ಒಂದು ಕಡೆ ಡಬಲ್ ಮರ್ಡರ್: ಇನ್ನೊಂದೆಡೆ ಅಪಘಾತಕ್ಕೆ ಮೂವರು ಬಲಿ!
– ಉಡುಪಿ ಅಧಿಕಾರಿಗೆ 1ವರ್ಷ ಶಿಕ್ಷೆ, 1ಲಕ್ಷ ದಂಡ
– ಮೈಸೂರಲ್ಲಿ ಯುವಕನ ಕೊಲೆ
– ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ ಶಿಷ್ಯ!
NAMMUR EXPRESS NEWS
ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರು ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ
ಕೊಲೆಯಾದವರು ಗಜೇಂದ್ರ ಈರಪ್ಪ ಹುನ್ನೂರಿ (60) ಮತ್ತು ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ (45) ಎಂದು ತಿಳಿದುಬಂದಿದೆ.
ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೇ ಸಾವು!
ಬೈಕ್ ಹಾಗೂ ಸ್ಕೂಟಿ ನಡುವೆ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಚಿಂತಾಮಣಿ ಬಳಿಯಲ್ಲಿ ಭಾನುವಾರ ನಡೆದಿದೆ.
ಟೊಮ್ಯಾಟೋ ತುಂಬಿದ್ದ ಟೆಂಪೋವೊಂದು ಬೈಕ್, ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸವಾರರ ಮೇಲೆ ಹರಿದಿದೆ. ಟೆಂಪೋ ಹರಿದ ಪರಿಣಾಮ, ಬೈಕ್ ನಲ್ಲಿ ತೆರಳುತ್ತಿದ್ದಂತ ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಕೂಟಿಯಲ್ಲಿ ತೆರಳುತ್ತಿದ್ದಂತ ಮಹಿಳೆ ಕೂಡ ಭೀಕರ ಸರಣಿ ಅಪಘಾತದಲ್ಲಿ ಸಾವನ್ನಪ್ಪಿದ್ದರೆ. ಅಪಘಾತದ ವೇಳೆ ಸ್ಕೂಟಿಯಲ್ಲಿ ತೆರಳುತ್ತಿದ್ದಂತೆ ಮೂವರು ಮಕ್ಕಳು ಸುರಕ್ಷಿತವಾಗಿದ್ದಾರೆ.
ಉಡುಪಿ ಅಧಿಕಾರಿಗೆ 1ವರ್ಷ ಶಿಕ್ಷೆ, 1ಲಕ್ಷ ದಂಡ
ಅಧಿಕಾರಿಯೊಬ್ಬರು ತಮ್ಮ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ ಕಾರಣದಿಂದ ಜಿಲ್ಲಾ ಸತ್ರ ನ್ಯಾಯಾಲಯವು ಒಂದು ವರ್ಷ ಸೆರೆಮನೆ ವಾಸ ಹಾಗೂ ಒಂದು ಲಕ್ಷ ದಂಡ ವಿಧಿಸಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿಕೊಂಡ ಅಧಿಕಾರಿ ಅಬ್ದುಲ್ ಅಜೀಜ್ ಅವರು ಕುಂದಾಪುರ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಗಳ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ ಅಂದಿನ ಪಿ.ಐ.ಕೆ.ಯು. ಬೆಳ್ಳಿಯಪ್ಪ ಅವರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಬೆಳ್ಳಿಯಪ್ಪ ಸಂಗ್ರಹಿಸಿದ ಮಾಹಿತಿ ಪ್ರಕಾರ, ಮಂಗಳೂರು ಪೊಲೀಸ್ ವಿಭಾಗದ ಎಸ್.ಪಿ. ಧರ್ಮರಾಜ್ ಎ.ಜಿ ರವರು ಪ್ರಕರಣ ದಾಖಲಿ, ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆಪಾದಿತ ಮನೆ ಶೋಧ ನಡೆಸಲು ಸರ್ಚ್ ವಾರೆಂಟ್ ಪಡೆಸು ಎಸ್.ಪಿ. ಹಾಗೂ ಉಡುಪಿಯ ಪ್ರಭಾರ ಡಿ.ವೈ.ಎಸ್ಪಿ, ರವರು ಆಪಾದಿತ ಸರಕಾರಿ ಅಧಿಖಾರಿಯವರ ಮನೆ ಹಾಗೂ ಬ್ಯಾಂಕ್ ಲಾಕರ್ಗಳನ್ನು ಪರಿಶೀಲನೆ ನಡೆಸಿರುತ್ತಾರೆ.
ಪ್ರಕರಣದ ಮುಂದಿನ ತನಿಖೆ ಭಾಗವಾಗಿ ಲೋಕಾಯುಕ್ತ ಡಿ.ವೈ.ಎಸ್.ಪಿ. ಪ್ರಭುದೇವ ಬಿ. ಮಾನೆ, ಆರೋಪಿ ಸರಕಾರಿ ಅಧಿಕಾರಿಯು ಹೆಚ್ಚಿನ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ, ತನಿಖೆಯನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಿದ್ದಾರೆ. ಕೊನೆಯದಾಗಿ ಆರೋಪಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುತ್ತಾರೆ.
ಬ್ರಿಗೇಡ್ ಕಾರ್ಯಕರ್ತನ ಕೊಲೆ.!
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ಬೆಳೆದ ಪರಿಣಾಮ ಯುವ ಬ್ರಿಗೇಡ್ ಕಾರ್ಯಕರ್ತನೊಬ್ಬನ ಕೊಲೆಯಾದ ಘಟನೆ ತಿ.ನರಸೀಪುರ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ.ಯುವ ಬ್ರಿಗೇಡ್ ಕಾರ್ಯಕರ್ತನಾಗಿದ್ದ ಈತ ತಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ .ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಇದನ್ನೇ ಮನದಲ್ಲಿ ಇಟ್ಟುಕೊಂಡು ಬಾಟಲಿಯಿಂದ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ ಶಿಷ್ಯ!
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರು ಮಠದ ಕಿರಿಯ ಸ್ವಾಮೀಜಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರು ಶಿವಪ್ಪ ದೇವರು(60) ಎಂದು ತಿಳಿದುಬಂದಿದೆ. ಇವರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಎನ್ನಲಾಗಿದೆ. ಇನ್ನು ಟಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಬಳಿ ಇರುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕಲಿವೂರು ಗ್ರಾಮದವರಾದ ಇವರು ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ವಾಮೀಜಿ ಶಿಷ್ಯರಾಗಿದ್ದ ಇವರು ಮಠಕ್ಕೆ ಬರುವ ಭಕ್ತಾದಿಗಳ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರು.ಆದರೆ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023