ಉಚಿತ ಬಸ್ ಸೀಟಿಗಾಗಿ ಮಹಿಳೆಯರ ಹೊಡೆದಾಟ!
– ಶಿಕ್ಷಕರ ಕಿರುಕುಳಕ್ಕೆ ಹತ್ತನೇ ಕ್ಲಾಸ್ ಬಾಲಕಿ ಬಲಿ?
– ಆಗುಂಬೆ ಘಾಟಿಯಲ್ಲಿ ಆಂಬುಲೆನ್ಸ್ ಪರದಾಟ!
NAMMUR EXPRESS NEWS
ರಾಯಚೂರು: ಮಹಿಳೆಯರು ಬಸ್ ಹತ್ತುವಾಗ ಡೋರ್, ಕಿಟಕಿಯ ಸರಳುಗಳು ಕಿತ್ತುಕೊಂಡು ಬಂದಿರುವ ಫೋಟೋ ಹಾಗು ವಿಡಿಯೋ ನಡುವೆ ಇದೀಗ ಸೀಟಿಗಾಗಿ ಮಹಿಳೆಯರು ಹೊಡದಾಡಿಕೊಂಡಿರುವ ಘಟನೆ ರಾಯಚೂರಲ್ಲಿ ನಡೆದಿದೆ.
ಸರ್ಕಾರಿ ಬಸ್ಸಿನಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಮೂವರು ಮಹಿಳೆಯರ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯೂ ಸಿರವಾರ-ರಾಯಚೂರು ನಡುವಿನ ಮಾರ್ಗದಲ್ಲಿ ನಡೆದಿದೆ.
ಸಿರವಾರದಿಂದ-ರಾಯಚೂರಿನತ್ತ ಹೊರಟ ಬಸ್ನಲ್ಲಿ ಕಳಿತುಕೊಳ್ಳುವ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಮೊದಲಿಗೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೂವರು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಶಿಕ್ಷಕನ ಪುತ್ರನ ಕಿರಿಕ್: ಬಾಲಕಿ ಆತ್ಮಹತ್ಯೆ!
ಬೆಂಗಳೂರು ನಗರದಲ್ಲಿ ಶಾಲೆಯ ಶಿಕ್ಷಕರ ಮತ್ತು ಶಿಕ್ಷಕರ ಪುತ್ರನ ಕಿರುಕುಳದಿಂದ ಬೇಸತ್ತ ನಗರದ ಖಾಸಗಿ ಶಾಲೆಯ ಎಸ್ಎಸ್ಎಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಟ್ಟಣದ ಪಾರ್ವತಿಪುರದ ನಿವಾಸಿ ಸಾರಾ (16) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ನಗರದ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದಳು. ಇನ್ನೂ ಮೃತ ವಿದ್ಯಾರ್ಥಿನಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ಸದಸ್ಯ ಇಬ್ಬರು ಶಿಕ್ಷಕರು ಮತ್ತು ಶಿಕ್ಷಕರ ಪುತ್ರ ಸೇರಿ ನಾಲ್ವರ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು
ದಾಖಲಿಸಿದ್ದಾರೆ. ಮಗಳ ಆತ್ಮಹತ್ಯೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಕಾರಣ. ಶಾಲೆಯ ಶಿಕ್ಷಕ ಖಮರ್ ಮತ್ತು ನಳಿನಿ ಎಂಬುವರು ನಮ್ಮ ಮಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಜೊತೆಗೆ ಶಿಕ್ಷಕ ಖಮರ್ ಅವರ ಮಗ ತನ್ನನ್ನು ಪ್ರೀತಿಸುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೊಸಕೋಟೆ ಪೊಲೀಸರು ಶಾಲೆಯ ಆಡಳಿತ ಮಂಡಳಿ, ಇಬ್ಬರು ಶಿಕ್ಷಕರು ಹಾಗೂ ವಿದ್ಯಾರ್ಥಿ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆಗುಂಬೆ ಘಾಟಿಯಲ್ಲಿ ಆಂಬುಲೆನ್ಸ್ ಪರದಾಟ!
ತೀರ್ಥಹಳ್ಳಿ ತಾಲೂಕು ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಆಗುಂಬೆಯಲ್ಲಿ ಭಾರೀ ಮಳೆ ಕಾರಣ ಆಂಬುಲೆನ್ಸ್ ಓಡಾಟಕ್ಕೆ ತೊಂದರೆಯಾಗಿದೆ.
ಶಿವಮೊಗ್ಗದಿಂದ ಮಣಿಪಾಲ್, ಮಣಿಪಾಲಿನಿಂದ ಶಿವಮೊಗ್ಗಕ್ಕೆ ಓಡಾಡುವ ಅಂಬ್ಯುಲೆನ್ಸ್ ಗಳು ಮಳೆಯಿಂದಾಗಿ ಗಂಟೆಗಟ್ಟಲೆ ವಾಹನ ಸಂಚಾರ ತೊಂದರೆಯಿಂದ ಪರದಾಡುವಂತಾಗಿತ್ತು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023