- ಸ್ನೇಹಿತರ ಹೆಸರಲ್ಲಿ ದುಡ್ಡು ಕೇಳಿ ವಂಚನೆ
- ಸೈಬರ್ ಕ್ರೈಂ ವಿಫಲ: ಅಮಾಯಕರು ಅಸಹಾಯಕ
- ಗಣ್ಯರ ಫೇಸ್ಬುಕ್ ಹ್ಯಾಕ್.. ಖಚಿತವಾಗದೆ ಹಣ ಹಾಕಬೇಡಿ!
NAMMUR EXPRESS
ಫೇಸ್ಬುಕ್ ಅಕೌಂಟ್ ಇದ್ಯಾ.. ಹಾಗಿದ್ರೆ ಹುಷಾರಿಗಿರಿ.. !. ನಿಮ್ಮ ಸ್ನೇಹಿತರ ಹೆಸ್ರಲ್ಲಿ ಅವರ ಅಕೌಂಟ್ ಹ್ಯಾಕ್ ಮಾಡಿ ನಿಮ್ಮ ಚಾಟಿಂಗ್ ಅಲ್ಲಿ ನಿಮ್ಮ ಪರಿಚಯದವರು ಹಣ ಕೇಳಿದ ಹಾಗೆ ಚಾಟ್ ಮಾಡುತ್ತಾರೆ. ಫೋನ್ ಪೆ ಅಥವಾ ಗೂಗಲ್ ಪೆ ಮೂಲಕ ತಕ್ಷಣ ಹಣ ಹಾಕುವಂತೆ ಒತ್ತಾಯ ಮಾಡಿ ಮೆಸೇಜ್ ಮಾಡುತ್ತಾರೆ. ಯಾಮಾರಿ ದುಡ್ಡು ಹಾಕಿದರೆ ಮಾತ್ರ ಗೋವಿಂದ.. !
ಸ್ನೇಹಿತ, ತಮ್ಮ, ಅಮ್ಮ ಅಥವಾ ಯಾರೋ ಹೆಸರೇಳಿ ಅವರು ಆಸ್ಪತ್ರೆಯಲ್ಲಿದ್ದಾರೆ. ತುಂಬಾ ಎಮರ್ಜೆನ್ಸಿ ಆಗಿದೆ. 5000-25000 ರೂ. ಹಣ ತಕ್ಷಣ ಟ್ರಾನ್ಸ್ಫರ್ ಮಾಡಲು ಮೆಸೇಜ್ ಅಲ್ಲೇ ಚಾಟ್ ಮಾಡಲಾಗುತ್ತದೆ. ಅದರಲ್ಲಿ ನಿಮ್ಮ ಪರಿಚಯದವರ ಅಕೌಂಟ್ ಹ್ಯಾಕ್ ಮಾಡಿ ನಿಮ್ಮನ್ನು ಮೋಸ ಮಾಡಲಾಗುತ್ತದೆ. ಯಾರೇ ಫೇಸ್ಬುಕ್ ಅಲ್ಲಿ ಹಣ ಕೇಳಿದರೆ ಹಾಕಬೇಡಿ. ಇನ್ನು ಅಚ್ಚರಿ ಎಂದರೆ ಫೋನ್ ಪೆ ನಂಬರ್ 9649482883 ಎಲ್ಲರಿಗೂ ಒಂದೇ ಕೊಡಲಾಗಿದೆ. ಜತೆಗೆ ಈ ನಂಬರ್ ರಾಜಸ್ತಾನದ್ದು ಎನ್ನಲಾಗಿದೆ. ಈಗಾಗಲೇ ಅನೇಕರು ಹಣ ಕಳೆದುಕೊಂಡಿದ್ದಾರೆ. ಆದರೆ ಪೊಲೀಸ್ ಇಲಾಖೆ, ಅಥವಾ ಫೇಸ್ಬುಕ್ ಕಂಪನಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಯಾರಿಗೆ ಹಣ ಹಾಕಬೇಕಾದರೂ ಅವರಿಗೆ ಕಾಲ್ ಮಾಡಿ ಕನ್ಫರ್ಮ್ ಮಾಡಿಕೊಳ್ಳಿ.
ಸೈಬರ್ ಪೊಲೀಸರು ತಕ್ಷಣ ತನಿಖೆ ನಡೆಸಿ ಈ ಮೋಸ ತಡೆಯಬೇಕು. ಆದರೆ ಇಲಾಖೆ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನು ಹಲವು ರೀತಿಯ ಆನ್ಲೈನ್ ವಂಚನೆ ಬಗ್ಗೆ ನಮ್ಮೂರ್ ಎಕ್ಸ್ಪ್ರೆಸ್ ವರದಿ ಮಾಡಲಿದೆ.
ಯಾರೂ ಫೇಸ್ಬುಕ್ ಅಲ್ಲಿ ಕೇಳಿದಕ್ಕೆ ಹಣ ಹಾಕಬೇಡಿ. ಇದು NAMMUR EXPRESS ಕಳಕಳಿ. ಇನ್ನು ಅನಾಮಿಕ ಕರೆಗಳಿಂದ ಬ್ಯಾಂಕ್ ಏಟಿಎಂ ಪಾಸ್ ವರ್ಡ್, ಬಹುಮಾನದ ಆಮಿಷ ಕೂಡ ನಂಬಬೇಡಿ.
ಈ ಸುದ್ದಿಯನ್ನು ಜನ ಜಾಗೃತಿಗಾಗಿ ಶೇರ್ ಮಾಡಿರಿ