ಭೀಮನ ಹುಣ್ಣಿಮೆ ದಿನವೇ ಪತ್ನಿ ಕಿಡ್ನಾಪ್!
– ಶಿವಮೊಗ್ಗದಲ್ಲಿ ಘಟನೆ: ತಾಯಿಯಿಂದ ದೂರು
– ಬೆಳ್ತಂಗಡಿಯಲ್ಲಿ ಬಾಲಕನ ಜೀವ ತೆಗೆದ ಜೋಕಾಲಿ!
– ಸುಳ್ಯದಲ್ಲಿ ಸಹೋದರನಿಂದಲೇ ಅತ್ಯಾಚಾರ
NAMMUR EXPRESS NEWS
ಶಿವಮೊಗ್ಗ: ಕೌಟುಂಬಿಕ ಕಲಹವೊಂದು ಅಪಹರಣದ ಹಂತ ತಲುಪಿ ಪತ್ನಿ ನಡೆದು ಹೋಗುತ್ತಿರುವಾಗಲೇ ಕಾರಿನಲ್ಲಿ ಕಿಡ್ನಾಪ್ ಮಾಡಿದ ಘಟನೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಲ್ಕು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ದಂಪತಿಗಳಿಗೆ ಸಂಸಾರದಲ್ಲಿ ಸರಿ ಬಾರದ ಹಿನ್ನಲೆಯಲ್ಲಿ ಜಗಳಗಳಾಗಿವೆ. ಪತಿಯ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸೋಮವಾರ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಪತ್ನಿ ಮತ್ತು ತಾಯಿ ನಡೆದುಕೊಂಡು ಹೋಗುವಾಗ ಇನ್ನೋವಾ ಕಾರಿನಲ್ಲಿ ಬಂದ ಪತಿ ಪತ್ನಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಜೊತೆಗಿದ್ದ ತಾಯಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೌಡಾಯಿಸಿ ಮಗಳ ಕಿಡ್ನಾಪ್ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾಳೆ.
ಬಾಲಕನ ಜೀವವನ್ನೇ ತೆಗೆದ ಜೋಕಾಲಿ!
ಉಯ್ಯಾಲೆಯಲ್ಲಿ ಆಡುತ್ತಿದ್ದ ಸಂದರ್ಭ ಕುತ್ತಿಗೆಗೆ ಉಯ್ಯಾಲೆಯ ಹಗ್ಗ ಸಿಲುಕಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ಜು.16ರಂದು ಸಂಜೆ ವೇಳೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ.
ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬುವರ ಪುತ್ರ 8ನೇ ತರಗತಿ ವಿದ್ಯಾರ್ಥಿ ಶ್ರೀಷಾ (14) ಮೃತ ಬಾಲಕ. ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಅದರ ಹಗ್ಗ ಸಿಲುಕಿ ಕೆಳಗೆ ಬಿದ್ದಿದ್ದು, ಅದನ್ನು ನೋಡಿದ ಬಾಲಕನ ತಂಗಿ ತಂದೆಗೆ ತಿಳಿಸಿದ್ದು, ತಕ್ಷಣ ಬಾಲಕನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ದಾರಿಮದ್ಯೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಬುದ್ದಿಮಾಂದ್ಯಳ ಮೇಲೆ ಸಹೋದರನಿಂದಲೇ ಅತ್ಯಾಚಾರ!
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ, ಯುವತಿಯ ಸಹೋದರನ ಮೇಲೆ ಕೇಸು ದಾಖಲಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಮುಪ್ಪೇರಿಯಾ ಗ್ರಾಮದ ಬುದ್ದಿಮಾಂದ್ಯ ಯುವತಿಯ ಗರ್ಭವತಿಯಾಗಿದ್ದು ವಿಚಾರಣೆ ವೇಳೆ ಸಹೋದರನೇ ಅತ್ಯಾಚಾರವೆಸಗಿದ್ದು ಬೆಳಕಿಗೆ ಬಂದಿದೆ. ಯುವತಿಯ ತಾಯಿ ನೀಡಿದ ದೂರಿನಂತೆ ಯುವಕನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಆಗುಂಬೆ ಘಾಟಿ ಮೇಲೆ ನಿಂತಿದ್ದವನಿಗೆ ಗುದ್ದಿದ ಟ್ರಾಕ್ಟರ್
HOW TO APPLY : NEET-UG COUNSELLING 2023