ಕ್ರೈಂ ಫೈಲ್: ನಮ್ಮೂರ್ ಎಕ್ಸ್ ಪ್ರೆಸ್
ಮದುವೆಗೆ ವಧು ಸಿಗಲಿಲ್ಲ ಯುವಕ ಆತ್ಮಹತ್ಯೆ!
– ದಾವಣಗೆರೆಯಲ್ಲಿ ಟಿಪ್ಪರ್ ಹರಿದು ಮಗು ಸಾವು!
– ಸುತ್ತಿಗೆಯಿಂದ ಹೊಡೆದು ಮಕ್ಕಳನ್ನೇ ಕೊಂದ ತಂದೆ.!
– ತನ್ನ ಅಂಗಡಿ ಓಪನ್ ದಿನವೇ ಹೆಣವಾದ ಯುವಕ
– ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಪತಿ
– ಬಂಟ್ವಾಳದಲ್ಲಿ ಇಬ್ಬರು ಬಾಲಕಿಯರು ನಾಪತ್ತೆ?
NAMMUR EXPRESS NEWS
ಬ್ಯಾಡಗಿ( ಹಾವೇರಿ): ಮದುವೆಗೆ ವಧು ಸಿಗಲಿಲ್ಲ ಎಂಬ ಕಾರಣಕ್ಕೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಕೃಷಿಕನೊಬ್ಬ ಬುಧವಾರ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ.
ಮಂಜು ರುದ್ರಪ್ಪನಾಗನೂರ(36)ಮೃತ ಯುವಕ. ಕೃಷಿ ಮಾಡಿಕೊಂಡಿದ್ದ ಮಂಜು ಹಲವು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದ. ಆದರೆ, ಹುಡುಗಿ ಸಿಕ್ಕಿರಲಿಲ್ಲ. ತಂದೆ-ತಾಯಿಗೆ ಅಡುಗೆ ಮಡಲು ಯಾರೂ ಇಲ್ಲ ಎಂದು ನೊಂದುಕೊಂಡಿದ್ದ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಟಿಪ್ಪರ್ ಹರಿದು ಮಗು ಸಾವು!: ಅಂಗನವಾಡಿ ಮುಗಿಸಿ ಅಜ್ಜಿಯೊಂದಿಗೆ ಮನೆಗೆ ತೆರಳುತ್ತಿದ್ದ ಮೂರು ವರ್ಷದ ಮಗುವಿನ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ವರದಿಯಾಗಿದೆ.
ಕುಂದುವಾಡ ಗ್ರಾಮದ ಗಣೇಶ್ ಅವರ ಪುತ್ರಿ ಚರಸ್ವಿ (3)ವರ್ಷ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಅಂಗನವಾಡಿ ಮುಗಿಸಿ ಮಧ್ಯಾಹ್ನ ತನ್ನ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ ಬಾಲಕಿ ತಲೆ ಮೇಲೆ ಟಿಪ್ಪರ್ ಲಾರಿ ಹರಿದಿದೆ. ಚಕ್ರ ತಲೆ ಮೇಲೆ ಹರಿದ ರಭಸಕ್ಕೆ ಮಗು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆನ್ನಲಾಗಿದೆ.
ಜ್ಯುವೆಲರಿ ಶಾಪ್ ಉದ್ಘಾಟನೆಯ ದಿನವೇ ಶವವಾದ ಯುವಕ:
ತನ್ನ ಜುವೆಲ್ಲರಿ ಶಾಪ್ ಉದ್ಘಾಟನೆಯ ತಯಾರಿಯಲಿದ್ದ ಯುವಕನೋರ್ವನ ಮೃತದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಜೂ.22ರ ಗುರುವಾರ ಕಂಡುಬಂದಿದೆ.ಕಡಬ ನಿವಾಸಿ ದಯಾನಂದ ಆಚಾರ್ಯ ಅವರ ಪುತ್ರ ನಾಗಪ್ರಸಾದ್ ಮೃತಪಟ್ಟ ಯುವಕ. ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದರು. ಆದರೆ ಬೆಳಿಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಕೆಂಪುಹೊಳೆ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.
ಮಲಗಿರುವಾಗ ಪತ್ನಿಯ ತಲೆ ಮೇಲೆ ಕಲ್ಲು ಎತ್ತಾಕಿ ಬರ್ಬರ ಹತ್ಯೆ ಮಾಡಿದ ಪತಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದಲ್ಲಿ ಮನೆಯಲ್ಲಿ ಮಲಗಿರುವಾಗ ಪತಿಯೇ ತನ್ನ ಪತ್ನಿಯ ತಲೆ ಮೇಲೆ ದೊಡ್ಡ ಕಲ್ಲು ಎತ್ತಾಕಿ ಕೊಲೆಗೈದ ಘಟನೆ ನಡೆದಿದೆ
30 ವರ್ಷದ ರತ್ನವ್ವ ಮಲ್ಲಪ್ಪ ಉಪ್ಪಾರ ಕೊಲೆಯಾದ ದುರ್ದೈವಿಯಾಗಿದ್ದು, ಮಲ್ಲಪ್ಪ ಉಪ್ಪಾರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ರತ್ನವ್ವ ಮಲಗಿಕೊಂಡಿದ್ದ ವೇಳೆ ಪತಿ ಮಲ್ಲಪ್ಪ ತಲೆ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಕೊಲೆಗೆ ಕಾರಣ ಏನೆಂಬುದು ತಿಳಿದು
ಬಂದಿಲ್ಲ.
ಸುತ್ತಿಗೆಯಿಂದ ಹೊಡೆದು ತನ್ನ ಇಬ್ಬರು ಮಕ್ಕಳನ್ನೇ ಕೊಂದ ಪಾಪಿ ತಂದೆ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಆರೋಪಿ ಶ್ರೀಕಾಂತ ತನ್ನ ಮಕ್ಕಳಾದ ಅದಿತ್ಯ (4) ಮತ್ತು ಅಮೂಲ್ಯ (2) ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಗಾಣಗಾಪುರದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಆರೋಪಿ ತನ್ನ ಪತ್ನಿ ಲಕ್ಷ್ಮಿ ಎಂಬಾಕೆಗೂ ಚೂರಿಯಿಂದ ಇರಿದು ಕಲ್ಲಿನಿಂದ ಜಜ್ಜಿದ್ದಾನೆ. ಲಕ್ಷ್ಮಿಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಶ್ರೀಕಾಂತ್ ನಾಪತ್ತೆಯಾಗಿದ್ದಾನೆ.
ಇಬ್ಬರು ಬಾಲಕಿಯರು ನಾಪತ್ತೆ
ತಂದೆಯ ಮನೆಯಿಂದ ತಾಯಿ ಮನೆಗೆ ಎಂದು ಹೋದ ಅಪ್ರಾಪ್ತ ಬಾಲಕಿ ಸಹಿತ ಅಕ್ಕ ತಂಗಿ ಇಬ್ಬರು ಬಾಲಕಿಯರು ಕಾಣೆಯಾದ ಘಟನೆ ಬಂಟ್ವಳ ತಾಲೂಕು ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಬೆರ್ಕಳ ಎಂಬಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪದ ಬೆರ್ಕಳ ನಿವಾಸಿ ಲವೀನಾ ಅವರ ಹೆಣ್ಮಕ್ಕಳಾದ ಕು.ಶ್ರೇಯಾ (18) ಇವಳ ತಂಗಿ ಅಪ್ರಾಪ್ತ ಬಾಲಕಿ ಇಬ್ಬರು ಕಾಣೆಯಾದ ಯುವತಿಯರು.
ಪ್ಯಾರಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಳ್ತಂಗಡಿ ತಾಲೂಕು ನೆರಿಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.ನೆರಿಯ ಗ್ರಾಮದ ನೆಕ್ಕರೆಯ ನಿವಾಸಿ ಆದೀರಾ (19) ಸಾವನ್ನಪ್ಪಿದ್ದ ಯುವತಿ. ಯುವತಿ ತಂದೆ ಹಾಗೂ ಸಹೋದರರೊಂದಿಗೆ ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿದ್ದು,ಮೊದಲನೇ ವರ್ಷದ ಪ್ಯಾರಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು.ಜೂ 18 ರಂದು ಆದಿತ್ಯವಾರ ರಾತ್ರಿ ಊಟ ಮಾಡಿ ಒಂದು ಕೋಣೆಯಲ್ಲಿ ಅದಿರಾ ಮಲಗಿದ್ದು ಜೂನ್ 19 ಸೋಮವಾರ ಬೆಳಗ್ಗೆ 8 ಗಂಟೆಗೆ ಎದ್ದು ಸಹೋದರ ನರೇಂದ್ರ ನೋಡುವಾಗ ಅದಿರಾ ತನ್ನ ಚೂಡಿದಾರ್ ಶಾಲಿನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು ತಕ್ಷಣ ತಂದೆಗೆ ತಿಳಿಸಿದ್ದಾರೆ.
ಅವರು ಬಂದು ಸ್ಥಳೀಯರ ಸಹಕಾರದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮಗಳನ್ನು ಕೊಂಡು ಹೋಗಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ಪರೀಕ್ಷಿಸಿದ ವೈದ್ಯರು ಯುವತಿ ಮೃತ ಪಟ್ಟಿರುವುದಾಗಿ ಧೃಡಪಡಿಸಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023