ಪುರಸಭೆ ನೌಕರ ಲೋಕಾಯುಕ್ತ ದಾಳಿಗೆ!
ಸೊರಬ ಪುರಸಭೆಯ ನೌಕರೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನು ಅಲಿನೇಷನ್ ವಿಚಾರದಲ್ಲಿ ಹಣ ಬೇಡಿಕೆ ಇಟ್ಟ ಕೇಸ್ ವರ್ಕರ್ ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ.
ಜೀವ ಜ್ಯೋತಿ ಬಡಾವಣೆಯ ಮಂಜುನಾಥ, ಬಿನ್, ಕೊರಗಯ್ಯ ಶೆಟ್ಟಿ, ವಾಸಿಯಾಗಿದ್ದು, ಇವರ ಸಹೋದರ ಭಾಸ್ಕರ್ ಕೆ.ಎಸ್. ಇವರು ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ಸೊರಬ ತಾಲ್ಲೂಕು ಕಸಬಾ ಹೋಬಳಿಯ ಹಳೇ ಸೊರಬ ಸ.ನಂ.179ರಲ್ಲಿ ಅಲಿನೇಷನ್ ಮಾಡಿಸಿಕೊಳ್ಳಲು ಈಗಿನ ಪುರಸಭೆಗೆ ಅರ್ಜಿ ಸಲ್ಲಿಸಿರುತ್ತಾರೆ.
ಡಿ.ರಿ. ನಂ. 21ನೇದ್ದರ ನಿವೇಶನವು ಸಹೋದರ ಭಾಸ್ಕರ್ ಇವರ ಹೆಸರಿನಲ್ಲಿರುತ್ತದೆ. ಸದರಿ ನಿವೇಶನವು ಹಳೇ ಸೊರಬ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು, ಸೊರಬ ಟೌನ್ ಈಗ ಪುರಸಭೆಯಾಗಿ ಮಾರ್ಪಟ್ಟಿದ್ದರಿಂದ ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಸಿಕೊಳ್ಳಕು ಸಹೋದರ ಭಾಸ್ಕರ್ ಅವರ ಪರವಾಗಿ ಮಂಜುನಾಥ್ ಶೆಟ್ಟಿ ಜೂ.17 ರಂದು ಅರ್ಜಿ ಸಲ್ಲಿಸಿದ್ದಾರೆ. ಜೂ. 21 ರಂದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸೊರಬ ಪುರಸಭೆ ಕಛೇರಿಗೆ ಹೋಗಿ ಅಲ್ಲಿನ ಕೇಸ್ ವರ್ಕರ್ ಚಂದ್ರಕಲಾ ಇವರನ್ನು ವಿಚಾರಿಸಿದಾಗ, ಅವರು ನಿವೇಶವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಲು ಖರ್ಚಾಗುತ್ತದೆ ಎಂದು ತಿಳಿಸಿರುತ್ತಾರೆ. ನಂತರ ಮಂಜುನಾಥ ಜೂ.26 ರಂದು ಕೇಸ್ ವರ್ಕರ್ ಚಂದ್ರಕಲಾ ಇವರ ಮೊಬೈಲ್ಗೆ ತನ್ನ ಮೊಬೈಲ್ನಿಂದ ಕರೆ ಮಾಡಿ ನಿವೇಶನದ ಖಾತೆ ಬಗ್ಗೆ ವಿಚಾರಿಸಿದಾಗ ಅವರು ನಿವೇಶನವನ್ನು ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡಲು ಸಾಹೇಬ್ರಿಗೆ, ಆರ್ಓ, ಆರ್ಐ, ಮ್ಯಾನೇಜರ್, ಬಿಲ್ ಕಲೆಕ್ಟರ್ ಇವರಿಗೆ ಕೊಡಲು ಖರ್ಚಾಗುತ್ತದೆ, ನೀವು 15,000/-ಗಳನ್ನು ತೆಗೆದುಕೊಂಡು ಬನ್ನಿ ಎಂದು ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ.ಆದರೆ ಲಂಚದ ಹಣ ಕೊಡಲು ಇಷ್ಟವಿರದ ಶ್ರೀ ಮಂಜುನಾಥ, ಸೊರಬ ಇವರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಅದರಂತೆ ಇಂದು ಆಪಾದಿತ ನೌಕರರು ತನ್ನ ಕಛೇರಿಯಲ್ಲಿ ಫಿರ್ಯಾದಿಯಿಂದ ರೂ. 15,000/-ಗಳ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023