ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಇನ್ನಿಲ್ಲ!
– ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ
– ಪುತ್ರಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚೂರಿಯಿಂದ ಇರಿದ ತಂದೆ!
– ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ!
NAMMUR EXPRESS NEWS
ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (79) ವಿಧಿವಶರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಅವರು ಫೆಬ್ರುವರಿ 12ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 18ರಂದು ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ಸಾವನ್ನಪ್ಪಿರುವುದನ್ನು ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ. ನಟರಾಜ್ನ್ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಉಮ್ಮನ್ ಚಾಂಡಿ ಅವರು 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದ್ದರು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಸಾರ್ವಜನಿಕ ಸೇವೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಶ್ರಮಿಸಿದ್ದ ಒಮ್ಮನ್ ಚಾಂಡಿಗೆ 2013 ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪುತ್ರಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚೂರಿಯಿಂದ ಇರಿದ ತಂದೆ!
ಪುತ್ರಿಯನ್ನು ಪ್ರೀತಿಸುತ್ತಿದ್ದಾನೆಂದು ಕೋಪದಿಂದ ತಂದೆಯೊಬ್ಬ ಆಕೆಯ ಪ್ರಿಯಕರನಿಗೆ ಚಾಕುವಿನಿಂದ ಇರಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಚಾಕು ಇರಿತಕ್ಕೆ ಒಳಗಾಗಿರುವ ಶಶಾಂಕ್ ಮೂಗನ್ನವರ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ!
ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಚಾಂದ್ ಪಾಷಾ (42) ಎಂಬುವವರನ್ನು ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪದಡಿ ತಾಯಿ ಸೋಫಿಯಾ ಬಿ. (60) ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸಂಜೆ ನಡೆದಿರುವ ಘಟನೆಯಲ್ಲಿ ಚಾಂದ್ ಪಾಷಾ ಸ್ಥಳದಲ್ಲಿಯೇ ಸುಟ್ಟು ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಾಯಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸೋಫಿಯಾ ಅವರ ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಸೋಫಿಯಾ ಅವರಿಗೆ ಚಾಂದ್ಪಾಷಾ ಸೇರಿ ನಾಲ್ವರು ಮಕ್ಕಳು. ಮೂವರು ಮಕ್ಕಳು, ಪ್ರತ್ಯೇಕವಾಗಿ ಬೇರೆಡೆ ವಾಸವಿದ್ದರು ತಾಯಿ-ಮಗ ಮಾತ್ರ ಮನೆಯಲ್ಲಿರುತ್ತಿದ್ದರು. ಸೋಫಿಯಾ ಅವರೇ ಕೂಲಿ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದರು. ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದ ಚಾಂದ್, ಕೈಗೆ ಬಂದ ಹಣವನ್ನೆಲ್ಲ ಮದ್ಯ ಖರೀದಿಗೆ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ. ಸೋಫಿಯಾ ಅವರು ಸೀಮೆ ಎಣ್ಣೆ ಸ್ಟವ್ ಮೇಲೆ ಅಡುಗೆ ಮಾಡಿಕೊಳ್ಳುತ್ತಿದ್ದರು. ಭಾನುವಾರ ರಾತ್ರಿ ಚಾಂದ್, ವಿಪರೀತ ಕುಡಿದು ಮನೆಗೆ ಬಂದಿದ್ದರು. ಪುನಃ ಜಗಳ ಶುರುವಾಗಿತ್ತು. ಸೋಮವಾರ ಪುನಃ ಕುಡಿದು ಬಂದರೆ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದಾಗಿ ತಾಯಿ ಬೆದರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023