ಕೊಪ್ಪ ವಿದ್ಯಾರ್ಥಿನಿ ಆತ್ಮಹತ್ಯೆ ತನಿಖೆಗೆ ಪಟ್ಟು!
– ಮೂಡಿಗೆರೆಯಲ್ಲಿ ಪತ್ತೆಯಾಯ್ತು ಕೊಳೆತ ಮೃತ ದೇಹ
– ಕಳಸ: ಸುಂದರನಾಗಬೇಕೆಂದು ದೇವರಿಗೆ ಪತ್ರ ಬರೆದ!
NAMMUR EXPRESS NEWS
ಕೊಪ್ಪ: ಮುರಾರ್ಜಿ ದೇಸಾಯಿ ವಸತಿಯಲ್ಲಿ ವಿದ್ಯಾ ರ್ಥಿನಿ ಅಮೂಲ್ಯಾ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಡಿಎಸ್ಎಸ್ ಚಂದ್ರ ಕಾಂತ್ ಎಸ್.ಕಾದೊಳ್ಳಿ ಬಣದ ಪ್ರಮುಖರು ಶಿರಸ್ತೇ ದಾರ್ ರಶ್ಮಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೊಪ್ಪದಲ್ಲಿ ಮನವಿ ಸಲ್ಲಿಸಿದ ಅವರು, ಶಾಲೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ತಿಂಗಳಿ ಗೊಮ್ಮೆ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಮಾಡಬೇಕು. ಮಾನಸಿಕವಾಗಿ ಯಾವುದೇ ತರಹದ ಹಿಂಸೆಗಳಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಯಿಸಿದರು. ಡಿ ಎಸ್ ಎಸ್ ಕಾರ್ಯದಕ್ಷರು ರಾಜಾಶಂಕರ್, ಸುರೇಶ್ ಹರಿಹರಪುರ ಇದ್ದರು.
ಅರ್ಧ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಕಾಫಿ ಎಸ್ಟೇಟ್ ನಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ತೋಟಕ್ಕೆ ತೆರಳಿದವರಿಗೆ ಮೃತದೇಹ ಪತ್ತೆಯಾಗಿದೆ.ಮೃತದೇಹ ಅರ್ಧ ಕೊಳೆತ ಸ್ಥಿತಿಯಲ್ಲಿದೆ.ಮೂಡಿಗೆರೆ ತಾಲ್ಲೂಕಿನ ಲೋಕವಳ್ಳಿ ಕಾಫಿ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ, ಮೃತ ದೇಹವನ್ನ ನೋಡಲು ಕಾಫಿತೋಟಕ್ಕೆ ಸ್ಥಳೀಯರು ದಂಡು ಆಗಮಿಸಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸುಂದರನಾಗಬೇಕೆಂದು ದೇವರಿಗೆ ಪತ್ರ ಬರೆದ!
ನಾನು ಒಬ್ಬ ಉತ್ತಮ ನಟ ಹಾಗೂ ಫ್ಯಾಷನ್ ಮಾಡೆಲ್ ಆಗಬೇಕೆಂದು ಇಚ್ಚಿಸಿದ್ದೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು. ಹೀಗೆ ದೇವರಿಗೆ ಭಕ್ತನೊಬ್ಬ ಬರೆದಿರುವ ಹರಕೆ ಪತ್ರ ವೈರಲ್ ಆಗಿದೆ. ಚಿಕ್ಕಮಗಳೂರಿನ ಕಳಸದ ಕಳಸೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ.
ಇಲ್ಲಿ ಭಕ್ತರು ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಹುಂಡಿಯಲ್ಲಿ ಕಾಣಿಕೆಯ ಜತೆಗೆ ಭಕ್ತರ ಹರಕೆ ಪತ್ರವೂ
ಲಭ್ಯವಾಗಿದೆ. ಹುಂಡಿ ಹಣ ಎಣಿಕೆ ವೇಳೆ ಅಧಿಕಾರಿಗಳಿಗೆ ಭಕ್ತನೊಬ್ಬನ ಹರಕೆ ಪತ್ರವು ನಗು ತರಿಸಿದೆ. ಗಿರಿಜಾದೇವಿಗೆ ರಕ್ಷಿತ್ ಎಂಬಾತ ಪತ್ರ ಬರೆದಿದ್ದಾನೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023