ಅಪ್ರಾಪ್ತಳ ಮೇಲೆ ಪದೇ ಪದೇ ಅತ್ಯಾಚಾರ!
– ಕರಾವಳಿಯಲ್ಲಿ ಮತ್ತೊಂದು ಹೇಯ ಘಟನೆ
– ಮಂಗಳೂರು: 5ನೇ ಮಹಡಿಯಿಂದ ಬಿದ್ದು ಸಾವು!
– ಮಗಳ ಮೇಲೆ ಅತ್ಯಾಚಾರ-ತಂದೆ ಬಂಧನ
– ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಜೀವ ಹೋಯಿತು
– ಬೈಕ್ ಕೀ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ..!
NAMMUR EXPRESS NWES
ಮಂಗಳೂರು: ಅಪ್ರಾಪ್ತ ವಯಸ್ಕಳ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ ಎನ್ನಲಾಗಿದ್ದು ಮೂವರು ಬಂಧಿತ ಆರೋಪಿಗಳನ್ನು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಳಾಡ (30), ಸುಕುಮಾರ ಬೆಳ್ಳಾಡ (28) ಬಂಧಿಸಲಾಗಿದೆ. ಈ ಮೂವರು, 2019ರಿಂದ ನಿರಂತರವಾಗಿ ವಿವಿಧ ಕಡೆ ಅತ್ಯಾಚಾರ ಎಸಗಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ. ಸದ್ಯ ಇವರ ವಿರುದ್ಧ ಪೋಕ್ಸ್ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಲು ಜಾರಿ 5ನೇ ಮಹಡಿಯಿಂದ ಬಿದ್ದು ಸಾವು!
ಮಂಗಳೂರು ನಗರದ ಕದ್ರಿ ಶಿವಭಾಗ್ನಲ್ಲಿರುವಅಪಾರ್ಟ್ಮೆಂಟ್ ಒಂದರ ಐದನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೂಲತಃ ಅಡ್ಯಾರ್ ನಿವಾಸಿಯಾಗಿದ್ದು, ಸದ್ಯ ಕದ್ರಿ ಶಿವಭಾಗ್ ನಲ್ಲಿ ವಾಸವಾಗಿದ್ದ ಸಮಯ್ (21) ಸಾವನ್ನಪ್ಪಿದ ಮೆಡಿಕಲ್ ವಿದ್ಯಾರ್ಥಿ ಭಾನುವಾರ ಮುಂಜಾನೆ ಶಿವಭಾಗ್ ಅಪಾರ್ಟ್ಮೆಂಟ್ನ ತಮ್ಮ ಫ್ಲಾಟ್ನ ಬಾಲ್ಕನಿಯಲ್ಲಿ ಸಮಯ್ ಅವರು ಓದುತ್ತಿದ್ದಾಗ ಅವರ ತಾಯಿ ಕಾರು ವಾಷ್ ಮಾಡಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಹೋಗಿದ್ದರು.ಈ ವೇಳೆ ಸಮಯ್ ಅವರು ಬಾತ್ರೂಂಗೆ ಹೋಗಿ ಬಂದು, ಬಳಿಕ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿರುವ ತನ್ನ ತಾಯಿ ಬಳಿ ಕಾರು ತೊಳೆಯಲು ಬಕೆಟ್ ಕೊಂಡು ಹೋಗಿದ್ದೀರಾ ಎಂದು ಬಾಲ್ಕನಿಯಿಂದ ಕೇಳಿದ್ದಾರೆ.ಈ ವೇಳೆ ಬಾಲ್ಕನಿಯಿಂದ ಬಾಗಿದ್ದ ಅವರು ಜಾರಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಮಳೆ ನೀರಿನ ಹನಿಯಿಂದ ಒದ್ದೆಯಾಗಿದ್ದ ಬಾಲ್ಕನಿಯಿಂದ ಬಾಗಿದ ಕಾರಣ ಅವರು ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.
ಮಗಳ ಮೇಲೆ ಅತ್ಯಾಚಾರ-ತಂದೆ ಬಂಧನ
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಬೀದರ್ ಜಿಲ್ಲೆ ಬಸವಕಲ್ಯಾಣ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಲಾಕ್ ಡೌನ್ ನಲ್ಲಿ ಶಾಲೆಗೆ ರಜೆ ಘೋಷಿಸಿದ ನಂತರ ಮನೆಯಲ್ಲಿ ಯಾರೂ ಇಲ್ಲದಾಗ ಬಲವಂತವಾಗಿ ಅತ್ಯಾಚಾರ ನಡೆಸಿ, ಯಾರಿಗೂ ವಿಷಯ ಹೇಳದಂತೆ ಬಾಲಕಿಗೆ ಬೆದರಿಕೆಯೊಡ್ಡಿದ. ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿದ್ದು, ದೂರಿನ ಮೇರೆಗೆ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.
ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಬಿಜ್ಜವಾರ ಗ್ರಾಮದ ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಮೃತಪಟ್ಟಿದ್ದಾರೆ.
ಕೆರೆಕೋಡಿ ನಿವಾಸಿ ರಮೇಶ್ (26), ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜರುಗಹಳ್ಳಿ ಗ್ರಾಮದ ಸಹನಾ (22) ಮೃತರು. ದೇವನಹಳ್ಳಿಯ ರೆಡ್ಡಿ ಎಲೆಕ್ಟ್ರಾನಿಕ್ಸ್ ನಲ್ಲಿ ವ್ಯವಸ್ಥಾಪಕರಾಗಿ ಆಗಿ ಕೆಲಸ ಮಾಡುತ್ತಿದ್ದ ರಮೇಶ್, ಜರುಗಹಳ್ಳಿಯ ಸಹನಾ ಅವರನ್ನು ಪ್ರೀತಿಸಿ ಐದು ತಿಂಗಳ ಹಿಂದೆ ಮದುವೆಯಾಗಿದ್ದರು. ಐದು ದಿನಗಳ ಹಿಂದೆ ಬಿಜ್ಜವಾರದ ಸಂಬಂಧಿಕರ ಮನೆಗೆ ಬಂದಿದ್ದರು. ಭಾನುವಾರ ಬಿಜ್ಜವಾರದ ಅಶ್ವಥನಾರಾಯಣ ಎಂಬುವವರ ತೋಟದ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ಮೃತದೇಹಗಳು ಪತ್ತೆಯಾಗಿದ್ದು, ತಕ್ಷಣ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೈಕ್ ಕೀ ವಿಚಾರಕ್ಕೆ ಕಿರಿಕ್, ಕೊಲೆಯಲ್ಲಿ ಅಂತ್ಯ..!
ಕೇವಲ ಬೈಕ್ ಕೀಗಾಗಿ ಶುರುವಾದ ಜಗಳ ತೀವ್ರಗೊಂಡು ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ತಿಲಕ್ ಚಂದ್ರನನ್ನ ಹತ್ಯೆ ಮಾಡಿ ಸಿದ್ದರಾಜು ಎಂಬಾತ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಿಲಕ್ ಚಂದ್ರ ಕಳೆದ ಏಳು ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅನಾಥನಾಗಿದ್ದ ಈತ ಪೋನ್ ಬಳಸುತ್ತಿರಲಿಲ್ಲ. ಆರೋಪಿ ಸಿದ್ದರಾಜು ಮಂಡ್ಯ ಮೂಲದವನಾಗಿದ್ದು ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಸೇರಿ ಒಟ್ಟು ಆರು ಜನ ಒಂದೇ ರೂಮಿನಲ್ಲಿ ವಾಸ್ತವ್ಯ ಹೂಡಿದ್ದರು.
ಕೆಲಸಗಾರರಿಗೆ ಅನುಕೂಲವಾಗಲೆಂದು ಮಾಲೀಕರು ಬೈಕ್ ನೀಡಿದ್ದರು. ಒಂದೇ ಬೈಕಿನಲ್ಲಿ ಇಬ್ಬರು ಪ್ರತಿನಿತ್ಯ ಕೆಲಸ ಬರುತ್ತಿದ್ದರು. ತಿಲಕ್ ಕೀ ಕೊಡಲು ನಿರಾಕರಿಸಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಕೋಪದಲ್ಲಿ ಮನೆಯಲ್ಲಿದ್ದ ಚಾಕುವಿನಿಂದ ತಿಲಕ್ ಗೆ ಚುಚ್ಚಿ ಹತ್ಯೆ ಮಾಡಿ ಪೊಲೀಸರ ಮುಂದೆ ಆರೋಪಿ ಶರಣಾಗತಿಯಾಗಿದ್ದಾನೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
HOW TO APPLY : NEET-UG COUNSELLING 2023