ಪಬ್ಜಿ ಸ್ನೇಹ: 4 ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದ ಪಾಕ್ ಮಹಿಳೆ!
– ಭಾರತೀಯನ ಮದುವೆಯಾಗಿ ದಾಂಪತ್ಯ
– ಜಮ್ಮು ಕಾಶ್ಮೀರದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಸೈನಿಕರು!
– ಅಮರನಾಥ ಯಾತ್ರೆಗೆ ಹೋದ ಕನ್ನಡಿಗರು ಸಂಕಷ್ಟದಲ್ಲಿ!
NAMMUR EXPRESS NEWS
ನವದೆಹಲಿ: ಜನಪ್ರಿಯ ಆನ್ಲೈನ್ ಗೇಮ್ ಪಬ್ಜಿ ಮೂಲಕ ಭೇಟಿಯಾದ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪ್ರೇಮಕಥೆಯು ಇಬ್ಬರನ್ನೂ ಜೈಲು ಸೇರುವಂತೆ ಮಾಡಿದೆ. ಅಲ್ಲದೆ ಪಬ್ಜಿ ಹಾಗೂ ಅನೇಕ ಆನ್ಲೈನ್ ಗೇಮ್ ಈಗ ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಭಂಗ ತರುವ ಕೃತ್ಯಗಳು ಹೆಚ್ಚಿವೆ.
27 ವರ್ಷದ ಸೀಮಾ ಗುಲಾಮ್ ಹೈದರ್,22 ವರ್ಷದ ಸಚಿನ್ ಮೀನಾ ಅವರನ್ನು ಒಂದೆರಡು ವರ್ಷಗಳ ಹಿಂದೆ ವರ್ಚುವಲ್ ಗೇಮಿಂಗ್ ಪ್ಲಾಟ್ಫಾರ್ಮ್ ಪಬ್ಜಿ ಮೂಲಕ ಭೇಟಿಯಾಗಿದ್ದಾರೆ ಮತ್ತು ಭಾರತದಲ್ಲಿ ನೆಲೆಸಲು ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿಳಿದಿದ್ದಾಳೆ. ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಆಕೆ ಮತ್ತು ಆಕೆಯ ಪ್ರೇಮಿ ಉತ್ತರ ಪ್ರದೇಶದ ನಗರವಾದ ಗ್ರೇಟ ನೋಯ್ಡಾದಲ್ಲಿ ಒಂದು ತಿಂಗಳಿನಿಂದ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಇಬ್ಬರನ್ನೂ ಬಂಧಿಸಲಾಗಿದೆ. ನ್ಯಾಯಾಲಯ ಅವರನ್ನು 14 ದಿನಗಳ ಕಾಲ ಜೈಲಿನಲ್ಲಿ ಇರಿಸಿದೆ. ಮಹಿಳೆಯ ಮಕ್ಕಳು ತಮ್ಮ ತಾಯಿಯೊಂದಿಗೆ ಇದ್ದಾರೆ. ಮದುವೆಯಾಗಿ ಒಟ್ಟಿಗೆ ವಾಸಿಸಲು ಬಯಸುವುದಾಗಿ ಈ ಇಬ್ಬರೂ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದವಾರ ಭಾರತದಲ್ಲಿ ಸೀಮಾ ಹೈದರ್ ವಾಸಕ್ಕಾಗಿ ಸಲಹೆ ಕೇಲಲು ಸ್ಥಳೀಯ ವಕೀಲರನ್ನು ಭೇಟಿಯಾದ ಸಂದರ್ಭದಲ್ಲಿ ಆಕೆ ಮತ್ತು ಆಕೆಯ ಮಕ್ಕಳ ಪಾಕಿಸ್ತಾನಿ ಪಾಸ್ ಪೋರ್ಟ್ ಕಂಡು ಬೆಚ್ಚಿದ ವಕೀಲ, ಪೊಲೀಸರಿಗೆ ತಿಳಿಸಿದ್ದಾರೆ. ವಕೀಲರ ಸೂಚನೆ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಅದಾಗಲೇ ಪಾಕಿಸ್ತಾನದ ಸಿಂಗ್ ಪ್ರಾಂತ್ಯದ ವ್ಯಕ್ತಿಯನ್ನು ಮದುವೆಯಾಗಿದ್ದ ಸೀಮಾ ಹೈದರ್ ಆತ ತನಗೆ ಕಿರುಕುಳ ನೀಡುತ್ತಿದ್ದ ಮತ್ತು ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂದಿದ್ದಾಳೆ. ಆದರೆ ಆಕೆಯ ಗಂಡ ಇದನ್ನು ಅಲ್ಲಗಳೆದಿದ್ದಾನೆ. ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹಣಕ್ಕಾಗಿ ತನ್ನ ಹೆತ್ತವರ ಜಮೀನು ಮಾರಿದ್ದಾಳೆ. ಎನ್ನಲಾಗಿದೆ. ಈಕೆಯ ಗಂಡ ಆನ್ ಲೈನ್ ಆಟವನ್ನು ದೂರಿದ್ದು, ತನ್ನ ಹೆಂಡತಿ ಮತ್ತು ಮಕ್ಕಳು ಪಾಕಿಸ್ತಾನಕ್ಕೆ ಹಿಂತಿರುಗುವಂತೆ ಕೋರಿದ್ದಾನೆ.
ಜಮ್ಮು ಕಾಶ್ಮೀರದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಸೈನಿಕರು!
ದೇಶದ ಹಲವು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಇಬ್ಬರು ಭಾರತೀಯ ಸೇನೆಯ ಸೈನಿಕರು ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಅವರಿಬ್ಬರ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮಳೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಸೈನಿಕರಿಬ್ಬರು ನಾಯಬ್ ಸುಬೇದಾರ್ ಕುಲದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಇಬ್ಬರೂ ಸೈನಿಕರು ಸುರನ್ಕೋಟೆ ಪ್ರದೇಶದ ಪೋಷನಾ ಎಂಬಲ್ಲಿ ಡೋಗ್ರಾ ನಾಲಾವನ್ನು ದಾಟುತ್ತಿದ್ದಾಗ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಿಂದ ಅವರು ಕೊಚ್ಚಿಹೋಗಿದ್ದಾರೆ. ಪೂಂಚ್ನ ದೂರದ ಪ್ರದೇಶದಲ್ಲಿ ಗಸ್ತು ತಿರುಗುವ ಪ್ರದೇಶದ ಪ್ರಾಬಲ್ಯದ ಸಮಯದಲ್ಲಿ ಪೋಷಣಾ ನದಿ ದಾಟುತ್ತಿದ್ದಾಗ ಅವಘಡ ಸಂಭವಿಸಿದೆ.
ಅಮರನಾಥ ಯಾತ್ರೆ ಸ್ಥಗಿತ: ಕನ್ನಡಿಗರು ಸಂಕಷ್ಟದಲ್ಲಿ
ಅಮರನಾಥ ಯಾತ್ರೆ ಮೇಲೂ ಪ್ರತಿಕೂಲ ಹವಾಮಾನ ಪರಿಣಾಮ ಬೀರಿದೆ. ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಯಾತ್ರೆಯು ಜುಲೈ 1 ರಂದು ಪ್ರಾರಂಭವಾಯಿತು ಮತ್ತು ಆಗಸ್ಟ್ 31 ರವರೆಗೆ ಮುಂದುವರೆಯಬೇಕಿತ್ತು. ಹೀಗಾಗಿ ಮಳೆಯ ಪ್ರಭಾವದಿಂದ ದೇವರ ದರ್ಶನಕ್ಕೆಂದು ಭಕ್ತಾಧಿಗಳಿಗೆ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ 84 ಮಂದಿ ಕನ್ನಡಿಗರು ಸೇರಿ ಸಾವಿರಾರು ಮಂದಿ ಹಿಮ ಪ್ರದೇಶದಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023